Bengaluru: ಒಂದೂವರೆ ವರ್ಷದ ಬಳಿಕ ಪೊಲೀಸರ ಪಿಸ್ತೂಲ್ ಸದ್ದು: ದರೋಡೆಕೋರನ ಕಾಲಿಗೆ ಗುಂಡೇಟು

By Sathish Kumar KHFirst Published Jul 11, 2023, 3:22 PM IST
Highlights

ಕಳೆದ ಒಂದೂವರೆ ವರ್ಷದಿಂದ ತಣ್ಣಗಿದ್ದ ಪೊಲೀಸರ ಬಂದೂಕು ಈಗ ಸದ್ದು ಮಾಡಿದ್ದು, ಹಲವು ದರೋಡೆಗಳನ್ನು ಮಾಡಿ ಎಸ್ಕೇಪ್‌ ಆಗುತ್ತಿದ್ದವರ ಕಾಲು ಸೀಳಿದೆ.

ವರದಿ- ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಜು.11): ಆತ ಖತರ್ನಾಕ್ ಕಿಲಾಡಿ. ನಂಬರ್ ಪ್ಲೇಟ್ ಇಲ್ಲದಿರೊ ಬೈಕ್ ಹತ್ತಿ ಬಂದ್ರೆ ಮುಗೀತು. ಮೊಬೈಲ್ ಹಣ ಏನೇ ಇದ್ರು ಬಿಡಲ್ಲ. ತಿರುಗಿ ಬಿದ್ರೆ ಚಾಕು ತೆಗೆದು ಚುಚ್ಚೋಕೆ ಹೋಗ್ತಿದ್ದ. ಹೀಗೆ ಅಟ್ಟಹಾಸ ಮೆರಿತಿದ್ದವನ್ನ ಪೊಲೀಸರು ಸರಿಯಾಗೆ ಬುದ್ಧಿ ಕಲಿಸಿದ್ದಾರೆ. ದರೋಡೆಕೋರನ ಕಾಲಿಗೆ ಗುಂಡೇಟು ಹೊಡೆದು ಆಸ್ಪತ್ರೆ ಬೆಡ್ ಮೇಲೆ ಮಲಗಿಸಿದ್ದಾರೆ.

ಒಂದೂವರೆ ವರ್ಷಗಳಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೊಲೀಸರ ಬಂದೂಕು ಸದ್ದು ಮಾಡಿರಲಿಲ್ಲ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿ ಓಡಿ ಹೋಗುತ್ತಿದ್ದ ಪಾಪಿಗಳ ಕಾಲು ಸೀಳಿ ಬರೋಬ್ಬರಿ ಒಂದೂವರೆ ವರ್ಷ ಕಳೆದಿತ್ತು. ಯಾವಾಗ ಖಾಕಿ ಪಡೆ ಸೈಲೆಂಟ್ ಆಗಿತ್ತೋ ಪಾತಕಿಗಳಿಗೆ ರೆಕ್ಕೆ ಪುಕ್ಕ ಬಂದುಬಿಟ್ಟಿತ್ತು. ಹೀಗಾಗಿ, ಬೆಂಗಳೂರಿನಲ್ಲಿ ಕಂಡ ಕಂಡಲ್ಲಿ ರಾಬರಿ ಮಾಡಿ ಅಟ್ಟಹಾಸ ಮೆರಿಯುತ್ತಿದ್ದರು. ಹೀಗೆ ಪೌರುಷ ತೋರ್ತಿದ್ದವರಿಗೆ ಮತ್ತೆ ದಿಗಿಲು ಹುಟ್ಟಿದೆ.  ಯಾಕಂದ್ರೆ ರಾಬರಿ ಮಾಡಿ ಭಯ ಹುಟ್ಟಿಸಿದ್ದ ಪಾತಕಿಗೆ ಪೊಲೀಸರು ಗುಂಡೇಟು ಹೊಡೆದು ವಶಕ್ಕೆ ಪಡೆದು ಆಸ್ಪತ್ರೆ ಬೆಡ್‌ ಮೇಲೆ ಮಲಗಿಸಿದ್ದಾರೆ. 

Latest Videos

Bengaluru: ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್‌

ಡ್ರಗ್ಸ್‌ ತಗೊಂಡು ಫೀಲ್ಡಿಗಿಳಿದ್ರೆ ಕನಿಷ್ಠ ನಾಲ್ಕೈರು ರಾಬರಿ ಫಿಕ್ಸ್: ಇನ್ನು ರಾಬರಿ ಮಾಡ್ತಿದ್ದ ಆಸಾಮಿ‌ ಹೆಸರು ಯಾಸರ್ ಅಲಿಯಾಸ್ ಘೋರ್. ಚಾಕು ತೋರಿಸಿ ಸುಲಿಗೆ ಮಾಡ್ತಿದ್ದನು.  ಬೈಕ್ ನಲ್ಲಿ ಬರ್ತಾ ಮೊಬೈಲ್ ಚಿನ್ನದ ಸರ ಕ್ಷಣಮಾತ್ರದಲ್ಲಿ ಎಗರಿಸಿಬಿಡ್ತಿದ್ದ. ಹೀಗೆ ಬೆಳಗ್ಗೆ 3 ಗಂಟೆಗೆ ಎದ್ದು ಡ್ರಗ್ಸ್ ತಗೊಂಡು ಫೀಲ್ಡಿಗೆ ಇಳಿದ್ರೆ ಮುಗೀತು. ಸಂಜೆ 6 ಗಂಟೆವರೆಗು ರಾಬರಿ ಮಾಡುತ್ತಿದ್ದನು. ಒಂದು ವೇಳೆ ಹಣ ಕೊಡಲಿಲ್ಲ ಅಂದರೆ ಚಾಕು ತೋರಿಸಿ ಹೆದರಿಸುತ್ತಿದ್ದನು. ಹೀಗೆ ಇತ್ತೀಚೆಗೆ ವೈಯಾಲಿಕಾವಲ್ ನಲ್ಲಿ ನಡೆದುಕೊಂಡು ಹೋಗ್ತಿದ್ದ ಮಹಿಳೆಯ ಮೊಬೈಲ್ ಫೋನ್ ಎಗರಿಸಿದ್ದನು. ಇಷ್ಟೇ ಅಲ್ಲ ಹಾಲಿನ ವ್ಯಾಪಾರಿಗೆ ಚಾಕು ತೋರಿಸಿ 13 ಸಾವಿರ ಹಣ ಸುಲಿಗೆ ಮಾಡಿದ್ದನು.

ಸದ್ಯಕ್ಕೆ 6 ಪ್ರಕರಣಗಳಲ್ಲಿ ಆರೋಪಿ: ಹೀಗೆ ಬೆಂಗಳೂರು ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನ, ಚೈನ್‌ ಸ್ನ್ಯಾಚಿಂಗ್, ರಾಬರಿ, ಸುಲಿಗೆನಂತಹ  6ಕ್ಕೂ ಹೆಚ್ಚು ಪ್ರಕರಣಗಳು ಇವನ ಮೇಲೆ ದಾಖಲಾಗಿದ್ದವು. ಯಾವಾಗ ಈತನ ಉಪಟಳ‌ ಹೆಚ್ಚಾಯ್ತೋ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಆರೋಪಿ ಪತ್ತೆಗೆ ವಿಶೇಷ ತಂಡವೊಂದನ್ನ ರಚನೆ ಮಾಡಿದ್ದರು. ಹೀಗೆ ಆರೋಪಿ ಯಾಸರ್ ಬೇಟೆಗೆ ಮುಂದಾಗಿದ್ದ ಶೇಷಾದ್ರಿ ಪುರಂ ಪೊಲೀಸರಿಗೆ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದ ಆತನ ಸಹಚರ ಪತ್ತೆಯಾಗಿದ್ದನು. ಆತನ ಮಾಹಿತಿ ಮೇರೆಗೆ ಯಾಸರ್ ಅರಮನೆ ಮೈದಾನದಲ್ಲಿ ಅಡಗಿದ್ದಾನೆ ಅನ್ನೋದು ಗೊತ್ತಾಗಿತ್ತು.

ಪೊಲೀಸರಿಗೆ ಚಾಕುವಿನಿಂದ ಹಲ್ಲೆಗೆ ಯತ್ನ: ಇನ್ನು ದರೋಡೆಕೋರ ಯಾಸರ್‌ ಫೀಲ್ಡಿಗೆ ಇಳಿದು ರಾಬರಿಗೆ ತಯಾರಾಗಿದ್ದನು. ಅಷ್ಟೊತ್ತಿಗೆ ಆರೋಪಿಯನ್ನ ಪೊಲೀಸರು ಸುತ್ತುವರೆದಿದ್ದರು. ಅಲ್ಲೂ ಬಾಲ ಬಿಚ್ಚಿದ ಆಸಾಮಿ ಪೊಲೀಸ್ ಕಾನ್ಸ್ ಟೇಬಲ್ ಮೇಲೆ‌ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದನು. ಈ ವೇಳೆ ಶೇಷಾದ್ರಿ ಪುರಂ ಠಾಣೆ ಇನ್ಸ್ ಪೆಕ್ಟರ್ ಹೇಮಂತ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟಾದರೂ ಮಾತು ಕೇಳದೇ ಚಾಕು ತೋರಿಸಿ ಓಡಿ ಹೋಗಲು ಯತ್ನಿಸಿದಾಗ ಬಲಗಾಲಿಗೆ ಗುಂಡು ಹಾರಿಸಿ ಆರೋಪಿಯನ್ನ ಬಂಧಿಸಿದ್ದಾರೆ.

ತಿಂಗಳು ಪೂರೈಸಿದ ಶಕ್ತಿ ಯೋಜನೆ: ಸರ್ಕಾರಿ ಬಸ್‌ಗಳಲ್ಲಿ 16.75 ಕೋಟಿ ಮಹಿಳೆಯರ ಉಚಿತ ಪ್ರಯಾಣ

ಇನ್ನು ಕಾಲಿಗೆ ಗುಂಡೇಟು ತಿಂದ ರೌಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿ ಬಂಧಿಸಿ ಆತನಿಂದ 6 ಮೊಬೈಲ್ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗ್ತಿದೆ. ಏನೇ ಹೇಳಿ ಸೈಲೆಂಟ್ ಆಗಿದ್ದ ಪೊಲೀಸ್ ಬಂದೂಕು ಸದ್ದು ಮಾಡಿದ್ದೇ ತಡ ನಟೋರಿಯಸ್ ಗಳಲ್ಲಿ ನಡುಕ‌ ಹುಟ್ಟಿರೋದಂತು ಸತ್ಯ.

click me!