
ಮಾಗಡಿ(ಜು.11): ತಾಳಿಯ ಚಿನ್ನದ ಗುಂಡು ಕಳವಾಗಿರುವ ವಿಚಾರಕ್ಕೆ ಸಂಬಂಧಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಬೈರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಂಗ ಚೆಲುವಯ್ಯ(63) ಕೊಲೆಯಾದವರು. ಬೆಟ್ಟಸ್ವಾಮಿ ಪುತ್ರ ಸುದರ್ಶನ ಕೃತ್ಯ ಎಸಗಿದವನು.
ಘಟನೆ ವಿವರ:
ಬೈರನಹಳ್ಳಿಯ ಗಂಗ ಚೆಲುವಯ್ಯನವರ ಸಂಬಂಧಿ ನಂದಿನಿ ಗ್ರಾಮದ ಬೆಟ್ಟಸ್ವಾಮಿ ಸಂಬಂಧಿ ಅಟ್ಟಮ್ಮನವರ ತಾಳಿಗುಂಡನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ರಾಜಿ ಪಂಚಾಯಿತಿಯಲ್ಲಿ ನಂದಿನಿ ಕಳ್ಳತನ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದರು.
ಈ ವಿಚಾರವಾಗಿ ಬೆಟ್ಟಸ್ವಾಮಿ ಪತ್ನಿ ಶಿವಮ್ಮನವರು ಗಂಗ ಚೆಲುವಯ್ಯನವರ ವಿರುದ್ಧ ಗ್ರಾಮದಲ್ಲಿ ಪದೇಪದೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಭಾನುವಾರ ಸಂಜೆ ಬೆಟ್ಟಸ್ವಾಮಿ ಪತ್ನಿ ಶಿವಮ್ಮ, ಪುತ್ರ ಸುದರ್ಶನ, ರಾಜು ಗ್ರಾಮಕ್ಕೆ ಬಂದು ಗಂಗಚೆಲುವಯ್ಯ ಮನೆಯ ಮುಂದೆ ನಂದಿನಿಗೆ ಬೆಂಬಲಿಸಿದ್ದೀರಾ ಎಂದು ಆರೋಪಿಸಿ ತಗಾದೆ ತೆಗೆದಿದ್ದಾರೆ.
ಮಡಿಕೇರಿ: ಗೌರಿ ಕೊಲೆ ಆರೋಪಿಗಳ ಪರ ವಕೀಲಗೆ ನಕ್ಸಲರಿಂದ ಬೆದರಿಕೆ?: ದೂರು ದಾಖಲು
ಸುದರ್ಶನ ಕೋಪದಲ್ಲಿ ಗಂಗಚೆಲುವಯ್ಯನವರ ಕಪಾಳಕ್ಕೆ ಹೊಡೆದಾಗ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮಾಗಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆ ಯುಸಿರೆಳೆದಿದ್ದಾರೆ. ನಮ್ಮ ತಂದೆಗೆ ಕಪಾಳಕ್ಕೆ ಹೊಡೆದು ಕೊಲೆ ಮಾಡಿರುವುದಾಗಿ ಗಂಗಚೆಲುವಯ್ಯ ಪುತ್ರ ರಾಜಮುಡಿ ಮಾಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ