
ಬೆಂಗಳೂರು(ಜ. 23) ದುನಿಯಾ ವಿಜಿ ಬರ್ತ್ ಡೇ ಸೆಲಬ್ರೇಷನ್ ವೇಳೆ ಕೇಕ್ ಕಟ್ ಮಾಡಲು ತಲ್ವಾರ್ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎಫ್ ಐಆರ್ ದಾಖಲಾಗಿದೆ.
ಗಿರಿನಗರ ಪೊಲೀಸರು ವಿಜಿ ವಿರುದ್ದ ರಲ್ಲಿ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 283ರಡಿಯಲ್ಲಿ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ಸಾರ್ವಜನಿಕ ರಸ್ತೆಗೆ ಅಡಚಣೆ ಮತ್ತು ಮತ್ತು ತೊಂದರೆ ನೀಡಿದ ಆರೋಪ ಹೊರಿಸಿದ್ದಾರೆ.
ಬರ್ತ್ ಡೇ ಸೆಲೆಬ್ರೇಷನ್ ಗೆ ಅನುಮತಿ ವಿಜಯ್ ಅನುಮತಿ ಪಡೆದಿದ್ದರು. ಆದರೆ ಅನುಮತಿಯಿರದೆ ತಡರಾತ್ರಿ ಧ್ವನಿವರ್ಧಕ ಬಳಸಿ, ರಸ್ತೆಯಲ್ಲಿ ಸಂಚಾರಕ್ಕೂ ಅಡಚಣೆ ಮಾಡಿದ್ದ ಪ್ರಕರಣ ವರದಿಯಾಗಿತ್ತು.
ತಲ್ವಾರ್‌ನಿಂದ ಕೇಕ್ ಕಟ್ , ಏನೀದರ ಹಕೀಕತ್ತು?
ಈಗಾಗಲೇ ವಿಜಯ್ ಗಿರಿನಗರ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದು ತಲ್ವಾರ್ ನನ್ನದಲ್ಲ, ಅಭಿಮಾನಿಗಳು ಉಡುಗೊರೆ ನೀಡಿದ್ದರು. ಆತುರದಲ್ಲಿ ಅದರಲ್ಲೇ ಕೇಕ್ ಕಟ್ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ಒಟ್ಟಿನಲ್ಲಿ ಒಂದೆಲ್ಲಾ ಒಂದು ಕಾರಣಕ್ಕೆ ದುನಿಯಾ ವಿಜಯ್ ಮತ್ತು ಪೊಲೀಸರ ನಂಟು ಬಿಡಿಸಲಾಗದ ಗಂಟಾಗಿದೆ. ಜನ್ಮದಿನಾಚರಣೆ ವೇಳೆ ಕೇಕ್ ಕಟ್ ಮಾಡಿದ ಪ್ರಕರಣ ಕೂಡ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ವಿಪರ್ಯಾಸವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ