Shraddha murder case: ಶ್ರದ್ಧಾಳನ್ನು ಕೊಂದ ನಂತರ ಆರೋಪಿ ಅಫ್ತಾಬ್ ಶ್ರದ್ಧಾ ಹಣದಲ್ಲೇ ಫ್ರಿಡ್ಜ್ ಖರೀದಿಸಿದ್ದನಂತೆ. ಅದಾದ ನಂತರ ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಫ್ರಿಡ್ಜ್ ಒಳಗೆ ಇಟ್ಟಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ನವದೆಹಲಿ: ಶ್ರದ್ಧಾಳನ್ನು ಕೊಲೆ ಮಾಡಿದ ನಂತರ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಅವಳ ಖಾತೆಯಿಂದಲೇ ಫ್ರಿಜ್ ಖರೀದಿಸಿದ್ದ. ಹೊಸ ಫ್ರಿಡ್ಜ್‌ನಲ್ಲಿ ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ಭಾಗಗಳನ್ನು ಕೆಡದಂತೆ ಇಟ್ಟಿದ್ದ ಎಂಬ ಮಾಹಿತಿಯನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ನಂತರ ಶ್ರದ್ಧಾ ಫೋನ್‌ನಿಂದ ತನ್ನ ಖಾತೆಗೆ ಹಣ ಕಳಿಸಿಕೊಂಡು ಫ್ರಿಡ್ಜ್ ಆರ್ಡರ್ ಮಾಡಿದ್ದಾನೆ. ಅದಾದ ನಂತರ ದೇಹದ ಭಾಗಗಳನ್ನು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದಾನೆ. ಅದೇ ಫ್ರಿಡ್ಜ್‌ನಲ್ಲಿ ಆಹಾರಗಳನ್ನೂ ಕೂಡ ಇಟ್ಟುಕೊಂಡಿದ್ದ ಎನ್ನಲಾಗಿದೆ. 18 ದಿನಗಳ ಕಾಲ ದೇಹದ ಒಂದೊಂದೇ ಭಾಗಗಳನ್ನು ಆತ ಮೆಹ್ರೌಲಿಯ ಅರಣ್ಯದಲ್ಲಿ ಬಿಸಾಡಿದ್ದಾನೆ. ಅಲ್ಲಿಯವರೆಗೂ ದೇಹದ ಭಾಗಗಳು ಫ್ರಿಡ್ಜ್‌ನಲ್ಲಿಯೇ ಇದ್ದವು ಎನ್ನಲಾಗಿದೆ.
ಜತೆಗೆ ಪೊಲೀಸರು ಬಂಬಲ್ ಡೇಟಿಂಗ್ ಆಪ್‌ನಿಂದ ಆರೋಪಿ ಅಫ್ತಾಬ್ ಕುರಿತಾದ ಮಾಹಿತಿಯನ್ನು ಕೇಳಲಾಗಿದೆ. ಆತನ ಚಾಟ್ ವಿವರ, ಎಷ್ಟು ಜನರ ಜೊತೆ ಆತ ಚಾಟ್ ಮಾಡಿದ್ದಾನೆ ಎಂಬ ವಿವರ ನೀಡುವಂತೆ ನೊಟೀಸ್ ನೀಡಲಾಗಿದೆ. ಜತೆಗೆ ಗುರುವಾರ ಆತನಿಗೆ ನಾರ್ಕೊ ಅನಾಲಿಸಿಸ್ ಟೆಸ್ಟ್ ಕೂಡ ನಡೆಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ರದ್ಧಾರನ್ನು ಕೊಲೆ ಮಾಡುವ ಹತ್ತು ದಿನಗಳ ಹಿಂದೆ ಇಬ್ಬರೂ ಮನೆಯಲ್ಲಿ ತುಂಬಾ ಜಗಳವಾಡಿದ್ದರು, ಅಂದೇ ಆಕೆಯ ಕತ್ತು ಹಿಸುಕಿ ಸಾಯಿಸಬೇಕು ಎಂಬಷ್ಟು ಸಿಟ್ಟು ಅಫ್ತಾಬ್‌ಗೆ ಬಂದಿತ್ತು ಎಂಬುದನ್ನು ಪೊಲೀಸರಿಗೆ ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ ಶ್ರದ್ಧಾ ತುಂಬಾ ಎಮೋಷನಲ್ ಆಗಿ ಅಳಲು ಆರಂಭಿಸಿದಳು, ಇದಕ್ಕಾಗಿ ಅಫ್ತಾಬ್ ಸುಮ್ಮನಾದ. ಶ್ರದ್ಧಾಳಿಗೆ ಅಫ್ತಾಬ್ ವಂಚಿಸುತ್ತಿದ್ದಾನೆ, ಇನ್ನೊಂದು ಹುಡುಗಿಯ ಜೊತೆ ಆತ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನದ ಮೇಲೆ ಶ್ರದ್ಧಾ ಕೋಪಗೊಂಡಿದ್ದಳು. ಬಂಬಲ್ ಎಂಬ ಡೇಟಿಂಗ್ ಆಪ್‌ನಲ್ಲಿ ಪರಿಚಯವಾದ ಇಬ್ಬರೂ ಕಳೆದ ಮೂರು ವರ್ಷಗಳಿಂದ ಒಟ್ಟಿಗೇ ಇದ್ದರು.
ಮೂಲಗಳ ಪ್ರಕಾರ ಅಫ್ತಾಬ್‌ನಲ್ಲಾದ ದಿಢೀರ್ ಬದಲಾವಣೆಯಿಂದ ಶ್ರದ್ಧಾ ಸಿಟ್ಟಾಗಿದ್ದಳು ಮತ್ತು ಆಗಾಗ ಆತನ ಮೇಲೆ ಕೋಪದಿಂದ ಜಗಳವಾಡುತ್ತಿದ್ದಳು. ಮೇ 18ರಂದು ಇದೇ ರೀತಿಯ ಜಗಳದಲ್ಲಿ ಅಫ್ತಾಬ್ ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತನ್ನು ಹಿಸುಕಿ ಕೊಲೆ ಮಾಡಿದ್ದ. ಮರುದಿನ ಆಕೆಯ ದೇಹವನ್ನು 35 ಪೀಸುಗಳಾಗಿ ತುಂಡರಿಸಿದ್ದ. ನಂತರ ಅದನ್ನು ಫ್ರಿಡ್ಜ್ ಒಳಗೆ ಇಟ್ಟಿದ್ದ.
ಮೂಲಗಳ ಪ್ರಕಾರ ಕತ್ತರಿಸಿದ ರುಂಡವನ್ನು ಆತ ದಿನವೂ ತನ್ನ ನೆನಪುಗಳಿಗಾಗಿ ನೋಡುತ್ತಿದ್ದ. ಮೆಹ್ರೌಲಿಯ ಅರಣ್ಯದಲ್ಲಿ ಪ್ರತಿನಿತ್ಯ ದೇಹದ ಒಂದು ಭಾಗವನ್ನು ಅಫ್ತಾಬ್ ಎಸೆಯುತ್ತಿದ್ದ. ಮಂಗಳವಾರ ಅಫ್ತಾಬ್‌ನನ್ನು ಪೊಲೀಸರು ಮಹಜರ್‌ಗಾಗಿ ಮೆಹ್ರೌಲಿ ಅರಣ್ಯಕ್ಕೆ ಕರೆದೊಯ್ದಿದ್ದರು. ಮಧ್ಯ ರಾತ್ರಿ 2 ಗಂಟೆಗೆ ಅಫ್ತಾಬ್ ಹೋಗಿ ಭಾಗಗಳನ್ನು ಒಂದೊಂದಾಗಿ ಎಸೆದು ಬರುತ್ತಿದ್ದ. ಪೊಲೀಸರಿಗೆ 10 ಬ್ಯಾಗ್‌ಗಳು ಸಿಕ್ಕಿದ್ದು ಅದರಲ್ಲಿ ಶ್ರದ್ಧಾ ದೇಹದ ಭಾಗಗಳಿವೆ. 18 ದಿನಗಳ ಕಾಲ ಅಫ್ತಾಬ್ ಒಂದೊಂದೇ ಭಾಗಗಳನ್ನು ಬ್ಯಾಗ್‌ನಲ್ಲಿ ಕೊಂಡೊಯ್ದು ಬಿಸಾಡಿದ್ದ ಎನ್ನಲಾಗಿದೆ.
ಮದುವೆಯಾಗಲು (Marriage) ಒತ್ತಾಯಿಸಿದಳು ಎನ್ನುವ ಕಾರಣಕ್ಕೆ ತನ್ನ ಪ್ರೇಯಸಿ ಶ್ರದ್ಧಾಳನ್ನು (Shraddha Walkar) ಹತ್ಯೆಗೈದು 35 ತುಂಡು ಮಾಡಿದ್ದ ದೆಹಲಿಯ ಅಫ್ತಾಬ್ ಪೂನಾವಾಲಾನ (Aftab Poonawala) ಮತ್ತಷ್ಟು ಲೈಂಗಿಕ ಹಪಾಹಪಿ, ದುಷ್ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರೇಯಸಿ ದೇಹವನ್ನು ಕತ್ತರಿಸಿ ಫ್ರಿಜ್‌ನಲ್ಲಿ (Refrigerator) ಇಟ್ಟಿದ್ದ ಸಮಯದಲ್ಲೂ ಅಫ್ತಾಬ್ ಮತ್ತಷ್ಟು ಯುವತಿಯರ (Girl Friends) ಜೊತೆ ಡೇಟಿಂಗ್ (Dating) ನಡೆಸಿ, ಅವರನ್ನು ಮನೆಗೆ ಕರೆತಂದು ಲೈಂಗಿಕ ಚಟುವಟಿಕೆ ನಡೆಸಿದ್ದ ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. ಇದು ಆತನ ಕುರಿತು ಸಾರ್ವಜನಿಕರಲ್ಲಿ ಅಹಸ್ಯ ಭಾವನೆ ಹುಟ್ಟುವಂತೆ ಮಾಡಿದೆ.
ಶ್ರದ್ಧಾ ಹತ್ಯೆಯಾದ 15-20 ದಿನಗಳಲ್ಲಿ ಅಫ್ತಾಬ್ ‘ಬಂಬಲ್’ (Bumble) ಡೇಟಿಂಗ್ ಆ್ಯಪ್‌ನಲ್ಲೇ ಮತ್ತಷ್ಟು ಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ. ಈ ಪೈಕಿ ಹಲವರನ್ನು ಮನೆಗೆ ಕರೆತಂದು ಲೈಂಗಿಕ ಸಂಪರ್ಕ ಬೆಳೆಸಿದ್ದೆ ಎಂಬ ವಿಷಯವನ್ನು ಸ್ವತಃ ಅಫ್ತಾಬ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಯುವತಿಯರನ್ನು ಹೀಗೆ ಮನೆಗೆ ಕರೆ ತರುವಾಗ ಶ್ರದ್ಧಾಳ ದೇಹವನ್ನು ಫ್ರಿಜ್‌ನಿಂದ ಕಪಾಟಿಗೆ ವರ್ಗಾಯಿಸುತ್ತಿದ್ದೆ ಎಂದು ಪೊಲೀಸರ ಮುಂದೆ ಅಫ್ತಾಬ್ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಎಷ್ಟು ಜನ ಯುವತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದ ಎಂಬ ಬಗ್ಗೆ ಬಂಬಲ್ ಆ್ಯಪ್‌ನಿಂದ ಮಾಹಿತಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ.
ಅಫ್ತಾಬ್‌ಗೆ ಚಿಕಿತ್ಸೆ ನೀಡಿದ್ದ ವೈದ್ಯರೇ ಸಾಕ್ಷಿ..!
ಈ ಮಧ್ಯೆ, ಶ್ರದ್ಧಾಳನ್ನು ಕೊಲೆ ಮಾಡುವ ವೇಳೆ ಅಫ್ತಾಬ್ ಕೈಗೆ ಗಾಯವಾಗಿತ್ತು. ಆ ಗಾಯಕ್ಕೆ ಚಿಕಿತ್ಸೆ ನೀಡಿದ್ದ ವೈದ್ಯರನ್ನು ದೆಹಲಿ ಒಲೀಸರು ಪತ್ತೆ ಹಚ್ಚಿದ್ದಾರೆ. ಮೇ ತಿಂಗಳ ಕೊನೆಯ ವಾರದಲ್ಲಿ ಅಫ್ತಾಬ್‌ಗೆ 5 - 6 ಹೊಲಿಗೆ ಹಾಕಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪೊಲೀಸರು ಅಫ್ತಾಬ್ ಮನೆಯಲ್ಲಿ ಔಷಧಿಯ ಚೀಟಿಯನ್ನು ಪತ್ತೆಹಚ್ಚಿದ್ದರು ಅದರ ನೆರವಿನಿಂದ ವೈದ್ಯರನ್ನು ಅವರು ಪತ್ತೆಹಚ್ಚಿದ್ದು, ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಈಗ ಶ್ರದ್ಧಾ ಕೊಲೆ ಪ್ರಕರಣದಲ್ಲಿ ಆ ವೈದ್ಯರನ್ನೇ ಪ್ರಮುಖ ಸಾಕ್ಷಿಯನ್ನಾಗಿ ಬಳಸಿಕೊಳ್ಳಲು ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್
ಶ್ರದ್ಧಾ ಇನ್‌ಸ್ಟಾದಿಂದ ಮೆಸೇಜು:
ಶ್ರದ್ಧಾಳನ್ನು ಹತ್ಯೆ ಮಾಡಿದ ಬಳಿಕವೂ, ಅಫ್ತಾಬ್ ಆಕೆಯ ಇನ್ಸಾ$್ಟಗ್ರಾಂ ಖಾತೆಯಿಂದ ಆಕೆಯ ಸ್ನೇಹಿತರಿಗೆ ಸಂದೇಶ ರವಾನಿಸುತ್ತಿದ್ದ ಮತ್ತು ಆಕೆಯ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನೂ ಪಾವತಿಸುವ ಮೂಲಕ ಶ್ರದ್ಧಾ ಬದುಕಿದ್ದಾಳೆ ಎಂದು ಬಿಂಬಿಸುವ ಯತ್ನ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.