ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 5 ದಿನ ಬಳಿಕ ಕೇಸ್‌!

By Kannadaprabha News  |  First Published Sep 24, 2021, 7:21 AM IST

* ಆಟವಾಡುತ್ತಿದ್ದ ಬಾಲಕಿಯ ಪುಸಲಾಯಿಸಿ ಶೋಷಣೆ

* ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 5 ದಿನ ಬಳಿಕ ಕೇಸ್‌


ಬೆಂಗಳೂರು(ಸೆ.24): ರಾಜಧಾನಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಮತ್ತೊಂದು ಲೈಂಗಿಕ ದೌರ್ಜನ್ಯ(Sexual Harassment) ಕೃತ್ಯ ಬೆಳಕಿಗೆ ಬಂದಿದ್ದು, ಘಟನೆ ನಡೆದು ಐದು ದಿನಗಳ ಬಳಿಕ ಚಿಕ್ಕಜಾಲ ಠಾಣೆ ಪೊಲೀಸರು ಎಫ್‌ಐಆರ್‌(FIR) ದಾಖಲಿಸಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.

ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಕೂಲಿ ಕಾರ್ಮಿಕ ರುದ್ರೇಶ್‌ ಕರೆದೊಯ್ದು ಲೈಂಗಿಕವಾಗಿ ಶೋಷಿಸಿದ್ದ. ಈ ಬಗ್ಗೆ ಪೋಷಕರು ದೂರು ನೀಡಿದ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಎಫ್‌ಐಆರ್‌ ದಾಖಲಿಸಲು ತಡ ಮಾಡಿಲ್ಲ ಎಂದು ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಸ್ಪಷ್ಟಪಡಿಸಿದ್ದಾರೆ.

Tap to resize

Latest Videos

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಸುದ್ದಿ ತಿಳಿದ ಸಹೋದರ ಸುಸೈಡ್

ಸೆ.15ರಂದು ಸಂಬಂಧಿ ಮನೆಗೆ ಪಾಲಕರ ಜತೆ ಸಂತ್ರಸ್ತ ಬಾಲಕಿ ಬಂದಿದ್ದಳು. ಆ ವೇಳೆ ಆಟವಾಡುತ್ತಿದ್ದ ಬಾಲಕಿಯನ್ನು ಮಾತನಾಡುವ ನೆಪದಲ್ಲಿ ಕರೆದೊಯ್ದು ಆರೋಪಿ ರುದ್ರೇಶ್‌ ಲೈಂಗಿಕ ದೌರ್ಜನ್ಯ(Sexual Harassment) ನಡೆಸಿದ್ದ. ಕೆಲ ಹೊತ್ತಿನ ನಂತರ ಮನೆಗೆ ಮರಳಿದ ಬಳಿಕ ತಾಯಿ ಬಳಿ ಸಂತ್ರಸ್ತೆ ನೋವು ಹಂಚಿಕೊಂಡಿದ್ದಳು. ಆಗ ಕೆರಳಿದ ಪೋಷಕರು, ಆರೋಪಿಯನನ್ನು ಪ್ರಶ್ನಿಸಿದಾಗ ಧಮ್ಕಿ ಹಾಕಿ ದುಂಡಾವರ್ತನೆ ತೋರಿಸಿದ್ದಾನೆ. ಐದು ದಿನಗಳ ನಂತರ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಆಸ್ಪತ್ರೆಗೆ ಚಿಕಿತ್ಸೆ ಮಗಳನ್ನು ಪೋಷಕರು ಕರೆದುಕೊಂಡು ಹೋದಾಗ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಆಗ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಸುದ್ದಿ ತಿಳಿದ ಸಹೋದರ ಸುಸೈಡ್

ಎಫ್‌ಐಆರ್‌ಗೆ ಹಿಂದೇಟು-ಆಪ್‌ ಆರೋಪ

ಐದು ವರ್ಷದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ(Sexual Harassment) ಪ್ರಕರಣದಲ್ಲಿ ಚಿಕ್ಕಜಾಲ ಠಾಣೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಈ ಘಟನೆ ಬಗ್ಗೆ ಮಾಹಿತಿ ಗೊತ್ತಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಠಾಣೆಗೆ ಹೋಗಿ ಪೊಲೀಸರನ್ನು ಪ್ರಶ್ನಿಸಿದ ಮೇಲೆ ಎಫ್‌ಐಆರ್‌ ದಾಖಲಾಯಿತು. ಅದೂ ಘಟನೆ ನಡೆದು ಐದು ದಿನಗಳ ಬಳಿಕ ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಅಮ್‌ ಆದ್ಮಿ ಪಕ್ಷದ(AAP) ನಾಯಕ ದರ್ಶನ್‌ ಜೈನ್‌ ಆರೋಪಿಸಿದ್ದಾರೆ.

click me!