Murder in Aurangabad : ಅಕ್ಕನ ತಲೆ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದ 17ರ ತರುಣ

By Suvarna News  |  First Published Dec 6, 2021, 3:50 PM IST

19ರ ಅಕ್ಕನ ತಲೆ ಕಡಿದ 17 ರ ಹರೆಯದ ತಮ್ಮ
ತಲೆಯೊಂದಿಗೆ ತಾಯಿ ಮಗನ ಸೆಲ್ಫಿ
ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಭಯಾನಕ ಘಟನೆ


ಔರಂಗಬಾದ್‌(ಡಿ. 6):17ರ ಹರೆಯದ ಯುವ ತರುಣನೋರ್ವ 19ರ ಹರೆಯದ ತನ್ನ ಸಹೋದರಿಯ ತಲೆ ಕಡಿದು ತಂದ ಭಯಾನಕ ಘಟನೆ ಮಹಾರಾಷ್ಟ್ರದ ಔರಂಗಬಾದ್‌(Aurangabad)ನಲ್ಲಿ ನಡೆದಿದೆ. 17 ರ ತರುಣ ತನ್ನ ತಾಯಿಯ ಸಹಾಯದೊಂದಿಗೆ ಈ ಕೃತ್ಯವೆಸಗಿದ್ದಾನೆ. ಅಕ್ಕನ ತಲೆ ಕಡಿದು ತಂದ ತರುಣ  ಅದನ್ನು ರಾಜಾರೋಷವಾಗಿ ನೆರೆಹೊರೆಯವರಲ್ಲಿ ತೋರಿಸಿದ್ದಾನೆ. ಅಲ್ಲದೇ ತಾಯಿ ಮಗ ಇಬ್ಬರು ಸೇರಿ ತಲೆಯೊಂದಿಗೆ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾರೆ ಎಂಬ ಆಘಾತಕಾರಿ ಅಂಶವು ಬಯಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುವತಿ ಪ್ರೇಮ ವಿವಾಹವಾದ ಕಾರಣಕ್ಕೆ ತಾಯಿ ಮಗ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ತನಿಖೆ ನಡೆಯುತ್ತಿದೆ. 

ಡಿಸೆಂಬರ್‌ 5ರಂದು ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆ ನಡೆದ ವೇಳೆ ಮೃತ 19ರ ಹರೆಯದ ಯುವತಿಯ ಗಂಡನೂ ಸ್ಥಳದಲ್ಲಿದ್ದ, ಆತನನ್ನು ಕೂಡ ಹತ್ಯೆ ಮಾಡಲು ಈ 17 ರ ತರುಣ ಮುಂದಾಗಿದ್ದ ಆದರೆ ಆತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಾಯಿ ಮಗನನ್ನು ಬಂಧಿಸಿದ್ದಾರೆ. ಈ ಹೇಯ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸ್‌ ವರಿಷ್ಠಾಧಿಕಾರಿ ನಿಮಿತ್ ಗೋಯಲ್‌( Nimit Goyal) ಪ್ರತಿಕ್ರಿಯಿಸಿದ್ದು, ಹತ್ಯೆಯ ಬಳಿಕ ತಾಯಿ ಮಗ ಕ್ಲಿಕ್ಕಿಸಿದ ಫೋಟೋಗಳ ಬಗ್ಗೆ ಪರಿಶೀಲಿಸಲು ಫೋನ್‌ ವಶಪಡಿಸಿಕೊಳ್ಳಲಾಗಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಇದು ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಿದೆ. ಅಲ್ಲದೇ ಆರೋಪಿಯೂ ಮರಾಠಿ ಸಿನಿಮಾವೊಂದರಿಂದ ಪ್ರೇರೆಪಿತಗೊಂಡು ಈ ಕೃತ್ಯವೆಸಗಿದ್ದಾನೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. 

Tap to resize

Latest Videos

undefined

ಅನ್ಯಜಾತಿ ಯುವಕನ ಪ್ರೀತಿಸಿದ ಪುತ್ರಿ ಕೊಲೆ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ?

ಘಟನೆಯಲ್ಲಿ ಹತ್ಯೆಗೀಡಾದ ಸಂತ್ರಸ್ತೆಯೂ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದ ಆರೋಪಿಯೂ ಆಕೆಯ ತಲೆಯನ್ನು ಕಡಿದು ಕೊಲೆ ಮಾಡಿದ್ದಾನೆ. ಆಕೆ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದು ಬಂದಿದೆ. 

ರಾಜ್ಯದಲ್ಲಿಯೂ ನಡೆದಿತ್ತು ಮರ್ಯಾದಾ ಹತ್ಯೆ

ಈ ಹಿಂದೆ ರಾಜ್ಯದ ವಿಜಯಪುರ(Vijayapura)ದಲ್ಲಿಯೂ ಪ್ರೇಮ ವಿವಾಹವಾದ ಕಾರಣಕ್ಕೆ ಯುವಕನೊಬ್ಬನ ಕೊಲೆ ನಡೆದಿತ್ತು. ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಹಿಂದೂ ಯುವಕನ ಹತ್ಯೆ ನಡೆದಿತ್ತು.  ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ರವಿ ನಿಂಬರಗಿ(Ravi Nimbarangi) ಎಂಬಾತ  ಅಕ್ಟೋಬರ್ 21ರಂದು ನಾಪತ್ತೆಯಾಗಿದ್ದ ಬಳಿಕ ಆತನ ಶವ ಹೊಲದ ಬಾವಿಯಲ್ಲಿ ಪತ್ತೆಯಾಗಿತ್ತು. 

ಆತ ನಾಪತ್ತೆಯಾದ ಬಳಿಕ ಆತ ಪ್ರೀತಿಸುತ್ತಿದ್ದ ಯುವತಿ ಅಮ್ರಿನ್(Amrin) ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಳು. ನಂತರ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದಾಗ ವಿಚಾರಣೆ ವೇಳೆ ರವಿ ನಿಂಬರಗಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಯುವತಿ ಅಮ್ರಿನ್‌ ಜೀವಕ್ಕೆ ಸಹ ಅಪಾಯವಿದ್ದು ನಂತರ ಆಕೆಗೆ ಸಾಂತ್ವನ ಕೇಂದ್ರದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. 

ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಹಾಗೆಯೇ ರಾಜ್ಯದ ಮೈಸೂರಿ(Mysore)ನಲ್ಲಿಯೂ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ತಂದೆಯೇ ಮಗಳನ್ನು ಹತ್ಯೆಗೈದ ಪ್ರಕರಣ ನಡೆದಿತ್ತು. ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ಘಟನೆ ನಡೆದಿತ್ತು. ಇಲ್ಲಿನ ನಿವಾಸಿ ಜಯರಾಂ(Jayaram) ತನ್ನ ಪುತ್ರಿ ಗಾಯಿತ್ರಿ (19) ಎಂಬಾಕೆಯನ್ನು ಹತ್ಯೆ ಮಾಡಿದ್ದ.  ಗಾಯತ್ರಿ ಅನ್ಯ ಕೋಮಿನ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ಹೆತ್ತವರಿಗೆ ಗೊತ್ತಾಗಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಗಾಯತ್ರಿ ಮಾತ್ರ ತಾನು ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು. ಈ ವಿಷಯವಾಗಿ ಮನೆಯಲ್ಲಿ ಜಟಾಪಟಿ ನಡೆದಿತ್ತು. ಮಗಳ ಮನಸ್ಸನ್ನು ಬದಲಾಯಿಸಲು ತಂದೆ ಜಯರಾಂ ಸರ್ವ ರೀತಿಯಲ್ಲಿಯೂ ಪ್ರಯತ್ನ ಮಾಡಿದ್ದರು. ಆದರೆ ಆಕೆ ಯಾವುದೇ ಒತ್ತಡಕ್ಕೂ ಮಣಿದಿರಲಿಲ್ಲ. ಕಡೆಗೆ ಮಚ್ಚಿನಿಂದ ಕಡಿದು ಆಕೆಯನ್ನು ಕೊಲೆ ಮಾಡಿದ್ದರು.
 

click me!