ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಗಳಿಗೆ ಗುದ್ದಿದ ಕಾರು, ಭಯಾನಕ ಅಪಘಾತಕ್ಕೆ ಬೆಚ್ಚಿಬಿದ್ದ Bengaluru!

By Gowthami KFirst Published May 22, 2023, 10:37 PM IST
Highlights

ಆನೇಕಲ್ ನಲ್ಲಿ ಬೈಕ್ ಗಳಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಎಸ್ಕೇಪ್ ಆಗಿದೆ. ಭಯಾನಕ ಅಪಘಾತಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರು (ಮೇ.22): ಆನೇಕಲ್ ನಲ್ಲಿ ಬೈಕ್ ಗಳಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಎಸ್ಕೇಪ್ ಆಗಿದೆ. ಭಯಾನಕ ಅಪಘಾತಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಈ  ಅಪಘಾತದಲ್ಲಿ ಮೂರು ಮಂದಿಗೆ ಗಂಭೀರ ಗಾಯವಾಗಿದೆ. ಕಾರು ಪೋಲೀಸರಿಂದ ಎಸ್ಕೇಪ್ ಆಗಲು ಹೋಗಿ ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.

ನಂಬರ್ ಪ್ಲೇಟ್ ಇಲ್ಲದೆ ಅನುಮಾನಸ್ಪದವಾಗಿ ಓಡಾಡುತ್ತಿದ್ದ ಕಾರನ್ನು ರಾಜ್ಯ ಗಡಿ ತಮಿಳುನಾಡಿನ ಜೂಜುವಾಡಿ ಬಳಿ ತಮಿಳುನಾಡು ಪೋಲೀಸರು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿ ನಾಲ್ಕೈದು ಮಂದಿ ಅನುಮಾನಸ್ಪದ ಓಡಾಟ ಮಾಡುತ್ತಿದ್ದರು. ಈ ವೇಳೆ ಇನ್ನೋವಾ ಕಾರನ್ನ  ತಮಿಳುನಾಡು ಪೋಲೀಸರು ಚೇಸ್ ಮಾಡಿದ್ದಾರೆ.  ಕಾರನ್ನ ನಿಲ್ಲಿಸದೆ ರಾಜ್ಯ ಗಡಿ ಬಳ್ಳೂರು ಗ್ರಾಮದ ಮೂಲಕ ಎಸ್ಕೇಪ್ ಆಗಲು ಯತ್ನ ನಡೆದಿದೆ. ಈ ವೇಳೆ ಬಳ್ಳೂರು ಗ್ರಾಮದಲ್ಲಿ ಅಡ್ಡಲಾಗಿ ಬಂದ ಬೈಕ್ ಗಳಿಗೆ ಗುದ್ದಿ ಎಸ್ಕೇಪ್ ಆಗಿದ್ದಾರೆ. 

ಈ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.  ಅಪರಾಧ ಕೃತ್ಯ ಎಸಗಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು ಎನ್ನುವ ಬಗ್ಗೆಯೂ ಪೋಲೀಸರಿಂದ ತನಿಖೆ ನಡೆಯುತ್ತಿದೆ. ಅತ್ತಿಬೆಲೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಭಯಾನಕ ಅಪಘಾತ ನಡೆದಿದೆ.

Kodagu: ಆಹಾರ ಅರಸಿ ಬಂದ 10 ತಿಂಗಳ ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಕೊಂದ ಕಿರಾತಕರು!

ಭೀಕರ ಅಪಘಾತ ಅವಶೇಷಗಳಲ್ಲಿ ಸಿಲುಕಿದ್ದ ಚಾಲಕ!
ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅಪಘಾತದ ರಬಸಕ್ಕೆ ಎರಡು ಕ್ಯಾಂಟರ್ಗಳು‌   ನಜ್ಜು ಗುಜ್ಜಾಗಿದೆ. ಮಾತ್ರವಲ್ಲ  ಕ್ಯಾಂಟರ್ ಅವಶೇಷಗಳಲ್ಲಿ ಸಿಲುಕಿದ್ದ ಚಾಲಕನನ್ನು ಹರಸಾಹಸ ಪಟ್ಟು  ಸ್ಥಳೀಯರು ಹೊರಗಡೆ ಎಳೆದಿದ್ದಾರೆ.

ತುತ್ತು ಅನ್ನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ಕುಟುಂಬದಲ್ಲಿ ಹಣಕಾಸಿನ ಗಲಾಟೆ, ಕೆರೆ ಬಿದ್ದು ಮೂವರು ಸಾವು!

 ಅದೃಷ್ಟವಶಾತ್ ಇಬ್ಬರು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಒಂದೇ ರಸ್ತೆಯಲ್ಲಿ ಎರಡು ಕಡೆಯ ವಾಹನಗಳನ್ನ ಬಿಟ್ಟ ಪರಿಣಾಮ ಈ ಅಪಘಾತ ಸಂಭವಿಸಿದೆ. ದಾಬಸ್ ಪೇಟೆಯಿಂದ ಹೊಸಕೋಟೆ ವರೆಗೂ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಳೆದ ತಿಂಗಳು ಸಹ ಇದೇ ರೀತಿ ಅವಘಡವಾಗಿ  ಓರ್ವ ವ್ಯಕ್ತಿ ಸಾವನ್ನಪಿದ್ದ. ಅವೈಜ್ಞಾನಿಕ ಕಾಮಗಾರಿಯಿಂದ ಅಮಾಯಕರು ಜೀವ ಹೋಗುತ್ತಿದೆ  ಎಂದು ಹೆದ್ದಾರಿ ನಿರ್ಮಾಣದ ದಿಲೀಪ್ ಬಿಲ್ಡ್ ಕನ್ಸಟ್ರಕ್ಷನ್ ವಿರುದ್ದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ  ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿ ಘಟನೆ ನಡೆದಿದೆ.

click me!