ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೃತನ ಹಾಗೂ ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್‌ಗಳನ್ನು ಪಡೆದು ಅಳಸಿ ಹೋಗಿರುವ ಡಾಟಾ ಸಂಗ್ರಹ ಕಾರ್ಯವನ್ನು ಆರಂಭಿಸಿದ ಪೊಲೀಸರು
ಬೆಂಗಳೂರು(ಜೂ.27): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೃತನ ಖಾತೆಯಲ್ಲಿನ ಸಂದೇಶಗಳ ಕುರಿತು ಮಾಹಿತಿ ನೀಡುವಂತೆ ಕೋರಿ ಇನ್ ಸ್ಟಾಗ್ರಾಂಗೆ ಬೆಂಗಳೂರು ಪೊಲೀಸರು ಪತ್ರ ಬರೆದಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಗೌತಮ್ ಹೆಸರಿನ ನಕಲಿ ಖಾತೆ ತೆರೆದು ನಟ ದರ್ಶನ್ ಪ್ರಿಯತಮೆ ಪವಿತ್ರಾ ಗೌಡಳಿಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪವಿದೆ. ಇದೇ ಕಾರಣಕ್ಕೆ ಚಿತ್ರದುರ್ಗದಿಂದ ಆತನನ್ನು ಅಪಹರಿಸಿ ಬಳಿಕ ಪಟ್ಟಣಗೆರೆ ಶೆಡ್‌ಗೆ ಕರೆತಂದು ಹಲ್ಲೆ ನಡೆಸಿ ದರ್ಶನ್ ಗ್ಯಾಂಗ್ ಹತ್ಯೆಗೈದ ಆರೋಪ ಬಂದಿದೆ. ಈ ಹತ್ಯೆ ಬಳಿಕ ಮೃತನ ಮೊಬೈಲ್ ಅನ್ನು ಸುಮನಹಳ್ಳಿ ಸಮೀಪದ ಮೋರಿಗೆ ಆರೋಪಿಗಳು ಎಸೆದಿದ್ದರು. ಹೀಗಾಗಿ ಮೊಬೈಲ್ ಸಿಗದ ಕಾರಣಕ್ಕೆ ಇನ್‌ಸ್ಟಾಗ್ರಾಂನಲ್ಲಿ ಮೃತನ ಸೃಷ್ಟಿಸಿದ್ದ ನಕಲಿ ಖಾತೆ ಗಳ ಸಂದೇಶ ಕುರಿತು ಮಾಹಿತಿ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ದರ್ಶನ್ & ಗ್ಯಾಂಗ್ ನಡೆಸಿದ ಹಲ್ಲೆ ವಿಡಿಯೋ ಪೊಲೀಸರಿಗೆ ಲಭ್ಯ, ಆರೋಪಿ ಮೊಬೈಲ್‌ನಿಂದ ರಿಟ್ರೀವ್!
ಹೊಸ ಸಿಮ್‌ಗಳ ಖರೀದಿ:
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೃತನ ಹಾಗೂ ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್‌ಗಳನ್ನು ಪಡೆದು ಅಳಸಿ ಹೋಗಿರುವ ಡಾಟಾ ಸಂಗ್ರಹ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
ಕೊಲೆ ಕೃತ್ಯದ ಸಾಕ್ಷ್ಯ ನಾಶಪಡಿಸಲು ರೇಣುಕಾಸ್ವಾಮಿ ಹಾಗೂ ಆರೋಪಿ ರಾಘ ವೇಂದ್ರನ ಮೊಬೈಲ್‌ಗಳನ್ನು ಮೋರಿಗೆ ಎಸೆ ಯಲಾಗಿತ್ತು. ಇನ್ನು ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳ ಮೊಬೈಲ್‌ಗಳಲ್ಲಿ ಉಪಯೋಗಿಸಿದ್ದ ವೆಬ್ ಆ್ಯಪ್‌ಗಳನ್ನು ನಿಷ್ಕ್ರಿ ಯಗೊಳಿಸಲಾಗಿತ್ತು.ಈ ಕಾರಣ ಪುರಾವೆಗಳ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.