Bengaluru Crime: ಕುದುರೆ ಮೇಲೆ ಕೂರಿಸಲಿಲ್ಲವೆಂದು ಅಪ್ರಾಪ್ತ ಬಾಲಕನ ಕೊಲೆ!

By Sathish Kumar KH  |  First Published Apr 9, 2023, 8:26 PM IST

ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಕುದುರೆ ಸಾಕಿಕೊಂಡಿದ್ದ ಬಾಲಕ ತನ್ನ ಕುದರೆ ಮೇಲೆ ಕೂರಿಸಲಿಲ್ಲವೆಂದು ಬಾಲಕನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ಇತ್ತೀಚೆಗೆ ನಡೆದಿದೆ.


ಬೆಂಗಳೂರು (ಏ.09): ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುವುದನ್ನು ನಾವು ಕೇಳಿದ್ದೇವೆ. ಆದರೆ, ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಕುದುರೆ ಸಾಕಿಕೊಂಡಿದ್ದ ಬಾಲಕ ತನ್ನ ಕುದರೆ ಮೇಲೆ ಕೂರಿಸಲಿಲ್ಲವೆಂದು ಬಾಲಕನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ದುರ್ಘಟನೆ ಇತ್ತೀಚೆಗೆ ನಡೆದಿದೆ.

ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಏಪ್ರಿಲ್‌ 3ನೇ ತಾರೀಕಿನಂದು 15 ವರ್ಷದ ಅಪ್ರಾಪ್ತ ಬಾಲಕನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಆದರೆ, ಇನ್ನು ಮೃತದೇಹದ ಮೇಲೆ ಆಗಿದ್ದ ಗಾಯಗಳನ್ನು ನೋಡಿದರೆ ಇದು ಸಂಚು ರೂಪಿಸಿಕೊಂಡು ಮಾಡಿದ ಕೊಲೆಯೇ ಎಂದು ಪೊಲೀಸರಿಗೆ ಅನುಮಾನ ಬಂದಿತ್ತು. ಈ ಕೊಲೆ ಪ್ರಕರಣವನ್ನು ಬೇಧಿಸಲು ಮುಂದಾದ ಪೊಲೀಸರು ಕೊಲೆಯಾದ ಬಾಲಕ ಯಾವ ಪ್ರದೇಶದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾನೆ ಎಂದು ಹುಡುಕಿದ್ದಾರೆ, ಇದಕ್ಕಾಗಿ ಬರೋಬ್ಬರಿ 60ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್‌ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಆರೋಪಿಗಳ ಸುಳಿವು ಸಿಕ್ಕಿದೆ.

Tap to resize

Latest Videos

ಆಟವಾಡುವಾಗ ಹಾವು ಕಚ್ಚಿದರೂ ಮನೆಯಲ್ಲಿ ತಿಳಿಸದ ಬಾಲಕ: ಬಾಯಲ್ಲಿ ನೊರೆ ಬಂದು ಸಾವು

ಕುದರೆ ಮೇಲೆ ಕೂರಿಸುವ ವಿಚಾರಕ್ಕೆ ಜಗಳ ಆರಂಭ: ಕೊಲೆಯಾದ ಬಾಲಕನನ್ನು ಸತೀಶ್‌ (15) ಎಂದು ಗುರುತಿಸಲಾಗಿದೆ. ಬಾಲಕನನ್ನು ಕೊಲೆ ಮಾಡಿದ ಸೈಯದ್ ಶೋಯೆಬ್‌, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಎಂಬ ಆರೋಪಿಗಳನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.  ನಗರದ ಮಾರ್ಕ್ಸ್ ರಸ್ತೆಯಲ್ಲಿ ಬಾಲಕ ಸತೀಶ್‌ ಕುದುರೆಯನ್ನು ಇಟ್ಟುಕೊಂಡಿದ್ದನು. ಈ ವೇಳೆ ಕುದುರೆ ಮೇಲೆ ಸವಾರಿ ಮಾಡಲು ಬರುವ ಮಕ್ಕಳನ್ನು ಕುದುರೆ ಮೇಲೆ ಹತ್ತಿಸಿ ಸುತ್ತಾಡಿಸುತ್ತಿದ್ದನು. ಇದೇ ವೇಳೆ ಸುಹೇಲುಲ್ಲಾ ಷರೀಫ್ ಕೂಡ ಕುದುರೆ ಮೇಲೆ ಸವಾರಿ ಮಾಡಲು ಬಂದಿದ್ದನು. ಆದರೆ, ಈ ವೇಳೆ ದೊಡ್ಡವರನ್ನು ನಾವು ಕುದುರೆ ಮೇಲೆ ಕೂರಿಸುವುದಿಲ್ಲ. ಚಿಕ್ಕ ಮಕ್ಕಳಿದ್ದರೆ ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾನೆ. ಈ ವೇಳೆ ನಾನು ಹಣ ಕೊಡುತ್ತೇನೆ ಕೊಡು ಎಂದರೂ ಕೂರಿಸಲಿಲ್ಲ. ಇದರಿಂದ ಕೋಪಗೊಂಡ ಷರೀಫ್‌ ಬಾಲಕನ ಕೆನ್ನೆಗೆ ಹೊಡೆದು ಅಲ್ಲಿಂದ ಪರಾರಿ ಆಗಿದ್ದನು. 

ಕಪಾಳಕ್ಕೆ ಹೊಡೆದವನಿಗೆ ಹೋಟೆಲ್‌ ಬಳಿ ಹಲ್ಲೆ: ಇನ್ನು ಘಟನೆ ನಡೆದು ಕೆಲ ದಿನಗಳ ನಂತರ ಬೆಂಗಳೂರಿನ ಹೋಟೆಲೊಂದರ ಹಲ್ಲೆ ಮಾಡಿದ್ದ ಷರೀಫ್ ನಿಂತುಕೊಂಡಿದ್ದನು. ಹಲ್ಲೆ ಮಾಡಿದವನನ್ನು ನೋಡಿದ ಬಾಲಕ ಸತೀಶ್, ಆತನ ಸ್ನೇಹಿತರನ್ನು ಕರೆದುಕೊಂಡು ಹೋಗಿ ಷರೀಫ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾಲ್ಕೈದು ಜನರನ್ನು ತಿರುಗಿಸಿ ಹೊಡೆಯಲಾಗದೇ ಸಣ್ಣಪುಟ್ಟ ಗಾಯಗಳೊಂದಿಗೆ ಮನೆಗೆ ಹೋಗಿದ್ದನು. ಆದರೆ, ಬಾಲಕ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕಿದ್ದನು. ಈ ವೇಳೆ ಬಾಲಕನನ್ನು ಕೊಲೆ ಮಾಡುವುದಕ್ಕೆ ನಿರ್ಧರಿಸಿದ್ದಾನೆ.

ಗೋ ಸಾಗಣೆ ವ್ಯಕ್ತಿ ಸಾವು: ಪುನೀತ್‌ ಕೆರೆಹಳ್ಳಿ ಅಂಡ್‌ ಟೀಮ್‌ಗೆ 7 ದಿನ ಪೊಲೀಸ್‌ ಕಸ್ಟಡಿ

ಹಲ್ಲೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು: ಬಾಲಕ ತನ್ನ ಸ್ನೇಹಿತರೊಂದಿಗೆ ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಷರೀಫ್‌ ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದನು. ಈ ವಿಚಾರವನ್ನು ತನ್ನ ಸ್ನೇಹಿತರಿಗೂ ಹೇಳಿಕೊಂಡಿದ್ದಾನೆ. ಇನ್ನು ಹೇಗಾದರೂ ಮಾಡಿ ಅವನನ್ನು ಮುಗಿಸಲೇಬೇಕು ಎಂದುಕೊಂಡು ಮೂವರು ಸ್ನೇಹಿತರು ಸೇರಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಸುತ್ತಾಡಿದ್ದಾರೆ. ಇನ್ನು ಬಾಲಕ ಮನೆ ವಿಳಾಸ, ಕೆಲಸಕ್ಕೆ ಹೋಗಿ ಬರುವ ಸ್ಥಳವನ್ನು ತಿಳಿದುಕೊಂಡಿದ್ದಾನೆ. ನಂತರ ಬಾಲಕ ಯಾವ ರಸ್ತೆಗಳಲ್ಲಿ ಸಂಚಾರ ಮಾಡುತ್ತಾನೆ, ಆತನ ಸ್ನೇಹಿತರು ಯಾರು? ಹಾಗೂ ಅವನು ಒಂಟಿಯಾಗಿ ಸಿಗುವ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ಕೊಲೆ ಯೋಜನೆಯಂತೆ ಹಲ್ಲೆ: ಬಾಲಕನ ಹತ್ಯೆಗೆ ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡ ಷರೀಫ್‌ ಮತ್ತು ಆತನ ಇಬ್ಬರು ಸ್ನೇಹಿತರು ಸೇರಿಕೊಂಡು ಏ3ರಂದು ಬಾಲಕ ಸತೀಶ್‌ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿದ್ದಾರೆ. ಈ ವೇಳೆ ಯಾವುದಕ್ಕೂ ಹೆದರದೇ ಅವರೊಂದಿಗೆ ಬಾಲಕ ಹೋಗಿದ್ದಾನೆ. ನಂತರ, ಬಾಲಕ ತಪ್ಪಿಸಿಕೊಂಡು ಹೋಗಲೆತ್ನಿಸಿದಾಗ ಚಾಕು ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮೂವರೂ ಸೇರಿಕೊಂಡು ಮನಸೋ ಇಚ್ಛೆ ದೊಣ್ಣೆಗಳಿಂದ ಹೊಡೆದು ಹಲ್ಲೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾರೆ. ಆದರೆ, ತೀವ್ರ ಗಾಯಗೊಂಡಿದ್ದ ಬಾಲಕ ಸತೀಶ್‌ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾನೆ. ನಂತರ ಮೃತದೇಹ ಪತ್ತೆಯಾಗಿದ್ದು, ಅದನ್ನು ಪೊಲೀಸರು ಆತನ ಪೋಷಕರಿಗೆ ಒಪ್ಪಿಸಿದ್ದರು. ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಆರೋಪಿಗಳು ಕಂಬಿ ಎಣಿಸುತ್ತಿದ್ದಾರೆ.

click me!