ತುತ್ತು ಅನ್ನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ಕುಟುಂಬದಲ್ಲಿ ಹಣಕಾಸಿನ ಗಲಾಟೆ, ಕೆರೆ ಬಿದ್ದು ಮೂವರು ಸಾವು!

By Gowthami KFirst Published May 22, 2023, 9:00 PM IST
Highlights

ಹಣಕಾಸಿನ ವಿಚಾರದಲ್ಲಿ ಗಲಾಟೆಯಾಗಿ ಒಂದೇ ಕುಟುಂಬದ ಮೂವರು ನೀರುಪಾಲಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು (ಮೇ.22): ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಹೊರವಲಯದ ತೋಟದ ಕೆರೆ ಮೂವರು ಬಿದ್ದು ಸಾವನ್ನಪ್ಪಿದರು ದಾರುಣ ಘಟನೆ ‌ನಡೆದಿದೆ. ತುತ್ತಿನ ಚೀಲ ತುಂಬಿಸಿಕೊಳಲು ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ಮೂವರು  ನೀರುಪಾಲಾಗಿದ್ದಾರೆ. ಕುಟುಂಬದಲ್ಲಿನ ಚಿಕ್ಕ ಹಣಕಾಸಿನ ವಿಚಾರಕ್ಕೆ ‌ಮನೆಯಲ್ಲಿ ಕಲಹ ಶುರುವಾಗಿತ್ತು. ಅಣ್ಣ- ತಮ್ಮನ ಜಗಳ ನೋಡಲು ಆಗದೇ ಬೇಸತ್ತು ಬಸವರಾಜನ ಪತ್ನಿ ಮಾಯಮ್ಮ ತೋಟದಲ್ಲಿ ಇರುವ ಕೆರೆಗೆ ಹಾರಿದಳು. ಇದನ್ನು ಗಮನಿಸಿದ ಮಾವ ಮುದುಕಪ್ಪ ಆಕೆಯನ್ನು ರಕ್ಷಣೆ ಮಾಡಲು ಕೆರೆಗೆ ಹಾರಿ ಸೊಸೆಯನ್ನ ರಕ್ಷಣೆ ‌ಮಾಡಿದನ್ನು, ಅಷ್ಟರಲ್ಲೇ ಅಣ್ಣ ಶಿವಕುಮಾರ್ - ತಮ್ಮ ಬಸವರಾಜ್ ಜಗಳವಾಡುತ್ತಾ ಕೆರೆಗೆ ಜಿಗಿದರು. ಇದನ್ನ ನೋಡಿದ 60 ವರ್ಷದ ಮುದುಕಪ್ಪ ಈಜುಬಾರದ ತನ್ನ ‌ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಲು ಹೋಗಿ ತಾನು ಮಕ್ಕಳ ಜೊತೆಗೆ ‌ಪ್ರಾಣ ಬಿಟ್ಟಿದ್ದಾನೆ. ಮೃತರನ್ನ ಸಿರವಾರ ತಾಲೂಕಿನ ಲಕ್ಕಂದಿನ್ನಿ ಗ್ರಾಮದ ನಿವಾಸಿಗಳಾಗಿದ್ದು,  ಮುದುಕಪ್ಪ(60) ಮಕ್ಕಳಾದ ಶಿವಕುಮಾರ(23), ಬಸವರಾಜ(20) ಎಂದು ಗುರುತಿಸಲಾಗಿದೆ. 

Kodagu: ಆಹಾರ ಅರಸಿ ಬಂದ 10 ತಿಂಗಳ ಗರ್ಭಿಣಿ ಕಾಡಾನೆಯನ್ನು ಗುಂಡಿಕ್ಕಿ ಕೊಂದ ಕಿರಾತಕರು!

ಸಿರವಾರ ಪಟ್ಟಣದ ಹೊರವಲಯದ ಶಿವಕುಮಾರ ಚುಕ್ಕಿ ಎಂಬುವರಿಗೆ ಸೇರಿದ  ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಇಂದು ಮುಂಜಾನೆಯಿಂದ ಯಾವುದೋ ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ಜಗಳ ಶುರು ಆಗಿತ್ತು. ಆ ಜಗಳ ಇಂದು ಸಂಜೆ ಮೂವರ ಜೀವ ಬಲಿ ಪಡೆಯುವ ಮುಖಾಂತರ ಅಂತ್ಯವಾಗಿದೆ.

ಮೃತ ಬಸವರಾಜನಿಗೆ ಮಾಯಮ್ಮ ಎನ್ನುವವರ ಜೊತೆ ವಿವಾಹವಾಗಿ ಒಂದು ಮಗುವಿದೆ. ಘಟನೆ ಬಳಿಕ ‌ಮಾಹಿತಿ‌ ತಿಳಿದು ಸ್ಥಳಕ್ಕೆ ಆಗಮಿಸಿದ ಸಿರವಾರ ಪೊಲೀಸರು ‌ಸ್ಥಳ ಪರಿಶೀಲನೆ ನಡೆಸಿ ಮೃತದೇಹಗಳನ್ನ ಆಸ್ಪತ್ರೆಗೆ ಶಿಫ್ಟ್ ‌ಮಾಡಿದ್ದಾರೆ. ಈ ಕುರಿತು ‌ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru: ಜೀವನದಲ್ಲಿ ಎಂಜಾಯ್ ಮಾಡೋಕೆ 2 ಕೋಟಿ ನೀಡಿ ತಂದೆಯನ್ನೇ ಹತ್ಯೆ

ನೇತ್ರಾವತಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ
ಬಂಟ್ವಾಳ: ಬಂಟ್ವಾಳ ತಾಲೂಕಿನ ನೆಟ್ಲ ಸಮೀಪದ ನಿವಾಸಿ ಪ್ರವೀಣ್‌ (58) ಎಂಬವರು ಗುರುವಾರ ಬಿ.ಸಿ.ರೋಡಿನ ನೇತ್ರಾವತಿ ನದಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯ ಮುಳುಗು ತಜ್ಞರು, ಪೊಲೀಸ್‌ ಒಟ್ಟಿಗೆ ಸ್ಥಳೀಯ ಯುವಕರು ಮತ್ತು ಅಗ್ನಿಶಾಮಕದಳದವರು ಶವ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆ ಪತ್ತೆಯಾಗಿದೆ. ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ಸಮಸ್ಯೆ ಅನುಭವಿಸುತ್ತಿದ್ದ ಎನ್ನಲಾಗಿದ್ದು, ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಕಿನಲ್ಲಿ ಬಂದ ಇವರು ನೇತ್ರಾವತಿ ಸೇತುವೆ ಮೇಲೆ ಬೈಕ್‌ ನಿಲ್ಲಿಸಿ ಚಪ್ಪಲಿ ಅಲ್ಲೆ ಇಟ್ಟು ಹಾರಿದ್ದಾರೆ.

click me!