ರಾಗಿಣಿ ಅರೆಸ್ಟ್: ಮುಂದಿನ ಕಾನೂನು ಪ್ರಕ್ರಿಯೆಗಳೇನು..? ಇಲ್ಲಿದೆ ಮಾಹಿತಿ

By Suvarna NewsFirst Published Sep 4, 2020, 7:26 PM IST
Highlights

ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಅರೆಸ್ಟ್ ಮಾಡಿದೆ. ಹಾಗಾದ್ರೆ, ಮುಂದಿನ ಕಾನೂನು ಪ್ರಕ್ರಿಯೆಗಳು ಏನು..?

ಬೆಂಗಳೂರು, (ಸೆ.04): ಸ್ಯಾಂಡಲ್​ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಆರೋಪ ಕುರಿತು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರನ್ನು ಸಂಜೆ ಬಂಧಿಸಿದ್ದಾರೆ.

"

ಇಂದು (ಶುಕ್ರವಾರ) ಬೆಳಗ್ಗೆ ವಿಚಾರಣೆಗೆ ಆಗಮಿಸಿದ ರಾಗಿಣಿ ಅವರನ್ನು ಸಿಸಿಬಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದರು. ಇದೀಗ ರಾಗಿಣಿಯವರನ್ನು ಬಂಧಿಸಲಾಗಿದ್ದು, ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.

ವಿಚಾರಣೆಗೆ ಹೋಗಿದ್ದ ನಟಿ ರಾಗಿಣಿ ದ್ವಿವೇದಿ ಅರೆಸ್ಟ್

ವೀಕೆಂಡ್ ಅಂದ್ರೆ, ಶನಿವಾರ, ಭಾನುವಾರ ಇರುವುದರಿಂದ ಕೋರ್ಟ್‌ಗೆ ರಜೆ ಇರಲಿದೆ. ಈ ಹಿನ್ನೆಲೆಯಲ್ಲಿ ರಾಗಿಣಿ ಅವರಿಗೆ ಜಾಮೀನು ಸಿಗುವುದಿಲ್ಲ.  

ಮುಂದಿನ ಕಾನೂನು ಪ್ರಕ್ರಿಯೆಗಳು ಏನು..?
* ನಟಿಯನ್ನು ಕೋರ್ಟ್ ಗೆ ಹಾಜರ್ ಪಡಿಸಲಿರುವ ಸಿಸಿಬಿ
* ಇದಕ್ಕೂ ಮೊದಲು ವೈದ್ಯಕೀಯ ತಪಾಸಣೆ ಮಾಡಿಸಲಿರುವ ಅಧಿಕಾರಿಗಳು
* ವೈದ್ಯಕೀಯ ತಪಾಸಣೆ ಬಳಿಕ ಕೋರ್ಟ್ ಗೆ ಹಾಜರ್
* ವಿಡಿಯೊ‌ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸುವ ಸಾಧ್ಯತೆ
* ಬಳಿಕ ಪ್ರಕರಣದಲ್ಲಿ ಪ್ರಮುಖ ಪಾತ್ರ ಇರುವ ಕಾರಣ ಹೆಚ್ಚಿನ ವಿಚಾರಣೆಗೆ ಸಿಸಿಬಿ ವಶಕ್ಕೆ ಕೇಳುವ ಸಾಧ್ಯತೆ
* ಸುಮಾರು 7 ರಿಂದ 14 ದಿನ ಸಿಸಿಬಿ ಪೊಲೀಸರ ವಶಕ್ಕೆ ಮನವಿ
* ನ್ಯಾಯಧೀಶರು 5 ರಿಂದ 7 ದಿನ ಪೊಲೀಸ್ ಕಸ್ಟಡಿಗೆ ನೀಡಬಹುದು
* ಮತ್ತೆ ಹೆಚ್ಚಿನ ವಿಚಾರಣೆಗೆ ಒಳ ಪಡಿಸುವ ಸಾಧ್ಯತೆ

click me!