ಬೆಂಗಳೂರು ಡೇಟಿಂಗ್ ಆ್ಯಪ್‌ನಲ್ಲಿ ಹನಿಟ್ರ್ಯಾಪ್: ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ ಸಂಗೀತಾ ಗ್ಯಾಂಗ್!

Published : Jul 28, 2025, 01:28 PM IST
Bamble Dating App Fraud Bengaluru Techie

ಸಾರಾಂಶ

ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಪೊಲೀಸರಿಂದ 6 ಮಂದಿ ಆರೋಪಿಗಳ ಬಂಧನ. ಬೇಕಿಂಗ್ ಸೋಡಾವನ್ನು ಡ್ರಗ್ಸ್ ಎಂದು ಬಿಂಬಿಸಿ ಹಣ ದೋಚಿದ್ದಾರೆ.

ಬೆಂಗಳೂರು (ಜು.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಡೇಟಿಂಗ್ ಆ್ಯಪ್‌ ಮೂಲಕ ಪರಿಚಯ ಮಾಡಿಕೊಂಡ ಯುವತಿಯೊಬ್ಬಳು, ಆತನನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದಿದ್ದಾಳೆ. ಆಕೆ ಬ್ಯಾಗ್‌ನಲ್ಲಿ ಅಡುಗೆ ಸೋಡಾದ ಪ್ಯಾಕೆಟ್ ಒಂದನ್ನು ಇಟ್ಟುಕೊಂಡಿದ್ದು, ಅಲ್ಲಿಗೆ ದಾಳಿ ಮಾಡುವ ನೆಪದಲ್ಲಿ ಬಂದ ಯುವಕರ ಗುಂಪೊಂದು ನೀವು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದೀರಿ ಎಂದು ಆರೋಪ ಮಾಡಿ ಥಳಿಸಿ, ನಿಮ್ಮನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಸಿ ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರು: ಶರಣಬಸ್ಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಶೇಕ್, ಬೀರ್ ಬಲ್ ಮತ್ತು ಸಂಗೀತಾ ಎಂಬುವರನ್ನು ಬಂಧಿಸಲಾಗಿದ್ದು, ಇವರು ಸೇರಿ ಯೋಜಿತವಾಗಿ ದರೋಡೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟೆಕ್ಕಿ ರಾಕೇಶ್ ರೆಡ್ಡಿ ಎಂಬವರು 'ಪಂಬಲ್' ಎಂಬ ಡೇಟಿಂಗ್ ಆ್ಯಪ್‌ ಮೂಲಕ ಸಂಗೀತಾ ಎಂಬ ಯುವತಿಗೆ ಪರಿಚಿತರಾಗಿದ್ದರು. ಸಂಗೀತಾ ತನ್ನ ಯಲಹಂಕದ ಮನೆಯಲ್ಲಿಗೆ ಆಹ್ವಾನಿಸಿ, ಲೈಂಗಿಕ ಕ್ರಿಯೆಗೆ ಪ್ರಲೋಭನೆ ನೀಡಿದ್ದಾಳೆ. ಈ ವೇಳೆ, ತನ್ನ ಬ್ಯಾಗ್‌ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡು, ಇದು ಡ್ರಗ್ಸ್ ಎಂದು ಆತನ ಮುಂದೆ ನಾಟಕವಾಡಿದ್ದಾಳೆ. ಇನ್ನೊಂದೆಡೆ, ಆಗಲೇ ತಯಾರಿ ಮಾಡಿಕೊಂಡಿದ್ದ ಆಕೆಯ ಸಹಚರರು ಆ ಮನೆಯೊಳಕ್ಕೆ ನುಗ್ಗಿ ರಾಕೇಶ್ ರೆಡ್ಡಿಗೆ ಹಲ್ಲೆ ಮಾಡಿದ್ದಾರೆ. ನಂತರ, 'ಡ್ರಗ್ ಪಾರ್ಟಿ ಮಾಡ್ತಿದ್ದೀಯ' ಎಂದು ಬೆದರಿಸಿ, ಪೊಲೀಸರಿಗೆ ಹಿಡಿದುಕೊಡುವುದಾಗಿ ಧಮಕಿ ಹಾಕಿದ್ದಾರೆ.

ಹಣ ಕೊಡು ಅಥವಾ ಜೈಲು ಹೋಗು: ಈ ಬೆದರಿಕೆಯ ನಡುವೆ, 6 ಮಂದಿ ಸೇರಿ ಟೆಕ್ಕಿಯಿಂದ 2 ಲಕ್ಷ ರೂಪಾಯಿ ಹಣವನ್ನು ಬಲವಂತವಾಗಿ ಪಡೆದಿದ್ದಾರೆ. ದೂರು ನೀಡಿದ ರಾಕೇಶ್ ರೆಡ್ಡಿಯ ಹೇಳಿಕೆಯಂತೆ ಯಲಹಂಕ ಪೊಲೀಸರು ತನಿಖೆ ಆರಂಭಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಯಶಸ್ವಿಯಾಗಿ ಈ ಗ್ಯಾಂಗ್‌ನ ಇಡೀ ಜಾಲವನ್ನು ಬಯಲಾಗಿಸಿ, ಆರು ಮಂದಿಯನ್ನು ಬಂಧಿಸಿರುವ ಯಲಹಂಕ ಪೊಲೀಸರು ಇದೀಗ ಮತ್ತಷ್ಟು ಜನ ಗ್ಯಾಂಗ್‌ ಸದಸ್ಯರು ಇದ್ದಾರಾ ಎಂಬ ಹಿನ್ನಲೆಯಲ್ಲಿ ತನಿಖೆ ಮುಂದುವರೆಸಿದ್ದಾರೆ.

ಡೇಟಿಂಗ್ ಆ್ಯಪ್‌ ಬಳಸಿಕೊಂಡು ಈ ರೀತಿಯ ಹನಿಟ್ರ್ಯಾಪ್‌ ಮೂಲಕ ದರೋಡೆ ಮಾಡಿದ ಈ ಗ್ಯಾಂಗ್‌ ವಿರುದ್ಧ ಇನ್ನಷ್ಟು ಜನರನ್ನು ಇವರು ವಂಚನೆ ಮಾಡಿ, ಮೋಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸಾರ್ವಜನಿಕರನ್ನು ಎಚ್ಚರಿಕೆ ವಹಿಸಲು ಹಾಗೂ ಇಂತಹ ಪ್ರಕರಣಗಳಲ್ಲಿ ತಕ್ಷಣವೇ ದೂರು ನೀಡಲು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ