ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್‌ಗೆ ಎ1 ಆರೋಪಿ ಸ್ಥಾನ ಕೊಡಲು ನಿರ್ಧಾರ?

By Sathish Kumar KH  |  First Published Aug 21, 2024, 9:25 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್‌ ಶೀಟ್ ಸಲ್ಲಿಕೆ ವೇಳೆ ನಟ ದರ್ಶನ್‌ಗೆ ಎ1 ಆರೋಪಿ ಪಟ್ಟ ನೀಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.


ಬೆಂಗಳೂರು (ಆ.21) : ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್‌ನನ್ನು ಅರೆಸ್ಟ್ ಮಾಡಲು ಹೋದ ಪೊಲೀಸರಿಗೆ 'ನಮ್ಮ ಹುಡುಗರು ಮಾಡಿರೋದು, ನಾನೇನು ಮಾಡಿಲ್ಲ ಸಾರ್' ಎಂದು ಅವಾಜ್ ಹಾಕಿದ್ದ ನಟ ದರ್ಶನ್‌ ವಿರುದ್ಧ ಕೊಲೆ ಕೇಸಿನಲ್ಲಿ ಸಾಕಷ್ಟು ಸಾಕ್ಷಾಧಾರಗಳು ಸಿಕ್ಕಿವೆ. ಈ ಹಿನ್ನೆಲೆಯಲ್ಲಿ ಚಾರ್ಜ್‌ ಶೀಟ್ ಸಲ್ಲಕೆ ವೇಳೆ ದರ್ಶನ್‌ಗೆ ಎ1 ಆರೋಪಿ ಪಟ್ಟ ನೀಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ತಾನೇನೂ ಮಾಡಿಲ್ಲವೆಂಬಂತೆ ಮೈಸೂರಿಗೆ ತೆರಳಿ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದ ನಟ ದರ್ಶನ್‌ನನ್ನು ಬಂಧಿಸಿ ಪೊಲೀಸರು ತಮ್ಮ ಶೈಲಿಯಲ್ಲಿ ರುಬ್ಬಿದಾಕ್ಷಣ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ನಾನು ಒಂದೆರೆಡು ಏಟು ಒಡೆದಿದ್ದು, ನಿಜ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿದ್ದಾನೆ. ಈಗ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆಂಬುದಕ್ಕೆ ಹಲವು ಸಾಕ್ಷಿಗಳೂ ಕೂಡ ಲಭ್ಯವಾಗುತ್ತಿವೆ. ಇತ್ತೀಚೆಗೆ ದರ್ಶನ್ ಬಟ್ಟೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳೂ ಇರುವುದು ಪತ್ತೆಯಾಗಿತ್ತು. ಈಗ ಫೋಟೋಗಳು ರಿಟ್ರೀವ್ ಆಗಿದ್ದು, ದರ್ಶನ್ ವಿರುದ್ಧ ಸಾಕ್ಷಿಗಳು ಬಲಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಕೇಸಿನ ಚಾರ್ಜ್‌ ಶೀಟ್ ಸಲ್ಲಿಕೆ ವೇಳೆ ನಟ ದರ್ಶನ್‌ಗೆ ಎ1 ಆರೋಪಿ ಪಟ್ಟ ಕೊಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

Tap to resize

Latest Videos

ಡಿಲೀಟೆಡ್ ಫೋಟೋ ರಿಟ್ರೈವ್: ರಕ್ತಸಿಕ್ತ ದೇಹದಲ್ಲಿ ಕೈಮುಗಿದು ಪ್ರಾಣಭಿಕ್ಷೆ ಕೇಳಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್!

ಪವಿತ್ರಾ ಗೌಡಗೆ ಕೊಂಚ ರಿಲೀಫ್: ನಟಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಾರೆಂಬ ಕಾರಣಕ್ಕೆ ಕೊಲೆಯಾಗಿದ್ದಾನೆ. ಹಾಗಾಗಿ, ಕೊಲೆ ಕೇಸಿನಲ್ಲಿ ಪವಿತ್ರಾ ಗೌಡಳನ್ನೇ ಪೊಲೀಸರು ಎ1 ಆರೋಪಿಯನ್ನಾಗಿ ಮಾಡಿದ್ದರು. ಇನ್ನು ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್‌ನನ್ನು ಎ2 ಆರೋಪಿಯನ್ನಾಗಿ ಮಾಡಲಾಗಿತ್ತು.  ಆದರೆ, ಈಗ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಕೈವಾಡವೇ ಹೆಚ್ಚಾಗಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯ ವೇಳೆ ದರ್ಶನ್‌ಗೆ ಎ1 ಆರೋಪಿ ಪಟ್ಟ ನೀಡಲಾಗುತ್ತದೆ. ಇದರಿಂದ ಪವಿತ್ರಾ ಗೌಡಗೆ ಕೊಂಚ ರಿಲೀಫ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಜಾಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ ಪವಿತ್ರಾ ಗೌಡ: ರೇಣುಕಾಸ್ವಾಮಿ ಕೊಲೆ ಕೇಸಿನ ಎ1 ಆರೋಪಿ ಪವಿತ್ರಾ ಗೌಡಗೆ ಜೈಲು ವಾಸ ಸಾಕಾಗಿದೆ. ಪೊಲೀಸರು ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಅಲ್ಲಿವರೆಗೂ ಕಾಯೋಕೂ ಕಷ್ಟ ಪಡುತ್ತಿರೋ ಪವಿತ್ರಾ ಗೌಡ ದರ್ಶನ್‌ಗಿಂತ ಮೊದಲೇ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಾಮಾನ್ಯವಾಗಿ ಕಾನೂನಿನಲ್ಲಿ ಮಹಿಳೆಯರಿಗೆ ಸ್ಪೆಷಲ್ ಕನ್ಸೆಷನ್ ಇದೆ. CRPC ಸೆಕ್ಷನ್ 437 ಪ್ರಕಾರ ಸಿರಿಯಸ್ ಅಫೆನ್ಸ್ ಇದ್ದರೂ ಜಾಮೀನು ನೀಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಟಿ ಪವಿತ್ರಾ ಗೌಡ ಜಾಮೀನು ಮಂಜೂರು ಮಾಡುವಂತೆ ಕೋರ್ಟ್ ಮೊರೆ ಹೋಗಿದ್ದಾರೆ. ಇನ್ನು ನಟಿ ಪವಿತ್ರಾ ಗೌಡ ತಮಗೆ ಇದೇ ಸೆಕ್ಷನ್ ಅಡಿ ಬೇಲ್ ನೀಡಿ ಅಂತ ಅರ್ಜಿ ಸಲ್ಲಿಸಿದ್ದಾರೆ.

ಜೈಲಿನಲ್ಲಿದ್ದರೂ ನಟಿ ಪವಿತ್ರಾ ಗೌಡ ಧಿಮಾಕು ಕಮ್ಮಿಯಾಗಿಲ್ಲ!

ಜಾಮೀನು ಅರ್ಜಿ ಸಲ್ಲಿಕೆ ಚಿಂತನೆ ಮಾಡದ ದರ್ಶನ್: ಆದರೆ ದರ್ಶನ್ ಮಾತ್ರ ಚಾರ್ಜ್ ಶೀಟ್ ಸಲ್ಲಿಸೋವರೆಗೂ ಜಾಮೀನು ಪಡೆಯೋ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ನಟ ದರ್ಶನ್ ಜೈಲು ಪಾಲಾಗಿ ಬರೋಬ್ಬರಿ 60 ದಿನ ಕಳೆದಿದ್ದು, ಕಾನೂನು ಕುಳಿಕೆ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಈ ಪ್ರಕರಣದಲ್ಲಿ ಒಂದಕ್ಕಿಂತ ಒಂದು ಸಾಕ್ಷಿಗಳು ಸ್ಟ್ರಾಂಗ್ ಆಗುತ್ತಿವೆ. ಹೊರಗೆ ಸಿನಿಮಾದಲ್ಲಿದ್ದಾಗ ಎಷ್ಟೇ ಹೆಸರು, ಹಣ ಮಾಡಿದ್ದರೂ ಈಗ ಏನೂ ಮಾಡದ ಪರಿಸ್ಥಿತಿಗೆ ದರ್ಶನ್ ಸಿಲುಕಿದ್ದಾರೆ. ಎಫ್ ಎಸ್ ಎಲ್ ವರದಿಗಳಲ್ಲಿ ನಟ ದರ್ಶನ್ ಕೊಲೆ ಕೇಸಿನಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಹೊಂದಾಣಿಕ ಆಗುವಂತೆ ಶೇ. 70 ಸಾಕ್ಷಿಗಳು ಲಭ್ಯವಾಗಿವೆ ಎಂದು ತಿಳಿದುಬರುತ್ತಿದೆ. ಕೆಲವೇ ದಿನದಲ್ಲಿ ಚಾರ್ಜ್​ ಶೀಟ್​ ಸಲ್ಲಿಕೆಯಾಗಲಿದ್ದು, ಎ1 ಆರೋಪಿ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಹೀಗಾದಲ್ಲಿ ಚಾರ್ಜ್‌ ಶೀಟ್ ಸಲ್ಲಿಕೆ ನಂತರವೂ ಜಾಮೀನು ಸಿಗುವುದು ಅನುಮಾನ ಎಂಬ ಮಾತುಗಳು ಕೆಳಿಬರುತ್ತಿವೆ.

click me!