ಬೆಂಗಳೂರು ಗಲಭೆ: ಮಸೀದಿ ಮೌಲ್ವಿಗಳ ವಿಚಾರಣೆಗಿಳಿದ ಪೊಲೀಸರು

By Suvarna NewsFirst Published Aug 12, 2020, 3:43 PM IST
Highlights

 ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲರ್ಟ್ ಆಗಿದ್ದು, ಪ್ರಕರಣದ ಹಿಂದಿನ ಕೈವಾಡವನ್ನು ಪತ್ತೆಗೆ ಬಲೆಬೀಸಿದ್ದಾರೆ.

ಬೆಂಗಳೂರು, (ಆ.12): ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು , ಮಸೀದಿ ಮೌಲ್ವಿಗಳ ವಿಚಾರಣೆಗಿಳಿದಿದ್ದಾರೆ.
 
ಹೌದು....ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಬೆಚ್ಚಿ ಬೀಳುವ ಗಲಭೆ, ಹಿಂಸಾಚಾರ ಘಟನೆ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಮೌಲ್ವಿ ಮೌಲಾನಾ ಮುಜಾಮಿಲ್ ನನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ.

'ಅವರನ್ನು ಬಂಧಿಸಿ, ಅವರದೇ ಭಾಷೆಯಲ್ಲಿ ತಕ್ಕ ಪಾಠ ಕಲಿಸಿ'; ರಾಜಕೀಯ ನಾಯಕರಿಂದ ಗಲಭೆ ಖಂಡನೆ

ನಿನ್ನೆ (ಮಂಗಳವಾರ) ಆರೋಪಿಗಳಿಗೆ ಆಶ್ರಯ ನೀಡಿದ್ರು ಅನ್ನೋ ಕಾರಣಕ್ಕೆ ಮೌಲಾನಾ ಮುಜಾಮಿಲ್ ನನ್ನು ಪೊಲೀಸರು ಡಿಜೆ ಹಳ್ಳಿ ಠಾಣೆಗೆ ಕರೆತಂದು ವಿಚಾರಣೆ ಮಾಡಿ ಬಳಿಕ ವಾಪಸ್ ಕಳುಹಿಸಿದ್ದಾರೆ.

ಹಲವು ಆರೋಪಿಗಳು ಅರೆಸ್ಟ್
ಘಟನೆ ಸಂಬಂಧ ಈಗಾಗಲೇ ಪೊಲೀಸರು 100ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದು, ಗಲಭೆ ಹಿಂದಿರುವವರ ಪತ್ತೆಗೆ ತನಿಖೆ ನಡೆಸಿದ್ದಾರೆ.

ಪುಲಕೇಶಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ತಂಗಿ ಮಗ ಅಂದ್ರೆ ಅಳಿಯ ಪೈಗಂಬರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. 

ಇದನ್ನು ಖಂಡಿಸಿ ಒಂದು ಸಮುದಾಯದ ಜನರು ಒಟ್ಟುಗೂಡಿ ಕಾವಲ್ ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಬೆಂಕಿ ಹಚ್ಚಿದ್ದಾರೆ. ಬಳಿಕ ಹಾದಿಯಲ್ಲಿದ್ದ ವಾಹನಗಳಿಗೂ ಕಲ್ಲು ತೂರಿದ್ದಲ್ಲದೇ ಬೆಂಕಿ ಹಚ್ಚಿ ಪುಂಡಾಟ ಮೆರೆದಿದ್ದಾರೆ.

ಸಾಲದಕ್ಕೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೂ ನುಗ್ಗಿ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರಿಗೆ ಗಾಯಗಲಾಗಿವೆ. ಇದರಿಂದ ಅನಿವಾರ್ಯವಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಫೈರಿಂಗ್‌ನಲ್ಲಿ ಮೂವರು ಬಲಿಯಾಗಿದ್ರೆ, ಹಲವು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

click me!