
ಬೆಂಗಳೂರು (ಜೂ.05): ಸಿಲಿಕಾನ್ ಸಿಟಿಯಲ್ಲಿ ಜೀವನ ಮಾಡುವ ಜನರಿಗೆ ಹಣ, ಅಂತಸ್ತು, ಕಾರು, ಮನೆ ಎಲ್ಲವೂ ಇದ್ದರೂ ನೆಮ್ಮದಿಯಿಲ್ಲವೆಂದು ಬಳಲುವವರೇ ಹೆಚ್ಚಾಗಿದ್ದಾರೆ. ಆದೇ ರೀತಿ ಇಲ್ಲೊಬ್ಬ ಯುವಕ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನನಗೆ ಬದುಕಲು ಇಷ್ವವಿಲ್ಲವೆಂದು 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ಇನ್ನು ಮೇಲಿನಿಂದ ಬಿದ್ದ ರಭಸಕ್ಕೆ ಇಡೇ ದೇಹದ ಮೂಳೆಗಳೆಲ್ಲಾ ಪುಡಿ, ಪುಡಿಯಾಗಿದ್ದು, ದೇಹವೆಲ್ಲಾ ಪೀಸ್ ಪೀಸ್ ಆಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮೊಹಮ್ಮದ್ ಘಿಯಾಸುದ್ದಿನ್ ಎಂದು ಗುರುತಿಸಲಾಗಿದೆ. ಈತ ಮೂಲತಃ ಅಸ್ಸಾಂ ಮೂಲದ ಯುವಕನಾಗಿದ್ದಾನೆ. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದ ಈತ ಕೆಲವು ದಿನಗಳಿಂದೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು. ದುಡಿಯುವ ವಯದ್ದಿನ ಮಗ ಕೆಲಸಕ್ಕೆ ಹೋಗದೇ ಖಿನ್ನತೆಯಿಂದ ಬಳಲುತ್ತಾ, ಮನೆಯಲ್ಲಿ ಆತ್ಮಹತ್ಯೆಗೆ ಮೂರ್ನಾಲ್ಕು ಬಾರಿ ಯತ್ನಿಸಿದ ಘಟನೆ ಪೋಷಕರ ಮುಂದೆಯೇ ನಡೆದಿದೆ. ಇದನ್ನು ಸಹಿಸಿಕೊಳ್ಳಲಾಗದೇ ಆಸ್ಪತ್ರೆಗೆ ತೋರಿಸಲು ಪುಟ್ಟೇನಹಳ್ಳಿಯ ಯುವಕನ ಗೆಳೆಯನ ಮನೆಗೆ ತಾಯಿ ಸಮೇತವಾಗಿ ಬಂದಿದ್ದನು.
ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಲಾರದಲ್ಲಿ ಆತ್ಮಹತ್ಯೆ: ಕಾಲೇಜಿನಲ್ಲಿ ಕಿರುಕುಳ ಆರೋಪ
ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದುರ್ಘಟನೆ: ಪೋಷಕರ ಜೊತೆ ಗೆಳೆಯನ ಮನೆಗೆ ಬಂದಿದ್ದ ಮೃತ ಯುವಕನನ್ನು ಇಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧತೆ ನಡಸಿದ್ದರು. ಇನ್ನು ಗೆಳಯನೊಂದಿಗೆ ತುಂಬಾ ಆಪ್ತನಾಗಿದ್ದರಿಂದ ಆಸ್ಪತ್ರೆಗೆ ಇವನ ಗೆಳೆಯನ್ನೂ ಕರೆದುಕೊಂಡು ಹೋದರೆ ಚಿಕಿತ್ಸೆಗೆ ಅನುಕೂಲ ಆಗುತ್ತದೆ ಎಂದು ಪೋಷಕರು ಚಿಂತನೆ ಮಾಡಿದ್ದರು. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಗೆಳೆಯನ ಮನೆಯ 19ನೇ ಫ್ಲೋರ್‌ನಿಂದ ಯುವಕ ಜಿಗಿದಿದ್ದಾನೆ. ಮೊಹಮ್ಮದ್ ಜಿಯಾಸುದ್ದಿನ್ ತಾಯಿ ಜೊತೆಯಲ್ಲಿ ಇದ್ದಾಗಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉದ್ಯೋಗ ಅರಸಿ ಬಂದಿದ್ದ ಕುಟುಂಬ: ಈ ದುರ್ಘಟನೆ ಬೆಂಗಳೂರಿನ ಪುಟ್ಟೇನಗಳ್ಳಿ ಠಾಣಾ ವ್ಯಾಪ್ತಿಯ ಸೌತ್‌ಸಿಟಿಯಲ್ಲಿ ನಡೆದಿದೆ. ಮೃತನ ಕಟುಂಬ ಮತ್ತು ಗೆಳೆಯ ಮೂಲತಃ ಅಸ್ಸಾಂ ಮೂಲದವರು ಆಗಿದ್ದಾರೆ. ಆದರೆ, ಉದ್ಯೋಗವನ್ನು ಅರಸಿ ಬಂದು ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಇನ್ನು ಘಟನೆಯ ನಂತರ ಮಾಹಿತಿ ತಿಳಿದ ಪೊಲೀಸರು ಸೌತ್‌ಸಿಟಿ ಅಪಾರ್ಟ್‌ಮೆಂಟ್‌ನ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಘಟನೆ ಬಗ್ಗೆ ಸಿಸಿಟಿವಿ ಮತ್ತು ಇತರೆ ದಾಖಲೆಗಳನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ ಅಪಘಾತ: ಪಲ್ಟಿಯಾಗಿ 100 ಮೀಟರ್ ಉರುಳಿದ ಕಾರು
ಅನೈತಿಕ ಸಂಬಂಧ ಶಂಕೆ, ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ: ಬೆಂಗಳೂರು (ಜೂ.5): ಬೆಂಗಳೂರಿನ ಬಸವೇಶ್ವರ ನಗರದ ಮಂಜುನಾಥನಗರದಲ್ಲಿ ಮಹಿಳೆಯ ಬರ್ಬರ ಕೊಲೆ ನಡೆದಿದೆ. ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆ ನಡೆದಿದ್ದು, ನಾಗರತ್ನ (32) ಕೊಲೆಯಾದ ಮಹಿಳೆ ಯಾಗಿದ್ದಾಳೆ. ಈಕೆಯ ಗಂಡ ಅಯ್ಯಪ್ಪ ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಲೆ ನಡೆಸಿದ್ದಾನೆ. ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆ ಈ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ.
ಅಪ್ಪ ಅಮ್ಮ ಇಲ್ಲದೆ ಅನಾಥಾಶ್ರಮದಲ್ಲಿದ್ದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ, ದಂಪತಿಗೆ 11 ವರ್ಷದ ಮಗ ಹಾಗೂ 7 ವರ್ಷದ ಮಗಳು ಇದ್ದಳು. ಅಯ್ಯಪ್ಪ ತನ್ನ ಅಕ್ಕನ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದನು. ಇತ್ತೀಚೆಗೆ ಹೆಂಡತಿ ಮೇಲೆ ಅಯ್ಯಪ್ಪ ಅನುಮಾನ ಪಡುತ್ತಾ ಇದ್ದನು. ಕಳೆದ ಮೂರು ದಿನಗಳಿಂದ ದಂಪತಿ ಮಧ್ಯೆ ಗಲಾಟೆ ನಡೀತಾ ಇತ್ತು. ಇದಕ್ಕೆ ಪುಷ್ಟಿ ನೀಡುವಂತೆ ಕೊಲೆಯಾದ ಮಹಿಳೆ ನಾಗರತ್ನ ಜೊತೆ ಆ ದಿನ ಓರ್ವ ವ್ಯಕ್ತಿ ಇದ್ದ. ಅಯ್ಯಪ್ಪ ಅಕ್ಕನ ಮಗ ಚಂದ್ರು ಜೊತೆ ನಾಗರತ್ನ ಮನೆಯಲ್ಲಿದ್ದಳು. ಶನಿವಾರ ರಾತ್ರಿ ಗಂಡ ಮನೆಗೆ ಬಂದಾಗ ಚಂದ್ರು ಮನೆಯಲ್ಲಿ ಮಲಗಿದ್ದ. ಚಂದ್ರುಗೆ ಮದುವೆಯಾಗಿ ಸಂಸಾರವಿದೆ. ಹೀಗಿದ್ದರೂ ತನ್ನ ಮನೆಯಲ್ಲಿ ಮಲಗಿದ್ದಾನೆ. ಯಾಕೆ ಬಂದಿದ್ದಾನೆ ಎಂದು ಅಯ್ಯಪ್ಪ ಗಲಾಟೆ ತೆಗೆದಿದ್ದ. ಚಂದ್ರು ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಗಲಾಟೆ ಮಾಡಿದ್ದ, ಬಳಿಕ ಚಂದ್ರು ನಾಪತ್ತೆಯಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ