Bengaluru NICE road accident: ರಸ್ತೆ ಅಪಘಾತದಲ್ಲಿ ಅರ್ಧದೇಹ ಸಿಕ್ಕಿದೆ, ಗುರುತು ಸಿಕ್ಕಿಲ್ಲ! ಪೊಲೀಸರಿಗೆ ತಲೆನೋವಾದ ಪ್ರಕರಣ!

Kannadaprabha News   | Kannada Prabha
Published : Jun 17, 2026, 08:53 AM IST
Bengaluru nice road accident

ಸಾರಾಂಶ

ಬೆಂಗಳೂರಿನ ನೈಸ್ ರಸ್ತೆಯಲ್ಲಿ ಮೇ 4 ರಂದು ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರ ಅರ್ಧ ದೇಹ ಪತ್ತೆಯಾಗಿದೆ. ಒಂದೂವರೆ ತಿಂಗಳು ಕಳೆದರೂ ಮೃತರ ಗುರುತು ಅಥವಾ ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈ ನಿಗೂಢ ಪ್ರಕರಣವನ್ನು ಭೇದಿಸಲು ಕಾಮಾಕ್ಷಿಪಾಳ್ಯ ಸಂಚಾ ಪೊಲೀಸರಿಂದ ತನಿಖೆ..

 ಬೆಂಗಳೂರು (ಜೂ.17): ನೈಸ್‌ ರಸ್ತೆ ಅಪಘಾತ(Nice road accident)ದಲ್ಲಿ ಸಿಕ್ಕ ವ್ಯಕ್ತಿಯ ಅರ್ಧ ದೇಹ ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಈ ಸಂಬಂಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣ(Missing case)ವನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು (Kamakshipalya Traffic Station Police) ಜಾಲಾಡುತ್ತಿದ್ದಾರೆ. 

ಮೇ.4 ರಂದು ನೈಸ್‌ ರಸ್ತೆಯಲ್ಲಿ ಅಪಘಾತ

ಕಳೆದ ಮೇ 4ರಂದು ನೈಸ್‌ ರಸ್ತೆಯಲ್ಲಿ ಅಪಘಾತವಾಗಿದೆ ಎಂದು ಸಾರ್ವಜನಿಕರಿಂದ ಕರೆ ಬಂದಿತ್ತು. ವಿಷಯ ತಿಳಿದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯೊಬ್ಬರ ಅಪ್ಪಚ್ಚಿಯಾಗಿದ್ದ ಅರ್ಧ ದೇಹ ಸಿಕ್ಕಿದೆ. ಆದರೆ ಮೃತರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರು 35-40 ವರ್ಷದವರು ಎಂದು ಕಂಡು ಬಂದಿದೆ.

ಅರ್ಧದೇಹದ ಗುರುತು ಪತ್ತೆಯಾಗಿಲ್ಲ

ಅಪಘಾತ ಸ್ಥಳದಲ್ಲಿ ಮೃತ ವ್ಯಕ್ತಿಗೆ ಸಂಬಂಧಿಸಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಘಟನೆ ನಡೆದು ಒಂದೂವರೆ ತಿಂಗಳು ಕಳೆದಿದ್ದರೂ ಮೃತರ ಗುರುತು ಪತ್ತೆಯಾಗಿಲ್ಲ. ಅಪಘಾತ ಮಾಡಿದ ವಾಹನ ಯಾವುದು ಎಂಬುದು ಕೂಡ ಪತ್ತೆಯಾಗಿಲ್ಲ. ಹೀಗಾಗಿ ಈ ಅಪಘಾತ ಪ್ರಕರಣವನ್ನು ಬೇಧಿಸುವುದು ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಬೆನ್ನು ಬಿದ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru theft case: ಆಭರಣಗಳ ಫೋಟೋ ತೆಗೆವ ನೆಪದಲ್ಲಿ1.64 ಕೋಟಿ ಚಿನ್ನ ದೋಚಿದ್ದವರ ಸೆರೆ
ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ: ಮತಾಂತರದ ವೀಡಿಯೋ ವೈರಲ್!