ರೇಪ್  ವಿಡಿಯೋ ಮಾಡ್ಕೊಂಡು ಸ್ನೇಹಿತರಿಗೆ ಕಳಿಸಿದ..ಮುಂದಾಗಿದ್ದು ಘೋರ ದುರಂತ!

By Suvarna News  |  First Published Sep 24, 2021, 12:06 AM IST

* ಮುಂಬೈ ಹೊರವಲಯದಲ್ಲಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ
* ಜನವರಿ ತಿಂಗಳಿನಿಂದ ಬಾಲಕಿ ಕಾಡುತ್ತಿದ್ದ ಕಿರಾತಕರು
* ಮೊದಲಿಗೆ ಬಾಲಕಿ ಮೇಲೆ ಎರಗಿದ್ದ ಸ್ನೇಹಿತ ವಿಡಿಯೋ ಮಾಡಿಕೊಂಡಿದ್ದ


ಮುಂಬೈ(ಸೆ. 23) ಮುಂಬೈ ಹೊರವಲಯದಿಂದ ಘೋರ ಪ್ರಕರಣವೊಂದು ವರದಿಯಾಗಿದೆ.  15 ವರ್ಷದ ಬಾಲಕಿ ಮೇಲೆ ಕಿರಾತಕರು ಹಲವು ಸಾರಿ ಅತ್ಯಾಚಾರ ಎಸಗಿದ್ದಾರೆ.  33  ಜನ ಬಾಲಕಿಯ ಮೇಲೆ ಎರಗಿದ್ದು 24  ಕಾಮಾಂಧರನ್ನು ಬಂಧಿಸಲಾಗಿದೆ. 

ಜನವರಿಯಲ್ಲಿಯೇ ಈ ಕೆಟ್ಟ ಕೆಲಸ ಜರುಗಿದ್ದು ಈಗ ಬೆಳಕಿಗೆ ಬಂದಿದೆ.  ಬಾಲಕಿಯ ಸ್ನೇಹಿತನೇ ಆಕೆಯ ಮೇಲೆ ಎರಗಿದ್ದು ಅಲ್ಲದೇ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ. ತನ್ನ ಗೆಳೆಯರಿಗೆ ವಿಡಿಯೋ ಕಳಿಸಿಕೊಟ್ಟಿದ್ದ.  ಆ ಕಿರಾತಕರು ಅದೇ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಹುಡುಗಿಯನ್ನು ತಮ್ಮ ಬಳಿಗೆ ಕರೆಸಿಕೊಳ್ಳುತ್ತಿದ್ದರು.

Tap to resize

Latest Videos

ರೇಪ್ ಅಂದ್ರೆ ರೇಪ್.. ಇಲ್ಲಿ ಅಂಕಿ ಅಂಶಗಳ ಲೆಕ್ಕ ಹಾಕೋದು ತರವೆ

ಮುಂಬೈನ ಹಲವು ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರವಾಗಿದೆ.  ಜನವರಿಯಿಂದ ನಿರಂತರವಾಗಿ ಆಕೆ ಮೇಲೆ ದೌರ್ಜನ್ಯ ನಡೆದುಕೊಂಡೇ ಬಂದಿದೆ.   ಆಕೆಯ ಗೆಳೆಯನ ಸ್ನೇಹಿತರು ನಾಲ್ಕೈದು ಸಾರಿ ಕೃತ್ಯ ಎಸಗಿದ್ದಾರೆ.

ನೊಂದು ಬೆಂದ ಬಾಲಕಿ ಕೊನೆಗೂ ಪೊಲೀಸರ ಮೊರೆ ಹೋಗಿದ್ದು 33  ಆರೋಪಿಗಳ ಹೆಸರು ಹೇಳಿದ್ದಾಳೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದು ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ. 

click me!