ಡಿ.ಜೆ.ಹಳ್ಳಿ ಗಲಭೆ: ಸಿಎಂಗೆ ಸಲ್ಲಿಸಿದ ವರದಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

By Suvarna NewsFirst Published Sep 4, 2020, 8:36 PM IST
Highlights

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾದ ಸಿಟಿಜನ್ ಫಾರ್ ಡೆಮಾಕ್ರಸಿ ಸದಸ್ಯ, ನಿವೃತ್ತ ಅಪರ ಮುಖ್ಯಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಬೆಂಗಳೂರು, (ಸೆ.04): ಇತ್ತೀಚೆಗೆ ನಗರದ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಮದನ್ ಗೋಪಾಲ್ ಅವರ ನೇತೃತ್ವದ ಸತ್ಯ ಶೋಧನಾ ಸಮಿತಿಯು  ವರದಿ ಸಲ್ಲಿಸಿತು.

ಸತ್ಯ ಶೋಧನಾ ಸಮಿತಿ ನಿಯೋಗ ಇಂದು (ಶುಕ್ರವಾರ) ಕಾವೇರಿ ನಿವಾಸಕ್ಕೆ ತೆರಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ  ಆಗಸ್ಟ್ 11ರಂದು ನಡೆದ ಗಳಭೆ ಪ್ರಕರಣದ 49 ಪುಟಗಳ ವರದಿ ಸಲ್ಲಿಸಿದೆ.

ಬೆಂಗಳೂರು ಗಲಭೆ ಕೇಸ್‌: ಎಸ್‌ಡಿಪಿಐ ಕಚೇರಿಯಲ್ಲಿ ಮತ್ತೆ ಮಾರಕಾಸ್ತ್ರ ವಶ

ಹಿಂಸಾಚಾರದಲ್ಲಿ ಸುಮಾರು 36 ಸರ್ಕಾರಿ ವಾಹನಗಳು, ಸುಮಾರು 300 ಖಾಸಗಿ ವಾಹನಗಳು ಮತ್ತು ಅನೇಕ ಮನೆಗಳು ನಾಶವಾಗಿವೆ ಎಂದು ಅಂದಾಜಿಸಲಾಗಿದೆ ಎಂದು ಸಮಿತಿ ಹೇಳಿದೆ, ಹಾನಿಯು ಸುಮಾರು 10 ರಿಂದ 15 ಕೋಟಿ ರೂ. ಎಂದು ವರದಿ ತಿಳಿಸಿದೆ.

ಸತ್ಯ ಶೋಧನ ವರದಿಯ ಪ್ರಮುಖ ಅಂಶಗಳು
*36 ಸರ್ಕಾರಿ ವಾಹನಗಳು, 300 ಖಾಸಗಿ ವಾಹನಗಳು ಸುಟ್ಟು ಹೋಗಿವೆ. ಇದರಿಂದ 10-15 ಕೋಟಿ ರೂ ನಷ್ಟ...
ಗಲಭೆ ವ್ಯವಸ್ಥಿತ ಪೂರ್ವನಿಯೋಜಿತ ಕೃತ್ಯ.
* ನಿರ್ದಿಷ್ಟವಾಗಿ ಕೆಲ ಪ್ರಭಾವಿ ಹಿಂದೂಗಳನ್ನು ಟಾರ್ಗೆಟ್ ಮಾಡಿದ್ದ ಕಿಡಿಗೇಡಿಗಳ ಗುಂಪು.
* ಗಲಭೆಯಲ್ಲಿ ಹೊರಗಿನವರ ಜತೆ ಸ್ಥಳೀಯರೂ ಭಾಗಿಯಾಗಿದ್ರು.
* ಸ್ಥಳೀಯರಿಗೆ ಮೊದಲೇ ಗೊತ್ತಿತ್ತು.
* ಗಲಭೆಗೆ ರಾಜಕೀಯ ವೈಷಮ್ಯ ಮತ್ತು ಕೋಮು ವೈಷಮ್ಯಗಳ ಪ್ರಚೋದನೆ ಕಾರಣ....
* ಇಡೀ ಗಲಭೆ ನಡೆಸಿದ್ದು, ಸ್ಕೆಚ್ ಹಾಕಿದ್ದು ಎಸ್ಡಿಪಿಐ ಮತ್ತು ಪಿಎಫ್ಐ ಸಂಘಟನೆಗಳು.

ವರದಿಯ ಶಿಫಾರಸ್ಸುಗಳು
* ಘಟನೆಗೆ ಕಾರಣರಾದವರಿಂದ‌ಲೇ ನಷ್ಟ ಭರ್ತಿ ಮಾಡಿಸಿಕೊಳ್ಳಬೇಕು.
* ಯಾವುದೇ ಮುಲಾಜಿಗೊಳಗಾಗದೇ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು.
* ಧಾರ್ಮಿಕ‌ ಉಗ್ರಗಾಮಿ ಸಂಘಟನೆಗಳಿಂದ ಹಣ ಹರಿದು ಬರುತ್ತಿರುವ ಬಗ್ಗೆ ಎನ್ಐಎ ತನಿಖೆ ಅಗತ್ಯವಿದೆ.
* ಧಾರ್ಮಿಕ ಸೂಕ್ಷ್ಮ‌ ಪ್ರದೇಶಗಳ ಮೇಲೆ ಪೊಲೀಸ್ ಕಣ್ಗಾವಲಿ ಹೆಚ್ಚಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು.
* ಸಾಮಾಜಿಕ ಜಾಲತಾಣಗಳ ಮೇಲೆ ಸೈಬರ್ ದಳ ತೀವ್ರ ನಿಗಾ ಇಟ್ಟು ದ್ವೇಷ ಬಿತ್ತುವ ಪೋಸ್ಟ್ ಸಂದೇಶಗಳನ್ನು ನಿಯಂತ್ರಿಸಬೇಕು.
* ಡ್ರಗ್ ಪೂರೈಕೆ ಜಾಲಗಳ ತಡೆಗೆ ಕಠಿಣ ಕ್ರಮ ಆಗಬೇಕು.
* ಇಂಥ ಕೃತ್ಯಗಳ ತಡೆಗೆ ಪೊಲೀಸ್ ಇಲಾಖೆ ಆಧುನೀಕರಣ ಸ್ಪರ್ಶ ಕೊಡಬೇಕು.

ಆಗಸ್ಟ್ 11ರಂದು ಕಾವಲ್ ಬೈರಸಂದ್ರ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಗಲಭೆ ನಡೆದಿತ್ತು. ಪುಲಿಕೇಶಿ ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಿವಾಸ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ಗಲಭೆಕೋರರು ದಾಳಿ ನಡೆಸಿ ಗಲಭೆ ನಡೆಸಿದ್ದರು. ಈ ಕುರಿತು ನೂರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

click me!