ಎಲ್ಲಾ ಕ್ಷೇತ್ರದಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರಿಂದ ಕೊಲೆ ಮಾಡಿ ತಪ್ಪಿಸಿಕೊಳ್ಳುವುದು ಅಸಾಧ್ಯ. ಹೀಗೆ ತಾನೆಂದು ಪೊಲೀಸರ ಕೈಗೆ ಸಿಗಲ್ಲ ಅಂದುಕೊಂಡಿದ್ದ ಕೊಲೆ ಆರೋಪಿ ಬರೋಬ್ಬರಿ 18 ವರ್ಷಗಳ ಬಳಿಕ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರು(ನ.16): ಇದು ಒಂದಲ್ಲ ಎರಡಲ್ಲ, ಬರೋಬ್ಬರಿ 18 ವರ್ಷಗಳ ಹಿಂದಿನ ಕೊಲೆ ಪ್ರಕರಣ. ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡುತಿರುಗಾಡುತ್ತಿದ್ದ. ವರ್ಷಗಳು ಉರುಳಿತು. ಸಹಜವಾಗಿ ಆರೋಪಿಯ ಚಹರೆ ಬದಲಾಗಿದೆ. ವಯಸ್ಸು ಹೆಚ್ಚಾಗಿದೆ. ಇನ್ನು ತನ್ನ ಗುರುತು ಯಾರಿಗೂ ಸಿಗಲ್ಲ. ಇಷ್ಟೇ ಅಲ್ಲ ಈ ಪ್ರಕರಣ ಯಾರಿಗೂ ನೆನಪಿಲ್ಲ ಎಂದುಕೊಂಡ ಆರೋಪಿ ಮೆಲ್ಲನೆ ತನ್ನ ಕಾರ್ಯಚಟುವಟಿಕೆಗೆ ಇಳಿದಿದ್ದಾನೆ. ಆದರೆ ಬೆಂಗೂರು ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹೌದು 2005ರಲ್ಲಿ ಆರೋಪಿ ರಮೇಶ್, ಶಿವಶಂಕರಪ್ಪ ಅನ್ನೋ ವ್ಯಕ್ತಿಯನ್ನು ಕೊಲೆ ಮಾಡಿದ್ದ. ತಾವರೆಕೆರೆ ಪೊಲೀಸರು ರಮೇಶ್ ಬಂಧಿಸಿದ್ದರು. ಬಳಿಕ ಬಿಡುಗಡೆಯಾಗಿದ್ದ ರಮೇಶ್, ಕೋರ್ಟ್‌ಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದೀಗ 18 ವರ್ಷಗಳ ಬಳಿಕ ಪೊಲೀಸರು ಆರೋಪಿ ರಮೇಶ್‌ನನ್ನು ಬಂಧಿಸಿದ್ದಾರೆ.
2005ರಲ್ಲಿ ಬೆಂಗಳೂರಿನ ತಾವರೆಕೆರೆಯಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ತಾವರೆಕೆರೆ ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ಶಿವಶಂಕರಪ್ಪ ಕುಟುಂಬದಿಂದ, ಆಪ್ತರಿಂದ ಹಲವು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದ್ದಾರೆ. ಈ ವೇಳೆ ಸಿಕ್ಕ ಮಾಹಿತಿ ಆಧಾರದಲ್ಲಿ ರಮೇಶ್ ಅನ್ನೋ ವ್ಯಕ್ತಿಯನ್ನು ಬಂಧಿಸಿದ್ದರು. ಪೊಲೀಸರ ತನಿಖೆಯಲ್ಲಿ ಶಿವಶಂಕರಪ್ಪ ಕೊಲೆ ಪ್ರಕರಣದ ಹಿಂದೆ ರಮೇಶ್ ಕೈವಾಡ ಸ್ಪಷ್ಟವಾಗಿತ್ತು. ಇದಕ್ಕೆ ಪೂರಕ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದರು.
ಪ್ರಾಣಕ್ಕಿಂತ ಮಾನ ಮೇಲೆಂದು ಚಲಿಸುತ್ತಿದ್ದ ಆಟೋದಿಂದ ಹಾರಿದ ವಿದ್ಯಾರ್ಥಿನಿ
ರಮೇಶ್‌ನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ರಮೇಶ್, ಒಂದೆರೆಡು ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಕೊಲೆ ಪ್ರಕರಣದಲ್ಲಿ ತನ್ಮ ವಿರುದ್ದ ಪೊಲೀಸರು ಪ್ರಬಲ ಸಾಕ್ಷ್ಯಗಳನ್ನು ನೀಡಿದ್ದರು. ಹೀಗಾಗಿ 2010ರಿಂದ ಆರೋಪಿ ರಮೇಶ್ ಕೋರ್ಟ್‌ಗೆ ಹಾಜರಾಗಿಲ್ಲ. ಬಳಿಕ ಪೊಲೀಸರ ಕೈಗೂ ಸಿಕ್ಕಿಲ್ಲ.
ಆರೋಪಿ ರಮೇಶ್ ಕುರಿತು ಯಾವುದೇ ಸುಳಿವು ಸಿಕ್ಕಿರಲಿಲ್ಲ. ದಿನಗಳು ಉರುಳಿ 18 ವರ್ಷಗಳೇ ತುಂಬಿ ಹೋಗಿತ್ತು. ನಿನ್ನೆ(ನ.15) ಯಶವಂತಪುರದಲ್ಲಿ ಆರೋಪಿ ರಮೇಶ್ ಅನುಮಾನಾಸ್ವದವಾಗಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ರಮೇಶ್‌ನ ವಶಕ್ಕೆ ಪಡೆದಿದ್ದಾರೆ. ಬಳಿಕ ರಮೇಶ್ ಫಿಂಗರ್ ಫ್ರಿಂಟ್ ತೆಗೆದುಕೊಂಡಿದ್ದಾರೆ.
ನೂತನ ತಂತ್ರಜ್ಞಾನ M.CCTNS ಆ್ಯಪ್ ಮುಖಾಂತರ ಪೊಲೀಸರು ಆರೋಪಿಗಳು, ಖೈದಿಗಳ ಬೆರಳಚ್ಚು ಸಂಗ್ರಹಿಸಿಡಲಾಗುತ್ತದೆ. 2005ರಲ್ಲಿ ಆರೋಪಿ ರಮೇಶ್ ಫ್ರಿಂಗರ್ ಪ್ರಿಂಟ್ ಸಂಗ್ರಹಿಸಲಾಗಿತ್ತು. ಇದೀಗ ಈ ಆ್ಯಪ್‌ನಲ್ಲಿ ಆರೋಪಿ ರಮೇಶ್ ಅಂದು ನೀಡಿದ್ದ ಫ್ರಿಂಗರ್ ಪ್ರಿಂಟ್ ಹಾಗೂ ಇದೀಗ ಸಂಗ್ರಹಿಸಿದ ಫ್ರಿಂಗರ್ ಪ್ರಿಂಟ್ ಹೋಲಿಕೆಯಾಗಿದೆ. ರಮೇಶ್ ಫಿಂಗರ್ ಪ್ರಿಂಟ್ ಹಾಕಿದ ತಕ್ಷಣವೇ ಈತನ ಜಾತಕ ಬಯಲಾಗಿದೆ. M.CCTNS ಆ್ಯಪ್ ಮೂಲಕ ಯಶವಂತಪುರ ಪೊಲೀಸರು 18 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ
Bengaluru: ಓವರ್ ಟೇಕ್ ಮಾಡಿ ಸಾರಿ ಕೇಳುವ ನೆಪದಲ್ಲಿ ಕಾರನ್ನು ಕದ್ದೊಯ್ದಿದ್ದವನ ಬಂಧನ
M.CCTNS ಆ್ಯಪ್ ಇತ್ತೀಚಿಗೆ ಬಂದಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಇದೀಗ ಪೊಲೀಸರು ಈ ಹಿಂದೆ ಆರೋಪಿ ಹಾಗೂ ಖೈದಿಗಳ ಫಿಂಗರ್ ಪ್ರಿಂಟ್ ಸಂಗ್ರಹಿಸಿದ ದಾಖಲೆಗಳನ್ನು ಈ ಆ್ಯಪ್‌ಗೆ ಫೀಡ್ ಮಾಡಿದ್ದಾರೆ. ಹೀಗಾಗಿ ಇದೀಗ ಫಿಂಗರ್ ಫ್ರಿಂಟ್ ಆ್ಯಪ್‌ನಲ್ಲಿ ಆರೋಪಿಗಳು, ಖೈದಿಗಳ ಜಾತಕ ಬಯಲಾಗಲಿದೆ.