ಆನ್‌ಲೈನ್‌ನಲ್ಲಿ ಮಸಾಜ್‌ಗೆ ಬುಕ್ ಮಾಡಿ ಯುವತಿಯರಿಗೆ ಲಕ್ಷಾಂತರ ರೂಪಾಯಿ ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದ ಖತರ್ನಾಕ್ ಖದೀಮನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.22): ಆನ್‌ಲೈನ್‌ನಲ್ಲಿ ಮಸಾಜ್‌ಗೆ ಬುಕ್ ಮಾಡಿ ಯುವತಿಯರಿಗೆ ಲಕ್ಷಾಂತರ ರೂಪಾಯಿ ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿದ್ದ ಖತರ್ನಾಕ್ ಖದೀಮನ ಪೊಲೀಸರು ಬಂಧಿಸಿದ್ದಾರೆ.
ಮಹೇಂದ್ರ ಕುಮಾರ್(33) ಬಂಧಿತ ಆರೋಪಿ. ಡಾಗ್ ಬ್ರೀಡಿಂಗ್ ವೃತ್ತಿ ಮಾಡಿಕೊಂಡಿದ್ದ ಆರೋಪಿ. ಮೋಜಿನ ಜೀವನಕ್ಕೆ ಹಾತೊರೆದು ಸುಲಿಗೆಗೆ ಇಳಿದಿದ್ದಾನೆ. ನಗರದಲ್ಲಿ ಸ್ಪಾ, ಬಾಡಿ ಟು ಬಾಡಿ ಮಸಾಜ್ ಹೆಸರಲ್ಲಿ ವೇಶ್ಯವಾಟಿಕೆ ನಡೆಯುತ್ತಿರುವುದು ತಿಳಿದುಕೊಂಡಿದ್ದ ಖದೀಮ. ಹೀಗಾಗಿ ಮಸಾಜ್ ಮಾಡುವ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ವಂಚನೆಗಿಳಿದಿದ್ದ. ಇತ್ತೀಚೆಗೆ ಮಸಾಜ್‌ಗಾಗಿ ಮಹಿಳಾ ಥೆರಪೀಸ್ಟ್ ನ್ನ ಅನ್ಲೈನ್ ನಲ್ಲಿ ಬುಕ್ ಮಾಡಿದ್ದ ಆರೋಪಿ. ಹೆಸರು ಮಹೇಂದ್ರ ಇದ್ರೂ ಆನ್‌ಲೈನ್ ಬುಕ್ ಮಾಡುವಾಗ ಸುರೇಶ್, ಚಿತ್ರನಟನೆಂದು ನಮೂದು ಮಾಡಿದ್ದಾನೆ. ಆನ್‌ಲೈನ್ ಬುಕ್ ಮಾಡಿ ರಾಮಮೂರ್ತಿನಗರದ ಅಪಾರ್ಟ್‌ಮೆಂಟ್ ಒಂದರ ಬಳಿ ಯುವತಿಯನ್ನ ಕರೆಸಿಕೊಂಡಿದ್ದಾನೆ.
undefined
ವಿಚ್ಛೇದಿತ ಮಹಿಳೆಗೆ ಮದುವೆಯಾಗೋದಾಗಿ ನಂಬಿಸಿ ಲಕ್ಷ ಲಕ್ಷ ಹಣ ದೋಚಿದ ನಕಲಿ ಪೊಲೀಸ್
ಸ್ಥಳಕ್ಕೆ ಯುವತಿಯನ್ನ ತನ್ನ ಕಾರಿನಲ್ಲಿ ಕರೆದುಕೊಂಡು ಸುತ್ತಾಡಿಸಿದ್ದಾರೆ. ತಾನು ಆಫೀಸರ್ ಎಂದು, ಮಸಾಜ್ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ತಿಳಿದಿದೆ. ನಿಮ್ಮ ಕೇಸ್ ದಾಖಲಿಸೋದಾಗಿ ಬೆದರಿಕೆ ಹಾಕಿದ್ದಾನೆ. ಕೇಸ್ ದಾಖಲಿಸದಿರಲು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಆರೋಪಿ. ಅದಕ್ಕೆ ಒಪ್ಪದ ಯುವತಿ ಮೇಲೆ ಕಾರಿನಲ್ಲೇ ಹಲ್ಲೆ ನಡೆಸಿದ್ದಾನೆ. ಇದರಿಂದ ಭಯಗೊಂಡ ಯುವತಿ ತನ್ನ ಸ್ನೇಹಿತನಿಂದ ಈತನ ಯುಪಿಐ ನಂಬರ್‌ಗೆ 1 ಲಕ್ಷ ರೂಪಾಯಿ ಹಣ ಹಾಕಿಸಿದ್ದಾಳೆ. ಇನ್ನು 50 ಸಾವಿರ ರೂಪಾಯಿ ವಸೂಲಿ ಮಾಡಿದ್ದಾನೆ.
ಕಾರು ತರಬೇತಿ ವೇಳೆ ಯುವತಿ ಎದುರೇ ಹಸ್ತಮೈಥುನ ಮಾಡಿಕೊಂಡ ಕಾಮುಕ ತರಬೇತುದಾರ!
ಯುವತಿಯನ್ನ ಕಾರಿನಲ್ಲಿ ಕೂರಿಸಿಕೊಂಡು ರಾತ್ರಿಯಿಡಿ ಕಾರಿನಲ್ಲಿ ಯುವತಿಯನ್ನ ಸುತ್ತಾಡಿಸಿದ್ದ ಆರೋಪಿ ಕೊನೆಗೆ ಏರ್ಪೋರ್ಟ್ ಬಳಿ ಇಳಿಸಿ ಕೂಡಲೇ ಸ್ವಂತ ಊರಿಗೆ ಹೋಗಬೇಕೆಂದು ಬೆದರಿಸಿದ್ದಾನೆ. ವಂಚಕನಿಂದ ತಪ್ಪಿಸಿಕೊಂಡಬಂದ ಯುವತಿ ವಂಚನೆ ಬಗ್ಗೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಖದೀಮನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆಯೂ ಮಾರತಹಳ್ಳಿ, ಪುಲಕೇಶಿನಗರ ಸೇರಿ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಇದೀಗ ಮತ್ತೆ ವಂಚನೆ ಕೇಸಿನಲ್ಲಿ ಬಂಧಿತನಾಗಿದ್ದು, ಇನ್ನು ಯಾರಾರಿಗೆ ಈ ರೀತಿ ವಂಚಿಸಿದ್ದಾನೆಂಬು ಪೊಲೀಸರೇ ಬಾಯಿಬಿಡಿಸಲಿದ್ದಾರೆ.