ಪ್ರೇಮನಗರಿಯ ಹೃದಯಭಾಗದ ಕಟ್ಟಡದಲ್ಲಿ 30  ವರ್ಷ ಹಿಂದಿನ ಅಸ್ತಿಪಂಜರ! ಯಾರದ್ದು?

Published : Aug 11, 2020, 04:25 PM ISTUpdated : Aug 11, 2020, 04:27 PM IST
ಪ್ರೇಮನಗರಿಯ ಹೃದಯಭಾಗದ ಕಟ್ಟಡದಲ್ಲಿ 30  ವರ್ಷ ಹಿಂದಿನ ಅಸ್ತಿಪಂಜರ! ಯಾರದ್ದು?

ಸಾರಾಂಶ

ಪ್ಯಾರಿಸ್ ಹೃದಯ ಭಾಗದ ಹಳೆಯ ಕಟ್ಟಡದಲ್ಲಿ ಅಸ್ತಿಪಂಜರ ಪತ್ತೆ/ ಮೂವತ್ತರು ವರ್ಷ ಹಿಂದಿನ ಅಸ್ತಿಪಂಜರ/ ಕಟ್ಟಡ ಪುನರುಜ್ಜೀವನ ಮಾಡುವ ವೇಳೆ ಪತ್ತೆ/ ಬರೋಬ್ಬರಿ 35 ಮಿಲಿಯನ್ ಯುರೋ(3,08,14,79,159 ರೂ.) ಮೌಲ್ಯದ ಜಾಗ

ಪ್ಯಾರಿಸ್ (ಆ. 10)  ಪ್ಯಾರೀಸ್ ನ ಬಹುಮುಖ್ಯ ಪ್ರದೇಶದ 35 ಮಿಲಿಯನ್ ಯುರೋ(3,08,14,79,159 ರೂ.) ಬೆಲೆಬಾಳುವ ಜಾಗದಲ್ಲಿ ಅಸ್ತಿಪಂಜರ ಪತ್ತೆಯಾಗಿದೆ.

ಜಗತ್ ಪ್ರಸಿದ್ಧ ಹೋಟೆಲ್ ಲೆಸಾವರೀತ್(Les Invalides) ಮತ್ತು ಪ್ರೆಂಚ್ ಪ್ರಧಾನಿಯ ಗೃಹಕಚೇರಿಗೆ ಅನತಿ ದೂರದಲ್ಲಿ ಪತ್ತೆಯಾಗಿದೆ. ಅಂದರೆ ಪ್ಯಾರಿಸ್ ನ ಹೃದಯಭಾಗದಲ್ಲಿಯೇ ಅಸ್ತಿಪಂಜರ ಪತ್ತೆಯಾಗಿದೆ. 

ಕಟ್ಟಡದ ಸುತ್ತಮುತ್ತ ಗಿಟಗಂಟಿ ಬೆಳೆದುಕೊಂಡಿದೆ.  ಕಟ್ಟಡವನ್ನು ಪುನರುಜ್ಜೀವನ ಮಾಡುತ್ತಿದ್ದ ವೇಳೆ ಅಸ್ತಿಪಂಜರ ಸಿಕ್ಕಿದೆ.  ಇಲ್ಲಿ ಕವಿ, ನಾಟಕಕಾರ ಫ್ರಾನ್ಸಿಸ್ ಕೋಪೆ ಇದ್ದರು ಎಂನ ದಾಖಲೆಗಳು ಇವೆ. 1980  ರ ನಂತರ ಇಲ್ಲಿ ಜೀಡು ಬೆಳೆಯಲು ಆರಂಭವಾಗಿತ್ತು.

ಹುಚ್ಚು ಪಪ್ರೀತಿಗೆ ಹೆತ್ತ ತಾಯಿಯನ್ನೇ ಕೊಲೆ ಮಾಡಿದ

ಜೇನ್ ಬೆರಾಂಡ್ ಲಾಫೋಂಟಾ ಎನ್ನುವವರು  35 ಮಿಲಿಯನ್ ಯುರೋ ಕೊಟ್ಟು ಜಾಗ ಖರೀದಿ ಮಾಡಿದ್ದರು. ಅಂದರೆ ಹರಾಜಿನಲ್ಲಿ ಆರುಪಟ್ಟು ಹೆಚ್ಚಿಗೆ ಹಣ ನೀಡಿ ಜಾಗ ಖರೀದಿಸಿದ್ದರು.

ಫ್ರೆಂಚ್ ಬಂಡವಾಳ  ಹೂಡಿಕೆ ಕಂಪನಿ ವೆಂಡಲ್ ದ ಮಾಜಿ ಅಧ್ಯಕ್ಷರಾಗಿರುವ ಜೇನ್ ಬೆರಾಂಡ್ ಲಾಫೋಂಟಾ  ಈಗ ತಮ್ಮದೇ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.  ಫೆಬ್ರವರಿಯಿಂದ ಕಟ್ಟಡದ ಪುನರುಜ್ಜೀವನ ಕೆಲಸ ಆರಂಭ ಮಾಡಲಾಗಿತ್ತು.

ಅಸ್ತಿಪಂಜರ ಪತ್ತೆಯಾದ ಸುದ್ದಿ ಇದೀಗ ಬಹಿರಂಗವಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಎಲುಬಿನ ತುಂಡುಗಳು ಮತ್ತು ಸಿಕ್ಕ ಚಾಕುವೊಂದನ್ನು ತೆಗೆದುಕೊಂಡು ಹೋಗಿದ್ದು ತನಿಖೆ ಆರಂಭಿಸಿದ್ದಾರೆ.

ಈ ಪ್ರಕರಣ ಬಹಳ ಕ್ಲಿಷ್ಟಕರವಾಗಿದ್ದು ವ್ಯಕ್ತಿ ತನ್ನನು ತಾನೇ ಚುಚ್ಚಿಕೊಂಡು ಸತ್ತನೋ, ಅಥವಾ ಬೇರೆ ಯಾರಾದರೂ ಕೊಲೆ ಮಾಡಿದರೋ? ಎಂಬೆಲ್ಲ ಮಾಹಿತಿ ಕಲೆಹಾಕಲು ಮೂವತ್ತು ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ