
ಬೆಂಗಳೂರು[ಜ. 24] ಆತ ಅಂತಿಂಥ ಕಳ್ಳನಲ್ಲ. ಡಿಯೋ ಬೈಕ್ ನಲ್ಲಿ ಬಂದು ಚೈನ್ ಮತ್ತು ಮೊಬೈಲ್ ಎಗರಿಸಿ ಕ್ಷಣಮಾತ್ರದಲ್ಲಿ ಮಾಯವಾಗುತ್ತಿದ್ದ. ಇದೀಗ ಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಾರ್ತಿಕ್ ಅಲಿಯಾಸ್ ಜಾಕ್ ಎಂಬಾತನ ಬಂಧನವಾಗಿದೆ. ಬಂಧಿತನಿಂದ 1 ಲಕ್ಷದ 89 ಸಾವಿರ ರೂ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ನೀವೇ ಲೆಕ್ಕ ಹಾಕಿ ಈತ ಎಂಥ ಚಾಲಾಕಿ ಕಳ್ಳ.
ಬೌನ್ಸ್ ನಲ್ಲಿ ಬಂದವರು, ಮೂರು ಲಕ್ಷ ರೂ. ದೋಚಿದ್ರು!
ಬಂಧಿತನಿಂದ 39 ಸಾವಿರ ರೂ ಹಣ, ಮೊಬೈಲ್ ಹಾಗೂ ಬೈಕ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೈಸೂರಿನ ಮೇಟಗಳ್ಳಿಯಲ್ಲಿ ಬೈಕ್ ಕಳುವು ಪ್ರಕರಣದ ಆರೋಪಿಯಾಗಿದ್ದ ಕಾರ್ತಿಕ್ ಸಿಕ್ಕಿಬಿದ್ದಿದ್ದು ಸರಗಳ್ಳತನ ್ರಕರಣದ ಸರಣಿಗಳೆ ಬಿಚ್ಚಿಕೊಂಡಿವೆ.
ಬೆಂಗಳೂರಿನ ಜಯನಗರದಲ್ಲಿ ರಸ್ತೆಯಲ್ಲಿ ಹೋಗ್ತಿದ್ದ ಮಹಿಳೆಯ ಪರ್ಸ್ ಕಸಿದು ಪರಾರಿಯಾಗಿದ್ದ ಸಂಬಂಧ ದೂರು ದಾಖಲಾಗಿತ್ತು. ಘಟನೆ ಸಂಬಂಧ ಜಯನಗರ ಪೊಲೀಸರ ಬಲೆಗೆ ಬಿದ್ದ ಆರೋಪಿಯ ಬಾಯಿ ಬಿಡಿಸಿದಾಗ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ