* ಬೆಂಗಳೂರು ಪೊಲೀಸರಿಂದ ಬಿಟ್ ಕಾಯಿನ್ ಖಾತೆ ಫ್ರೀಜ್
* ಕುಮಾರಸ್ವಾಮಿ ಲೇಔಟ್ ಪೊಲೀಸರ ಕಾರ್ಯಾಚರಣೆ
* ಡ್ರಗ್ಸ್ ಪ್ರಕರಣದ ಜತೆ ನಂಟು ಹೊಂದಿದ್ದವರ ಖಾತೆ
* ಮಾರುಕಟ್ಟೆಯಲ್ಲಿಯೂ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಬಿಟ್ ಕಾಯಿನ್
ಬೆಂಗಳೂರು(ಡಿ. 06) ಅಷ್ಟಕ್ಕೂ ಇಡೀ ರಾಜ್ಯದ (Karnataka) ಗಮನ ಸೆಳೆದಿದ್ದ ಬಿಟ್ ಕಾಯಿನ್ ಹಗರಣ (Bitcoin Scam) ಏನಾಯ್ತು ಎಂಬುದಕ್ಕೆ ಯಾರ ಬಳಿಯೂ ಸಮರ್ಪಕ ಉತ್ತರ ಇಲ್ಲ. ಆದರೆ ಇನ್ನೊಂದು ಕಡೆ ರಾಜ್ಯದಲ್ಲೇ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ (Bengaluru Police) ವಿಭಾಗದ ಪೊಲೀಸರು ಬಿಟ್ ಕಾಯಿನ್ ರಿಕವರಿ ಮಾಡಿದ್ದಾರೆ.
ಸುಮಾರು ಏಳು ಸಾವಿರ ರೂಪಾಯಿ ಬೆಲೆ ಬಾಳುವ ಬಿಟ್ ಕಾಯಿನ್ ರಿಕವರಿ ಮಾಡಲಾಗಿದೆ. ಡಿಸಿಪಿ ಹರೀಶ್ ಪಾಂಡೆ ತಂಡ ಕಾರ್ಯಾಚರಣೆ ನಡೆಸಿದೆ. ಬೆಂಗಳೂರಿನ ಡ್ರಗ್ಸ್ ಕೇಸಲ್ಲಿ ಬಿಟ್ ಕಾಯಿನ್ ಅಕೌಂಟ್ ಪ್ರೀಜ್ ಮಾಡಲಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರು ಬಿಟ್ ಕಾಯಿನ್ ಅಕೌಂಟ್ ಫ್ರೀಜ್ ಮಾಡಿದ್ದಾರೆ.
undefined
ಸೆಕ್ಯೂರಿಟಿ ಕೊಡಲು ಪೊಲೀಸರು ಸಿದ್ಧ; ಆದರೆ ಶ್ರೀಕಿಯೇ ಇಲ್ಲ
ಅಮೆರಿಕದಿಂದ (USA) ಉಪಕರಣ: ಅಮೇರಿಕಾದಿಂದ ಟ್ರೆಜರ್ ಲಾಕರ್ ಎಂಬ ಉಪಕರಣ ತರಿಸಿ ಯಶಸ್ವಿಯಾಗಿ ಬಿಟ್ ಕಾಯಿನ್ ಅಕೌಂಟ್ ಪ್ರೀಜ್ ಮಾಡಲಾಗಿದೆ. ಈ ಹಿಂದೆ ರಾಹುಲ್ ಹಾಗೂ ತುಳಸಿ ರಾಮ್ ಶರ್ಮಾ ಎಂಬುವರನ್ನ ಡ್ರಗ್ಸ್ ಕೇಸಲ್ಲಿ ಬಂಧಿಸಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅನೇಕ ಮಾಹಿತಿ ಕಲೆ ಹಾಕಿದ್ದರು.
ಈ ವೇಳೆ ಆರೋಪಿಗಳು ವಿದೇಶದಿಂದ ಮಾದಕ ವಸ್ತುಗಳನ್ನು (Drugs) ತರಿಸಲು ಬಿಟ್ ಕಾಯಿನ್ ಬಳಸಿದ್ದು ಗೊತ್ತಾಗಿದೆ ಹೀಗಾಗಿ ಟ್ರೆಜರ್ ಲಾಕರ್ ಎಂಬ ಉಪಕರಣ ತರಿಸಿ ನ್ಯಾಯಾಧೀಶರ ಸಮಕ್ಷಮದಲ್ಲಿ ತುಳಸಿರಾಮ್ ಬಿಟ್ ಕಾಯಿನ್ ಅಕೌಂಟ್ ಪ್ರೀಜ್‌ಮಾಡಲಾಗಿದೆ. 2020 ರ ಡಿಸೆಂಬರ್ ನಲ್ಲಿ ಈ ಪ್ರಕರಣ ನಡೆದಿತ್ತು.
ಶ್ರೀಕಿ ಪ್ರಕರಣ: ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಹ್ಯಾಕರ್ ಶ್ರೀಕಿ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯೇ ಸ್ಪಷ್ಟನೆ ನೀಡಿತ್ತು. ಬಿಟ್ ಕಾಯಿನ್ (Bitcoin) ಹಗರಣಕ್ಕೆ ಸಂಬಂಧಿಸಿ ಪೊಲೀಸ್ ಆಯುಕ್ತರ ಕಚೇರಿಯಿಂದ ಸ್ಪಷ್ಟನೆ ನೀಡಿತ್ತು. ಅನೇಕ ಅನುಮಾನಗಳಿಗೆ ಉತ್ತರ ಇಲ್ಲಿ ಸಿಗುವ ಕೆಲಸ ಮಾಡಿತ್ತು.
ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ನಡೆಸಲಾಗಿದೆ ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ಪ್ರಕರಣದ ತನಿಖೆ ನಡೆಸಿಲ್ಲ. ಕೆ.ಜಿ.ನಗರ, ಸೈಬರ್ ಕ್ರೈಮ್, ಅಶೋಕನಗರ 3 ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಕೆ.ಜಿ.ನಗರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಈಗಾಗಲೇ ಚಾರ್ಜಶೀಟ್ ಸಹ ಸಲ್ಲಿಸಲಾಗಿದೆ ಎಂದು ತಿಳಿಸಿತ್ತು.
ಹ್ಯಾಕರ್ ಶ್ರೀಕಿಯನ್ನು ಡ್ರಗ್ಸ್ ಕೇಸ್ ನಲ್ಲಿ ಬಂಧಿಸಲಾಗಿತ್ತು. ಇದಾದ ಮೇಲೆ ಒಂದಾದ ಮೇಲೆ ಒಂದು ವಿಚಾರಗಳು ತೆರೆದುಕೊಂಡವು. ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ ಮೇಲೆ ಹೊತ್ತಿಕೊಂಡ ಬೆಂಕಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ ಸಮರಕ್ಕೆ ವೇದಿಕೆ ಮಾಡಿಕೊಟ್ಟಿತು. ಟ್ವಿಟರ್ ನಲ್ಲಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ದೊಡ್ಡ ಯುದ್ಧವೇ ನಡೆದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿ ವಾಕ್ ಸಮರಗಳು ನಡೆಯುತ್ತಲೇ ಇದ್ದವು. ಪೊಲೀಸ್ ವಶದಲ್ಲಿ ಶ್ರೀಕಿ ಇದ್ದಾಗಲೇ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿಕೊಂಡು ಬಂದಿತ್ತು.
ಬಿಟ್ ಕಾಯಿನ್ ಏನು ಏತ್ತ? ಮೊದಲೆ ಹೇಳಿದಂತೆ ಇದೊಂದು ವರ್ಚುವಲ್ ಮನಿ. ಡಾಲರ್ ಅಥವಾ ರೂಪಾಯಿ ತರಹ ಭೌತಿಕವಾಗಿ ದೊರೆಯುವುದಿಲ್ಲ. ಇಲ್ಲಿ ಎಲ್ಲವೂ ಆನ್ ಲೈನ್ ಮಯವೇ. ಹಣ ವಹಿವಾಟು ಆನ್ ಲೈನ್.. ಮಾರಾಟ.. ಖರೀದಿ ಎಲ್ಲವೂ ಆನ್ ಲೈನ್. ಯಾರೂ ಯಾರಿಗೆ ಕೊಟ್ಟಿದ್ದಾರೆ ಎಲ್ಲಿಂದ ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿಯೂ ಗೌಪ್ಯವೇ. ಹಾಗಾಗಿಯೇ ಕೇಂದ್ರ ಕ್ರಿಪ್ಟೋ ಕರೆನ್ಸಿಯ ಮೇಲೆ ನಿಯಂತ್ರಣ ಜಾರಿಗೆ ಮುಂದಾಗುತ್ತಿದ್ದು ಕಾನೂನು ತರಲಾಗುವುದು ಎಂದು ಹೇಳಿದೆ.