ಎಣ್ಣೆ ಹೊಡಿಬೇಡವೆಂದರೂ ಮಾತು ಕೇಳದ ಮಗನನ್ನು ಹೊಡೆದು ಕೊಂದ ತಂದೆ
ಮದ್ಯ ಸೇವನೆ ಮಾಡಿ ಮನೆ ಮಂದಿಗೆಲ್ಲಾ ಕಿರುಕುಳ ನೀಡುತ್ತಿದ್ದ ಮಗನಿಗೆ ಮದ್ಯ ಸೇವನೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ದುರ್ಘಟನೆ ನಡದಿದೆ.
ವಿಜಯಪುರ (ಜು.10): ಪ್ರತಿನಿತ್ಯ ಮದ್ಯ ಸೇವನೆ ಮಾಡಿ ಮನೆ ಮಂದಿಗೆಲ್ಲಾ ಕಿರುಕುಳ ನೀಡುತ್ತಿದ್ದ ಮಗನಿಗೆ ಮದ್ಯ ಸೇವನೆ ಮಾಡಬೇಡ ಎಂದು ಬುದ್ಧಿವಾದ ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ದುರ್ಘಟನೆ ನಡದಿದೆ.
ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಘಟನೆನಡೆದಿದ್ದು, ಮೃತ ದುರ್ದೈವಿಯನ್ನು ಮುತ್ತಪ್ಪ ಮಸಳಿ (38) ಹತ್ಯೆಯಾಗಿರುವ ದುರ್ದೈವಿ ಆಗಿದ್ದಾನೆ. ಕೊಲೆ ಮಾಡಿದ ಆರೋಪಿ ಯುವಕನ ತಂದೆ ಬಸಪ್ಪ ಮಸಳಿ ಎಂದು ಗುರುತಿಸಲಾಗಿದೆ. ಹೊಲಕ್ಕೆ ಹೋಗಿ ಕೆಲಸ ಮಾಡೋಣೆ ಎಂದು ಕರೆದುಕೊಂಡು ಹೋಗಿ, ಹೊಲದಲ್ಲಿ ನೀರುಣಿಸಲು ಇಟ್ಟಿದ್ದ ಸಲಿಕೆಯಿಂದ ತಲೆಗೆ ಹೊಡೆದಿದ್ದಾರೆ. ಇದಾದ ನಂತರ, ಮಗನ ಕಿವಿ ಹಾಗೂ ಬಾಯಿಯಲ್ಲಿ ರಕ್ತಸ್ರಾವ ಉಂಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಬೆಳಗಾವಿಯ ಜೈನಮುನಿ ಕೊಲೆ ಬೆನ್ನಲ್ಲೇ ದಂಪತಿಯ ಬರ್ಬರ ಹತ್ಯೆ
ಮನೆಗೆ ಒಳ್ಳೆಯ ಮಗನಾಗಲಿಲ್ಲ ಎಂದು ಹಲ್ಲೆ: ಪ್ರತಿನಿತ್ಯ ಮದ್ಯ ಸೇವನೆ ಮಾಡುತ್ತಾ ಮನೆಯವರಿಗೆ ಒಂದಲ್ಲಾ ಒಂದು ಕಿರುಕುಳ ನೀಡುತ್ತಾ ಹಣವನ್ನು ಪೋಲು ಮಾಡುತ್ತಿದ್ದ ಹಾಗೂ ಮನೆಗೆ ಒಳ್ಳೆಯ ಮಗನಾಗದ ಹಿನ್ನೆಲೆಯಲ್ಲಿ ತಂದೆ ಬಸಪ್ಪ ಮಸಳಿ ರೋಸಿ ಹೋಗಿದ್ದರು. ಹತ್ತಾರು ಬಾರಿ ಮಗನನ್ನು ಕೂರಿಸಿಕೊಂಡು ಬುದ್ಧಿವಾದವನ್ನು ಹೇಳಿದ್ದಾರೆ. ಆದರೂ, ತಂದೆ ಹಾಗೂ ಮನೆಯವರ ಮಾತನ್ನು ಕೇಳದೇ ತನ್ನದೇ ಮದ್ಯ ಸೇವನೆ ಚಟವನ್ನು ಮುಂದುವರೆಸಿದ್ದನು. ಬುದ್ಧಿ ಮಾತನ್ನು ಕೇಳದ ಮಗ ಮುತ್ತಪ್ಪನಿಗೆ ಬುದ್ಧಿ ಹೇಳಿದರೂ ತಿಳಿದುಕೊಳ್ಳುವುದಿಲ್ಲ ಎಂದು ಹೊಡೆದು ಕೊಂದಿದ್ದಾನೆ.
ಜಮೀನಿನ ವಸ್ತುಗಳನ್ನು ಮಾರಿ ಮದ್ಯ ಸೇವನೆ: ಮನೆಯವರು ಎಷ್ಟೇ ಬುದ್ಧಿ ಹೇಳಿದರೂ ಕೇಳದೆ ಹೊಲದಲ್ಲಿ ಬೆಳೆದ ದವಸ ದಾನ್ಯಗಳನ್ನು ಮಾರುವುದು, ಹೊಲದಲ್ಲಿ ಕೆಲಸ ಮಾಡಲು ಇಟ್ಟಿದ್ದ ಸಲಿಕೆ , ಗುದ್ದಲಿ ಇತ್ಯಾದಿ ವಸ್ತುಗಳನ್ನು ಕೂಡ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಿ ಮದ್ಯ ಸೇವನೆ ಮಾಡಿ ಬಂದಿದ್ದನು. ಈ ವೇಳೆ ಹೊಲಕ್ಕೆ ಹೋದ ತಂದೆ ಕೆಲಸ ಮಾಡುವ ಸಾಮಗ್ರಿಗಳು ಇಲ್ಲದ ಹಿನ್ನೆಲೆಯಲ್ಲಿ ಕೋಪಗೊಂಡು ಮನೆಗೆ ಬಂದು ಮಗನನ್ನು ಪುನಃ ಹೊಲದ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ, ಅಪ್ಪನಿಗೆ ಎದುರು ಮಾತನಾಡಿದ ಮಗನನ್ನು ಸಿಟ್ಟಿನಲ್ಲಿ ಸಲಿಕೆಯನ್ನು ತೆಗೆದುಕೊಂಡು ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ಪ್ರಕರಣದ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಮೊಬೈಲ್ ಕಿತ್ತುಕೊಳ್ಳುವುದನ್ನು ತಡೆಯಲು ಹೋಗಿ ಪ್ರಾಣಕಳೆದುಕೊಂಡ ಯುವತಿ: ಚೆನ್ನೈ: ಮೊಬೈಲ್ ಕಳ್ಳರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯತ್ನಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಆಯತಪ್ಪಿ ರೈಲಿನಿಂದ ಬಿದ್ದು, ಸಾವನ್ನಪ್ಪಿದ ಘಟನೆ ನೆರೆಯ ರಾಜ್ಯ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. 22 ವರ್ಷದ ಪ್ರೀತಿ (S Preethi) ಮೃತ ಮಹಿಳೆ. ಜುಲೈ 2 ರಂದು ಈ ಘಟನೆ ನಡೆದಿದ್ದು, ರೈಲಿನಿಂದ ಕೆಳಗೆ ಬಿದ್ದು ಗಾಯಗೊಂಡ ಪ್ರೀತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಪ್ರೀತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬೆಳಗಾವಿ ಜೈನಮುನಿ ಹತ್ಯೆ ಪ್ರಕರಣ ಸಿಬಿಐ ತನಿಖೆಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ರೈಲಿನಿಂದ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯ: ಚೆನ್ನೈ ಲೋಕಲ್ ರೈಲಿನಲ್ಲಿ ಪ್ರೀತಿ ತೆರಳುತ್ತಿದ್ದಾಗ ಇಬ್ಬರು ಮೊಬೈಲ್ ಕಳ್ಳರು ಆಕೆಯಿಂದ ಮೊಬೈಲ್ ಕಸಿಯಲು ಯತ್ನಿಸಿದ್ದು, ಈ ವೇಳೆ ಇದನ್ನು ವಿರೋಧಿಸುವ ವೇಳೆ ಪ್ರೀತಿ ಆಯತಪ್ಪಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ರೈಲಿನಿಂದ ಬಿದ್ದ ಪ್ರೀತಿಯ ತಲೆಗೆ ಗಂಭೀರ ಗಾಯಗಳಾಗಿದ್ದವು. ಚೆನ್ನೈನ ಇಂದಿರಾನಗರ ರೈಲ್ವೆ ಸ್ಟೇಷನ್‌ನಲ್ಲಿ ರೈಲಿನ ಫೂಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರೀತಿ ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಇಬ್ಬರು ಕಳ್ಳರು ಆಕೆಯ ಮೊಬೈಲ್ ಫೋನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಆಕೆ ವಿರೋಧಿಸಿದ್ದು, ಕಳ್ಳರು ಹಾಗೂ ಆಕೆಯ ಮಧ್ಯೆ ಎಳೆದಾಟವಾಗಿದೆ. ಈ ವೇಳೆ ಆಯತಪ್ಪಿ ಆಕೆ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ನಂತರ ಆಕೆಯ ಮೊಬೈಲ್ ಕಸಿದು ಕಳ್ಳರು ಆಕೆಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಇತ್ತ ಕೆಳಗೆ ಬಿದ್ದ ಪ್ರೀತಿ ಪ್ರಜ್ಞಾಶೂನ್ಯಳಾಗಿದ್ದು, ನಂತರ ರೈಲ್ವೆ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಮೃತಪಟ್ಟಿದ್ದಾಳೆ.