ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಡುವ ವೇಳೆ ಮಿತಿ ಮೀರಿ ವರ್ತಿಸಿದ ಕಾರಣ ವ್ಯಕ್ತಿಯೊಬ್ಬರು ಹಾರಂಗಿ ನದಿಗೆ ಜಾರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸಂದೀಪ್ ಮೃತ ವ್ಯಕ್ತಿ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಆ.04): ಕೊಡಗು ಜಿಲ್ಲೆ ಪ್ರವಾಸಿ ತಾಣಗಳ ತವರೂರು. ಇಲ್ಲಿನ ಪ್ರಕೃತಿಗೆ ಮೈಮರೆಯುವ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಡುತ್ತಾರೆ. ಆದರೆ ಹೀಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಡುವ ವೇಳೆ ಮಿತಿ ಮೀರಿ ವರ್ತಿಸಿದ ಕಾರಣ ವ್ಯಕ್ತಿಯೊಬ್ಬರು ಹಾರಂಗಿ ನದಿಗೆ ಜಾರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಸಂದೀಪ್ ಮೃತ ವ್ಯಕ್ತಿ. ಗುರುವಾರ ಸಂಜೆ ಹಾರಂಗಿ ಜಲಾಶಯಕ್ಕೆ ಆಗಮಿಸಿದ್ದ ಇವರು ಹಾರಂಗಿ ಮತ್ತು ಹುದುಗೂರಿಗೆ ಸಂಪರ್ಕ ಕಲ್ಪಿಸುವ ಹಾರಂಗಿ ಜಲಾಶಯದ ಮುಂಭಾಗದಲ್ಲಿರುವ ಸೇತುವೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
undefined
ಅದೇ ವೇಳೆ ಟ್ಯಾಟೂ ಕಲಾವಿದನಾಗಿದ್ದ ಸಂದೀಪ್ ಸೇತುವೆಯ ಬದಿಯಲ್ಲಿರುವ ಚಿಕ್ಕ ಚಿಕ್ಕ ಕಟ್ಟೆಗಳ ಮೇಲೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ. ಆಗ ಜಾರಿ ಹಿಂದಕ್ಕೆ ಅಂದರೆ ಹಾರಂಗಿ ನದಿಗೆ ಬಿದ್ದಿದ್ದಾರೆ. ಹಾರಂಗಿ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರನ್ನು ಹರಿಬಿಡುತ್ತಿದ್ದರಿಂದ ಸಂದೀಪ್ ನದಿಗೆ ಬೀಳುತ್ತಿದ್ದಂತೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಕೂಡಲೇ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಹಾರಂಗಿ ಗ್ರಾಮಸ್ಥರು ಹಗ್ಗವನ್ನು ತಂದು ಸಂದೀಪನನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿಯೇ ಆತ ನದಿಯಲ್ಲಿ ತುಂಬಾ ಸ್ವಲ್ಪ ದೂರದವರೆಗೆ ತೇಲಿ ಹೋಗಿ ನಂತರ ಮುಳುಗಿದ್ದಾನೆ.
ಜೆಜೆಎಂ ಕಾಮಗಾರಿಯಲ್ಲಿ 80 ಲಕ್ಷ ಅಕ್ರಮ: ಹೋರಾಟಕ್ಕಿಳಿದ ಬಿಜೆಪಿ ಮುಖಂಡ ಮಲ್ಲಪ್ಪ ಹಳಕಟ್ಟಿ!
ನೀರಿನಲ್ಲಿ ಮುಳುಗುತ್ತಿದ್ದ ದೃಶ್ಯಗಳು ಸೆರೆಯಾಗಿದ್ದು ಸಂದೀಪ್ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕ್ಷಣಗಳು ಎಲ್ಲರ ಕಣ್ಣುಗಳು ಒದ್ದೆಯಾಗುವಂತೆ ಮಾಡುತ್ತವೆ. ಸಂಪತ್ತು ಮುಳುಗುತ್ತಿದ್ದಂತೆ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ನೀರು ತೀವ್ರ ರಭಸವಾಗಿ ಹರಿಯುತ್ತಿದ್ದರಿಂದ ಮೃತದೇಹ ಪತ್ತೆಯಾಗಿಲ್ಲ. ಬಳಿಕ ಹಾರಂಗಿ ಜಲಾಶಯದ ಕ್ರೆಸ್ ಗೇಟುಗಳನ್ನು ಬಂದ್ ಮಾಡಿ ನೀರು ನಿಲ್ಲಿಸಿ ನದಿಯಲ್ಲಿ ರಾತ್ರಿ 9 ಗಂಟೆಯವರೆಗೆ ಹುಡುಕಾಡಿದ್ದಾರೆ. ಆದರೂ ಮೃತದೇಹದ ಪತ್ತೆಯಾಗದಿದ್ದಾಗ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ಮುಳುಗು ತಜ್ನರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು.
ಶುಕ್ರವಾರ ಪುನಃ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೂ ಮಧ್ಯಾಹ್ನ 12 ಗಂಟೆಯಾದರೂ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಹನ್ನೆರಡುವರೆ ಸಮಯಕ್ಕೆ ಮೃತದೇಹ ದೊರೆಯಿತು. ಬೆಂಗಳೂರಿನ ವಿದ್ಯಾರಣ್ಯಪುರದ ನಿವಾಸಿ ಸಂಪತ್ತ್ (45) ಮೃತ ವ್ಯಕ್ತಿ. ತಮ್ಮ ಸ್ನೇಹಿತರಾದ ರಂಜಿತ್ ಸೇರಿದಂತೆ ಮೂವರೊಂದಿಗೆ ಕೊಡಗಿಗೆ ಪ್ರವಾಸಕ್ಕೆ ಬಂದಿದ್ದರು. ಬುಧವಾರ ಮೈಸೂರು ಮಾರ್ಗವಾಗಿ ಗೋಣಿಕೊಪ್ಪಕ್ಕೆ ಆಗಮಿಸಿದ್ದರು. ಗೋಣಿಕೊಪ್ಪದಲ್ಲಿ ಉಳಿದಿದ್ದ ಈ ನಾಲ್ವರು ಗುರುವಾರ ಹಾರಂಗಿಯನ್ನು ನೋಡಿಕೊಂಡು ಆ ಮಾರ್ಗವಾಗಿಯೇ ಬೆಂಗಳೂರಿಗೆ ವಾಪಸ್ ಆಗಲು ಹಾರಂಗಿಗೆ ಬಂದಿದ್ದರು.
ಅಷ್ಟರಲ್ಲೇ ದುರ್ಘಟನೆ ನಡೆದು ಸಂದೀಪ್ ಮೃತಪಟ್ಟಿದ್ದಾನೆ. ಮೃತದೇಹ ಪತ್ತೆಯಾದ ಬಳಿಕ ಹಾರಂಗಿ, ಹುಲುಗುಂದ ಗ್ರಾಮದ ಜನರು ಸ್ಥಳದಿಂದ ಮೃತದೇಹ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಕಾರಣ ಹೀಗೆ ಸೇತುವೆಯಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವುದು ಇದು ಮೂರನೇ ಪ್ರಕರಣ. ಮೊದಲ ಪ್ರಕರಣ ಆದಾಗಲೇ ಸೇತುವೆಗೆ ತಡೆಗೋಡೆ ನಿರ್ಮಿಸುವುದಕ್ಕೆ ಒತ್ತಾಯಿಸಿದ್ದೆವು. ಆದರೆ ಅಧಿಕಾರಿಗಳು ನಮ್ಮ ಮನವಿಯನ್ನು ನಿರ್ಲಕ್ಷ್ಯಿಸಿದರು. ಬಳಿಕ ಕಳೆದ ಮೂರು ವರ್ಷಗಳ ಹಿಂದೆಯೂ ಇಂತಹದ್ದೇ ಒಂದು ಪ್ರಕರಣ ನಡೆಯಿತು. ಆಗಲೂ ಅಧಿಕಾರಿಗಳು ಗಮನ ಹರಿಸಲಿಲ್ಲ.
Haveri: ಸೈಕಲ್ ಟಯರ್‌ಗೆ 5 ರೂಪಾಯಿ ಲಗೇಜ್ ಶುಲ್ಕ ವಸೂಲಿ ಮಾಡಿದ ಕಂಡಕ್ಟರ್!
ಇವೆಲ್ಲದರ ಕಾರಣದಿಂದ ಇಂತಹ ದುರ್ಘಟನೆ ಮತ್ತೆ ನಡೆದಿದೆ. ಗುರುವಾರ ಸಂಜೆಯೇ ಈ ಘಟನೆ ನಡೆದಿದ್ದರೂ ಇದುವರೆಗೆ ಹಾರಂಗಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಸೇತುವೆಗೆ ತಡೆಗೋಡೆ ನಿರ್ಮಿಸುವ ಭರವಸೆ ನೀಡದೆ ಮೃತದೇಹವನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಆಕ್ರೋಶ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡರು. ಮಧ್ಯ ಪ್ರವೇಶಿಸಿದ ಕುಶಾಲನಗರ ಪೊಲೀಸರು ಎಲ್ಲರನ್ನು ಸಮಾಧಾನ ಪಡಿಸಿದರು. ಬಳಿಕ ಹಾರಂಗಿ ಅಧಿಕಾರಿಗಳು ನೂತನ ಸೇತುವೆ ಮಾಡುವ ಭರವಸೆ ನೀಡಿದ್ದರಿಂದ ಮೃತದೇಹವನ್ನು ಕುಶಾಲನಗರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ಬಳಿಕ ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.