ಪ್ರೀತಿಸಿ ಓಡಿಹೋಗಿದ್ದ ಜೋಡಿಗೆ  'ಟೈರ್ ಮೆರವಣಿಗೆ' ಶಿಕ್ಷೆ

Published : Sep 23, 2021, 05:11 PM IST
ಪ್ರೀತಿಸಿ ಓಡಿಹೋಗಿದ್ದ ಜೋಡಿಗೆ  'ಟೈರ್ ಮೆರವಣಿಗೆ' ಶಿಕ್ಷೆ

ಸಾರಾಂಶ

* ಮದುವೆಯಾಗಲು ಓಡಿ ಹೋಗಿದ್ದ ಜೋಡಿಗೆ  ವಿಚಿತ್ರ ಶಿಕ್ಷೆ * ಕುತ್ತಿಗೆಗೆ ಟೈರ್ ಹಾಕಿಸಿ ಊರಿನಲ್ಲಿ ಮೆರವಣಿಗೆ * ಮಧ್ಯಪ್ರದೇಶದಿಂದ ಘಟನೆ ವರದಿ * ಊರಿನವರ ಮೇಲೆ  ಪ್ರಕರಣ ದಾಖಲಿಸಿಕೊಂಡ ಪೊಲೀಸರು  

ಭೋಪಾಲ್(ಸೆ. 23)   ಊರು ಬಿಟ್ಟು  ಓಡಿ ಹೋಗಿದ್ದ ಹುಡುಗ ಮತ್ತು ಹುಡುಗಿಯನ್ನು ಗ್ರಾಮಸ್ಥರು ಊರು ತುಂಬಾ ಮೆರವಣಿಗೆ ಮಾಡಿದ್ದಾರೆ. ಅವರ ಕುತ್ತಿಗೆಗೆ ಟಯರ್ ಹಾಕಿ ಪರೇಡ್ ನಡೆಸಿದ್ದಾರೆ. 

ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.  ಜೋಡಿ ವಿರುದ್ಧ ಬಹಿಷ್ಕಾರವನ್ನು ಹಾಕಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.  ಧರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರಕಾರ, ದೇವೇಂದರ್ ಪಾಟಿದಾರ್  ಮಾಹಿತಿ ಕಲೆ ಹಾಕಿದ್ದಾರೆ.

ಸೀರೆಯುಟ್ಟವರಿಗೆ ರೆಸ್ಟೋರೆಂಟ್‌ಗೆ ನೋ ಎಂಟ್ರಿ!

ಪ್ರೀತಿಸಿದ್ದ  ಜೋಡಿ ಮದುವೆಯಾಗುವ ಕಾರಣದಿಂದ ಊರು ಬಿಟ್ಟು ತೆರಳಿದ್ದರು.  ನಂತರ ರಾಜಸ್ಥಾನಕ್ಕೆ ತೆರಳಿ ವಿವಾಹವಾದರು. ಅಲ್ಲಿಯೂ ಇವರ ಗುರುತನ್ನು ಯಾರೋ ಪತ್ತೆ ಮಾಡಿದ್ದಾರೆ.. ಆಗಿದ್ದು ಆಗಲಿ ಎಂದು ಮತ್ತೆ ಊರಿಗೆ ಬಂದಿದ್ದಾರೆ.   ಇವರು ಬಂದ ನಂತರ ಯುವತಿಯ ಕುಟುಂಬದವರು ಹಲ್ಳಿಯ ಪಂಚಾಯಿತಿಗೆ ದೂರು ಕೊಟ್ಟಿದ್ದಾರೆ.

ಹಳ್ಳಿ ಪಂಚಾಯಿತಿ ವಿಚಾರಣೆ ನಡೆಸಿ ಅಸಂಬದ್ಧ ತೀರ್ಪನ್ನು ನೀಡಿದೆ. ಪಂಚಾಯಿತಿಯ ಆದೇಶದ ಅನ್ವಯ ಜೋಡಿಯನ್ನು ಪರೇಡ್ ಮಾಡಲಾಗಿದೆ. ಇವರು ಓಡಿ ಹೋಗಲು ನೆರವು ನೀಡಿದ್ದ ಬಾಲಕಿಯೊಬ್ಬಳನ್ನು ಹಿಂಸಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!