ರಸ್ತೆ ಮಧ್ಯೆ ನಿಂತಿದ್ದ ಬೈಕ್‌ ತೆಗೆಯಲು ಹೇಳಿದ್ದಕ್ಕೆ ಹಲ್ಲೆ: ರೌಡಿಗಳ ಬಂಧನ

By Kannadaprabha NewsFirst Published Jun 22, 2023, 6:42 AM IST
Highlights

ರಸ್ತೆಯಲ್ಲಿ ಅಡ್ಡ ನಿಲ್ಲಿಸಿದ್ದ ಬೈಕ್‌ ತೆಗೆಯುವಂತೆ ಹೇಳಿದ್ದಕ್ಕೆ ಟಾಟಾ ಏಸ್‌ ವಾಹನದ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿದ್ದ ರೌಡಿ ಸಂದೀಪ್‌ ಹಾಗೂ ಆತನ ಇಬ್ಬರು ಸಹಚರರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು (ಜೂ.22): ರಸ್ತೆಯಲ್ಲಿ ಅಡ್ಡ ನಿಲ್ಲಿಸಿದ್ದ ಬೈಕ್‌ ತೆಗೆಯುವಂತೆ ಹೇಳಿದ್ದಕ್ಕೆ ಟಾಟಾ ಏಸ್‌ ವಾಹನದ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಮಾಡಿದ್ದ ರೌಡಿ ಸಂದೀಪ್‌ ಹಾಗೂ ಆತನ ಇಬ್ಬರು ಸಹಚರರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ರೌಡಿಶೀಟರ್‌ ಸಂದೀಪ್‌ ಹಾಗೂ ಆತನ ಸಹಚರರಾದ ಕಿರಣ್‌, ಶಶಾಂಕ್‌ ಮತ್ತು ಶ್ರೀಧರ್‌ ಬಂಧಿತರಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಕೆಲ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಎರಡು ದಿನಗಳ ಹಿಂದೆ ರಸ್ತೆಯಲ್ಲಿ ಅಡ್ಡವಾಗಿ ನಿಲ್ಲಿಸಿದ್ದ ಬೈಕನ್ನು ತೆಗೆಯುವಂತೆ ಹೇಳಿದ್ದಕ್ಕೆ ಟಾಟಾ ಏಸ್‌ ಚಾಲಕ ಪ್ರದೀಪ್‌ ಹಾಗೂ ಆತನ ಸ್ನೇಹಿತರ ಮೇಲೆ ರೌಡಿ ಸಂದೀಪ್‌ ತಂಡ ಹಲ್ಲೆ ನಡೆಸಿತ್ತು ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್‌ ಹೇಳಿದ್ದಾರೆ.

ಹಲವು ದಿನಗಳಿಂದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಸಂದೀಪ್‌ ನಿರತನಾಗಿದ್ದು, ಆತನ ಮೇಲೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳಿವೆ. ಈ ಕ್ರಿಮಿನಲ್‌ ಚರಿತ್ರೆ ಹಿನ್ನಲೆಯಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಸಂದೀಪ್‌ ವಿರುದ್ಧ ರೌಡಿಪಟ್ಟಿತೆರೆಯಲಾಗಿತ್ತು. ಪದ್ಮನಾಭನಗರದ ರಾಘವೇಂದ್ರ ಕಾಲೋನಿ ಬಳಿ ಟಾಟಾ ಏಸ್‌ ವಾಹನದಲ್ಲಿ ಸೋಮವಾರ ರಾತ್ರಿ ಪ್ರದೀಪ್‌ ಹಾಗೂ ಆತನ ಗೆಳೆಯರು ತೆರಳುತ್ತಿದ್ದರು. ಆಗ ದಾರಿ ಮಧ್ಯೆ ನಿಲ್ಲಿಸಿದ್ದ ಬೈಕನ್ನು ತೆಗೆಯುವಂತೆ ಸಂದೀಪ್‌ಗೆ ಚಾಲಕ ಪ್ರದೀಪ್‌ ಹೇಳಿದ್ದಾರೆ. ಈ ಮಾತಿಗೆ ಕೆರಳಿದ ರೌಡಿ ಪಟಾಲಂ, ಪ್ರದೀಪ್‌ ಹಾಗೂ ಪ್ರತಾಪ್‌ ಶೆಟ್ಟಿಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Latest Videos

ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಗೆ ಪಿಎಸ್‌ಐ ಆಗಿ ಬಂದ ಮಗಳು: ಪುತ್ರಿಗೆ ಅಧಿಕಾರ ಹಸ್ತಾಂತರಿಸಿದ ತಂದೆ

ವ್ಯಕ್ತಿ ಮೇಲೆ ಹಲ್ಲೆ: ವಿದ್ಯಾರ್ಥಿನಿಯ ಪಕ್ಕ ಕುಳಿತಿದ್ದೀಯಾ? ಎಂದು ಆಕ್ರೋಶಗೊಂಡ ಹುಡುಗರ ದಂಡು ವ್ಯಕ್ತಿಯೊಬ್ಬನ ಬಟ್ಟೆಹರಿದು, ಚಪ್ಪಲಿ ಸೇವೆ ಮಾಡಿ ಹಲ್ಲೆ ನಡೆಸಿದ ಪ್ರಸಂಗ ತಾಲೂಕಿನ ಹಂಗಳದಲ್ಲಿ ನಡೆದಿದೆ. ತಾಲೂಕಿನ ಬಂಡೀಪುರ ಸಮೀಪದ ಮಂಗಲ ಗ್ರಾಮದ ನಾಗೇಶ್‌ ಹಲ್ಲೆಗೊಳಗಾದವರಾಗಿದ್ದು, ಗಾಯಗೊಂಡ ನಾಗೇಶ್‌ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಹಂಗಳ ಗ್ರಾಮದ ಸಿದ್ದರಾಜು, ನಾಗೇಶ್‌, ಗೋಪಾಲ, ತೇಜು ಸೇರಿದಂತೆ ಇತರರ ಮೇಲೆ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಏನಿದು ಘಟನೆ?: ಮಂಗಲ ಗ್ರಾಮದ ನಾಗೇಶ್‌ ಮತ್ತು ಅವರ ತಾಯಿಗೆ ಹುಷಾರಿಲ್ಲದ ಕಾರಣ ತಾಲೂಕಿನ ಹಂಗಳ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಮಂಗಳವಾರ ಮಧ್ಯಾಹ್ನ ಬಂದು ಚಿಕಿತ್ಸೆ ಪಡೆದ ಬಳಿಕ ಮಂಗಲದ ಬಸ್‌ಗೆ ಹೋಗಲು ಹಂಗಳ ಬಸ್‌ ನಿಲ್ಲುವ ಸ್ಥಳಕ್ಕೆ ಬಂದು ನಿಂತಿದ್ದಾರೆ. ನಾಗೇಶ್‌ ಮತ್ತು ಅವರ ತಾಯಿ ಬಸ್‌ ಹತ್ತಲು ನಿಂತ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ನಾಗೇಶ್‌ ಪಕ್ಕ ನಿಂತಿದ್ದನ್ನು ಸಹಿಸದ ಹುಡುಗರು ರೊಚ್ಚಿಗೆದ್ದು, ನಾಗೇಶ್‌ನ ಬಟ್ಟೆಹರಿದು ಹಲ್ಲೆ ನಡೆಸಿದ್ದಾರೆ. ನಾಲ್ಕು ಆರೋಪಿಗಳೊಂದಿಗೆ ಇತರರು ನಾಗೇಶ್‌ನ ಹಲ್ಲೆಯ ಜೊತೆಗೆ ಚಪ್ಪಲಿ ಸೇವೆ ಮಾಡಿದ್ದಾರೆ.

ಬಿಜೆಪಿ ಮೊದಲು ಎಲ್ಲರ ಖಾತೆಗೆ 15 ಲಕ್ಷ ಹಾಕಿ ನಂತರ ನಮ್ಮ ವಿರುದ್ಧ ಪ್ರತಿಭಟಿಸಲಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಹಲ್ಲೆ ನಡೆಸುವ ವೇಳೆ ಯುವಕರ ಗುಂಪಲ್ಲಿ ಒಬ್ಬಾತ ಬ್ಲೇಡ್‌ನಿಂದ ನಾಗೇಶ್‌ನ ಮುಖಕ್ಕೆ ಚುಚ್ಚಲು ಮುಂದಾದಾಗ ನಾಗೇಶ್‌ ತನ್ನ ಕೈ ಅಡ್ಡ ಹಾಕಿದಾಗ ಕೈ ಬ್ಲೇಡ್‌ ಏಟು ಬಿದ್ದಿವೆ. ಪೊಲೀಸರು ಈ ಸಂಬಂಧ ಬುಧ ವಾರ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

click me!