ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಂಗಳಮುಖಿಯರು ಗ್ಯಾಂಗ್ ಕಟ್ಟಿಕೊಂಡು ಬೆಳ್ಳಂಬೆಳಗ್ಗೆ ಒಬ್ಬಂಟಿ ಸಂಚಾರ ಮಾಡುವ ಜನರನ್ನು ರಾಬರಿ ಮಾಡಲು ಮುಂದಾಗಿದ್ದಾರೆ.
ಬೆಂಗಳೂರು (ಜು.11): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಯ ಸಿಗ್ನಲ್‌ಗಳು, ಅಂಡರ್ ಪಾಸ್‌ಗಳು, ಮಾರುಕಟ್ಟೆಗಳು ಹಾಗೂ ಬೀದಿಗಳಲ್ಲಿ ಬಂದು ಭಿಕ್ಷಾಟನೆ ಮಾಡುತ್ತಿದ್ದ ಮಂಗಳಮುಖಿಯರು ಗ್ಯಾಂಗ್ ಕಟ್ಟಿಕೊಂಡು ಬೆಳ್ಳಂಬೆಳಗ್ಗೆ ಒಬ್ಬಂಟಿಯಾಗಿ ಆಟೋ ಹತ್ತಿದವರನ್ನು ರಾಬರಿ ಮಾಡಲು ಮುಂದಾಗಿದೆ. ಬೆಳಗ್ಗೆ ಆಟೋ ಹತ್ತುವ ಒಬ್ಬಂಟಿ ಪ್ರಯಾಣಿಕರೇ ಎಚ್ಚರವಾಗಿರಿ..
ಹೌದು, ಮಂಗಳಮುಖಿಯರಿಗೆ ಸಮಾಜದಲ್ಲಿ ಗೌರವ ಸಿಗುವಿದಿಲ್ಲ, ಅವರನ್ನು ದುಡಿಮೆಗೆ ಸೇರಿಸಿಕೊಳ್ಳಲು ಉದ್ಯಮಿಗಳು ಹಿಂದೇಟು ಹಾಕುತ್ತಾರೆ. ಹೀಗಾಗಿ, ಅನಿವಾರ್ಯವಾಗಿ ಅವರು ದುಡಿಯಲು ಹಾಗೂ ಕೆಲಸ ಮಾಡಲು ಶಕ್ತವಾಗದೇ ಭಿಕ್ಷಾಟನೆ ಮಾರ್ಗ ಹಿಡಿದಿದ್ದಾರೆ ಎಂಬ ಸಿದ್ಧ ಉತ್ತರವನ್ನು ನಾವೆಲ್ಲರೂ ಕೇಳಿರುತ್ತೇವೆ. ಇನ್ನು ಮಂಗಳಮುಖಿಯರ ಕಷ್ಟಗಳನ್ನು ಕೇಳಿ ಭಿಕ್ಷಾಟನೆ ವೇಳೆ ಹಣವನ್ನೂ ಕೊಟ್ಟು ಮುಂದೆ ಹೋಗಿರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಭಿಕ್ಷಾಟನೆ ನೆಪದಲ್ಲಿ ಅಂಗಡಿ, ಮುಂಗಟ್ಟು ಹಾಗೂ ಮನೆ ಉದ್ಘಾಟನೆ ವೇಳೆ ಕಿರುಕುಳ ನೀಡಿರುವ ಘಟನೆಗಳು ಕೂಡ ಸಾಕಷ್ಟು ನಡೆದಿವೆ. ಈಗ ಎಲ್ಲವನ್ನೂ ಬಿಟ್ಟು ಒಬ್ಬಂಟಿಯಾಗಿ ಬೆಳ್ಳಂಬೆಳಗ್ಗೆ ಆಟೋಗಳಲ್ಲಿ ಸಂಚಾರ ಮಾಡುವವರನ್ನೇ ಟಾರ್ಗೆಟ್ ಮಾಡಿಕೊಂಡಿರುವ ಮಂಗಳಮುಖಿಯರು ಗ್ಯಾಂಗ್ ಕಟ್ಟಿಕೊಂಡು ರಾಬರಿ ಮಾಡಲು ಮುಂದಾಗಿದ್ದಾರೆ.
undefined
ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಆನ್‌ಲೈನ್ ರಮ್ಮಿ ಆಟ: ಅರುಣ್ ಕುಮಾರ್ ಹೇಳಿದ್ದೇನು?
ಬೆಳಗ್ಗೆ ಒಂಟಿಯಾಗಿ ಆಟೋ ಹತ್ತುವವರೇ ಟಾರ್ಗೆಟ್: ಇನ್ನು ರಾಬರಿ ಗ್ಯಾಂಗ್ ಮಾಡಿಕೊಂಡಿರುವ ಮಂಗಳಮುಖಿಯರು ರಸ್ತೆಯ ಸಿಗ್ನಲ್ ಗಳಲ್ಲಿ ನಿಲ್ಲೋದಿಲ್ಲ. ಆದರೆ, ಬಸ್ ನಿಲ್ದಾಣಗಳು, ರಸ್ತೆ ಬದಿ ನಡೆಯೋರನ್ನ ಮಾತ್ರ ಟಾರ್ಗೆಟ್ ಮಾಡಿ ಬೆಳ್ಳಂಬೆಳಗ್ಗೆ 5 ಗಂಟೆಗೂ ಮುಂಚಿತವಾಗಿ ಸಂವಚಾರ ಮಾಡುವವ ಜನರನ್ನು ರಾಬರಿಯನ್ನು ಮಾಡುತ್ತಿದ್ದರು. ಇದರ ಮುಂದುವರಿದ ಭಾಗವಾಗಿ ಆಟೋ ಚಾಲಕನೊಬ್ಬನನ್ನು ಪರಿಚಯ ಮಾಡಿಕೊಂಡು ಒಬ್ಬಂಟಿಯಾಗಿ ಆಟೋ ಹತ್ತಿದವರನ್ನು ಟಾರ್ಗೆಟ್ ಮಾಡಲು ಯೋಜನೆ ರೂಪಿಸಿ ನೂರಾರು ಪ್ರಯಾಣಿಕರನ್ನು ರಾಬರಿ ಮಾಡಿದ್ದಾರೆ.
ಟೆಕ್ಕಿಗಳೇ ಇವರ ಬಹುಮುಖ್ಯ ಟಾರ್ಗೆಟ್: ಮುಖ್ಯವಾಗಿ ಮಂಗಳಮುಖಿಯರು ಬೆಳಗ್ಗೆ ಕೆಲಸಕ್ಕೆ ಹೋಗುವ ಟೆಕ್ಕಿಗಳು, ರಸ್ತೆ ಬದಿ ಹೋಗುವ ಜನಗಳೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಕೇಳೋ ನೆಪದಲ್ಲಿ ಮಾತನಾಡಿಸುತ್ತಿದ್ದ ಇಬರು, ಹಣ ಕೊಡಲು ಪರ್ಸ್ ತೆಗೆದ ಕೂಡಲೇ ಅವರ ಬಳಿ ಇರೋದೆಲ್ಲಾ ದೋಚಿಕೊಂಡು ಪರಾರಿ ಆಗುತ್ತಿದ್ದರು. ಇನ್ನು ಬೆಳಗ್ಗೆ ಸುತ್ತಮುತ್ತಲೂ ಯಾರೂ ಇರದ ಹಿನ್ನೆಲೆಯಲ್ಲಿ ಅವರು ಸಿಗುತ್ತಿರಲಿಲ್ಲ. ಇನ್ನು ಬೆಳಗ್ಗೆ 5 ಗಂಟೆಗೆ ಆಟೋ ಹತ್ತಿದರೆ ರೌಂಡ್ಸ್ ಹಾಕಿ ರಾಬರಿ ಮಾಡುತ್ತಿದ್ದರು. ಇವರ ಕೃತ್ಯದ ಸಮಯ ಮುಂಜಾನೆ 5 ಗಂಟೆಯಿಂದ 8 ಗಂಟೆವರೆಗೆ ಮಾತ್ರ ತಮ್ಮ ರಾಬರಿ ಕೃತ್ಯವನ್ನು ಮಾಡುತ್ತಿದ್ದರು.
ಎಣ್ಣೆ ಹೊಡಿಬೇಡವೆಂದರೂ ಮಾತು ಕೇಳದ ಮಗನನ್ನು ಹೊಡೆದು ಕೊಂದ ತಂದೆ
ರಾಬರಿ ಗ್ಯಾಂಗ್‌ನ ನಾಲ್ವರನ್ನು ಅರೆಸ್ಟ್ ಮಾಡಿದ ಪೊಲೀಸರು: ಕೊಡಿಗೇಹಳ್ಳಿ ಪೊಲೀಸರಿಂದ ಸುಲಿಗೆ ಮಾಡ್ತಿದ್ದ ಮಂಗಳಮುಖಿಯರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿದ್ದಾರೆ. ಓರ್ವ ಆಟೋ ಡ್ರೈವರ್ ಮೂವರು ಮಂಗಳಮುಖಿಯರು ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸ್ನೇಹ, ಅವಿಷ್ಕಾ, ದೀಪಿಕಾ ಹಾಗೂ ಆಟೋ ಚಾಲಕ ಪ್ರಕಾಶ್ ಬಂಧಿತ ಆರೋಪಿಗಳು. ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಕೊಡಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳು. ಮತ್ತೊಂದು ಕೃತ್ಯ ಎಸಗುವಾಗ ಪೊಲೀಸರುಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.