ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆ ಸಾವು ಪ್ರಕರಣಕ್ಕೆ ಹೊಸ ತಿರುವು

Kannadaprabha News   | Kannada Prabha
Published : Jul 28, 2025, 08:23 AM IST
Spandana

ಸಾರಾಂಶ

ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆಯ ಆತ್ಮಹ* ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆ ಮಹಿಳೆ ನೇಣಿ* ಬಲಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.

ಪೀಣ್ಯ ದಾಸರಹಳ್ಳಿ : ಭೀಮನ ಅಮಾವಾಸ್ಯೆಯಂದು ಗಂಡನ ಪೂಜೆ ಬಳಿಕ ಮಹಿಳೆಯ ಆತ್ಮಹ* ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಆ ಮಹಿಳೆ ನೇಣಿ* ಬಲಿಯಾಗಿರುವುದು ತನಿಖೆ ವೇಳೆ ಬಯಲಾಗಿದೆ.ಗುರುವಾರ ಅಂಚೆಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೃತ ಮಹಿಳೆ ಸ್ಪಂದನಾ ಕಾಲೇಜಿಗೆ ಹೋಗುತ್ತಿದ್ದಾಗಲೇ ಅಭಿಷೇಕ್ ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು. ಇದಕ್ಕೆ ಪೋಷಕರ ವಿರೋಧ ಇತ್ತು. ಹಲವು ದಿನಗಳಿಂದ ಅಭಿಷೇಕ್‌ಗೆ ಅಪರಿಚಿತ ಯುವತಿಯೊಬ್ಬಳು ಕರೆ ಮಾಡುತ್ತಿದ್ದಳು. ಹೀಗಾಗಿ ಅಭಿಷೇಕ್ ಕೂಡ ಆ ಯುವತಿ ಜೊತೆಗೆ ಅನೈತಿ* ಸಂಬಂಧ ಹೊಂದಿದ್ದಾನೆ ಎಂದು ಸ್ಪಂದನಾಗೆ ಶಂಕೆ ವ್ಯಕ್ತವಾಗಿತ್ತು. ಜೊತೆಗೆ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಹಲವು ಬಾರಿ ಗಲಾಟೆಯಾಗಿತ್ತು. ಆ ಸಮಯದಲ್ಲಿ ಇನ್ಮುಂದೆ ಆಕೆಯ ಜೊತೆಗೆ ಮಾತಾಡುವುದಿಲ್ಲ ಎಂದು ಅಭಿಷೇಕ್ ಹೇಳಿದ್ದ. ಆದರೆ ಮೊನ್ನೆ ಭೀಮನ ಅಮಾವಾಸ್ಯೆ ದಿನ ಸ್ಪಂದನಾ ಪತಿ ಅಭಿಷೇಕ್‌ಗೆ ಪೂಜೆ ಮಾಡುವ ವೇಳೆಯೇ ಆ ಯುವತಿಯಿಂದ ಮತ್ತೆ ಕರೆ ಬಂದಿತ್ತು. ಇದರಿಂದ ನೊಂದ ಸ್ಪಂದನಾ ಕೋಣೆಗೆ ಹೋಗಿ ಆತ್ಮಹ*ಗೆ ಶರಣಾಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ.

ಇದಕ್ಕೂ ಮುನ್ನ ಮದುವೆಯಾದ ಬಳಿಕ ಪತಿ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಸ್ಪಂದನಾಳಿಗೆ ಕಿರುಕುಳ ನೀಡುತ್ತಿದ್ದರು. ಬಳಿಕ 5 ಲಕ್ಷ ರು.ಗಳನ್ನು ಕೊಟ್ಟು ಸಂಧಾನ ಮಾಡಿಸಿದ್ದರು ಎನ್ನಲಾಗಿದೆ. ಅತ್ತೆ ಮಾತನ್ನ ಕೇಳಿ ನನ್ನ ಗಂಡ ಕಿರುಕುಳ ಕೊಡ್ತಿದ್ದಾನೆ ಎಂದು ತಂದೆಗೆ ಕರೆ ಮಾಡಿ ಸ್ಪಂದನಾ ಕಣ್ಣೀರಿಟ್ಟಿದ್ದಳು. ಬಳಿಕ ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಕರೆ ಮಾಡಿ ನಿಮ್ಮ ಮಗಳು ಸಾವನ್ನಪ್ಪಿದ್ದಾಳೆ ಎಂದು ಪತಿ ಕುಟುಂಬಸ್ಥರು ತಿಳಿಸಿದ್ದರು.

ಸ್ಪಂದನಾ ಕುಟುಂಬಸ್ಥರು ಪತಿ ಅಭಿಷೇಕ್ ಮತ್ತು ಅತ್ತೆ ಲಕ್ಷ್ಮಮ್ಮ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ