ಅಮಿತ್ ಶಾ ಸಚಿವಾಲಯದ ಅಧಿಕಾರಿ ಎಂದು ಪ್ರಮುಖ ಸರ್ಕಾರಿ ಹುದ್ದೆಗೆ ಸೇರಲು ಯತ್ನಿಸಿದ ನಿರುದ್ಯೋಗಿ!

By BK Ashwin  |  First Published Jul 11, 2023, 10:56 AM IST

ರಾಬಿನ್ ಉಪಾಧ್ಯಾಯ ಎಕ್ಸ್‌ಪ್ರೆಸ್‌ವೇ ಯೋಜನೆಯ ಉಪಾಧ್ಯಕ್ಷ ಮತ್ತು ಯೋಜನಾ ಸಂಯೋಜಕ ಹುದ್ದೆಗೆ ಪ್ರಯತ್ನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ನವದೆಹಲಿ (ಜುಲೈ 11, 2023): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ವಿಶೇಷ ಕರ್ತವ್ಯದ ಅಧಿಕಾರಿಯ ಸೋಗು ಹಾಕಿ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಹಿರಿಯ ಅಧಿಕಾರಿಯಾಗಿ ನೇಮಕಗೊಳ್ಳಲು ಯತ್ನಿಸಿದ ಆರೋಪದ ಮೇಲೆ ಕೆಲಸವೇ ಇಲ್ಲದ ಸಿವಿಲ್ ಎಂಜಿನಿಯರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮೀರತ್ ನಿವಾಸಿಯಾದ 48 ವರ್ಷದ ರಾಬಿನ್ ಉಪಾಧ್ಯಾಯ ಅವರು 25 ವರ್ಷಗಳಿಂದ ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದರು.

ರಾಬಿನ್ ಉಪಾಧ್ಯಾಯ ಎಕ್ಸ್‌ಪ್ರೆಸ್‌ವೇ ಯೋಜನೆಯ ಉಪಾಧ್ಯಕ್ಷ ಮತ್ತು ಯೋಜನಾ ಸಂಯೋಜಕ ಹುದ್ದೆಗೆ ಪ್ರಯತ್ನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಷತ್ ಶರ್ಮಾ ಎಂಬಾತ ಹೊಸದಿಲ್ಲಿಯ ಸೈಬರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ತನ್ನ ಅಧಿಕೃತ ಐಡಿಗೆ ರಾಜೀವ್ ಕುಮಾರ್ ಎಂಬ ಕೇಂದ್ರ ಗೃಹ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ ಎಂದು ಹೇಳಿಕೊಳ್ಳುವ ಯಾರೋ ಒಬ್ಬರಿಂದ "ನಕಲಿ" ಇಮೇಲ್ ವಿಳಾಸದಿಂದ ಇಮೇಲ್ ಬಂದಿದೆ ಎಂದು ದೂರು ನೀಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

Tap to resize

Latest Videos

undefined

ಇದನ್ನು ಓದಿ: ಮುದ್ದು ಕಂದಮ್ಮನ ಮೇಲೆ ಕಾರು ಹತ್ತಿಸಿ ಮಗಳ ಸಾವಿಗೆ ಕಾರಣವಾದ ತಾಯಿ: ಜರ್ಝರಿತವಾದ ಕುಟುಂಬ

ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ರಾಬಿನ್ ಉಪಾಧ್ಯಾಯ ಅವರನ್ನು ಹಿರಿಯ ಸಹಾಯಕ ಉಪಾಧ್ಯಕ್ಷ ಮತ್ತು ಯೋಜನಾ ಸಂಯೋಜಕರಾಗಿ ನೇಮಿಸಲು ಸೂಚನೆಗಳನ್ನು ರವಾನಿಸಲು ಕೇಳಲಾಗಿದೆ ಎಂದು ಅವರ ಮೇಲ್‌ನಲ್ಲಿರುವ ವ್ಯಕ್ತಿ ಹೇಳಿದ್ದಾರೆ ಎಂದು ದೂರುದಾರ ಅಕ್ಷತ್‌ ಶರ್ಮಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತಮ್ಮ ತನಿಖೆಯಲ್ಲಿ rajeev.osd.mha@gmail.com ಇಮೇಲ್ ವಿಳಾಸವು ನಕಲಿ ಮತ್ತು ಜನರನ್ನು ವಂಚಿಸುವ ಉದ್ದೇಶದಿಂದ ರಚಿಸಲಾಗಿದೆ ಎಂದು ಕಂಡುಕೊಂಡಿದೆ.

"ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ, ನಮ್ಮ ತಂಡವು ಪ್ರಮುಖ ಶಂಕಿತ ರಾಬಿನ್ ಉಪಾಧ್ಯಾಯ ಅವರ ಮೇಲೆ ಅನುಮಾನ ಬಂದಿದೆ ಮತ್ತು ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ, ಇ ಮೇಲ್ ಐಡಿಯನ್ನು ಆರು-ಏಳು ದಿನಗಳ ಹಿಂದೆ ರಚಿಸಲಾಗಿದೆ ಮತ್ತು ರಾಬಿನ್ ಉಪಾಧ್ಯಾಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ. "ಶಂಕಿತನನ್ನು ಬಳಿಕ ಪತ್ತೆಹಚ್ಚಲಾಯಿತು ಮತ್ತು ಪ್ರಾಥಮಿಕ ವಿಚಾರಣೆಯ ಆಧಾರದ ಮೇಲೆ, ಶನಿವಾರ ಸಂಜೆ ಮೀರತ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಯಿತು" ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನವದೆಹಲಿ) ಹೇಮಂತ್ ತಿವಾರಿ ಹೇಳಿದ್ದಾರೆ.

ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಭೇಟಿಯಾದ ಚೆಲುವೆ ನಂಬ್ಕೊಂಡು 92 ಲಕ್ಷ ಕಳ್ಕೊಂಡ ಟೆಕ್ಕಿ: ಮದ್ವೆನೂ ಆಗ್ಲಿಲ್ಲ, ಹಣನೂ ಇಲ್ಲ!

ರಾಬಿನ್ ಉಪಾಧ್ಯಾಯ ಅವರು ಸಿವಿಲ್ ಎಂಜಿನಿಯರ್‌ ಆಗಿದ್ದು, ಸಿವಿಲ್ ನಿರ್ಮಾಣ ಯೋಜನೆಗಳಲ್ಲಿ ಅಪಾರ ಅನುಭವವನ್ನು ಹೊಂದಿದ್ದರು ಮತ್ತು ಕೆಲಸ ಪಡೆಯಲು ನಕಲಿ ರೆಫರೆನ್ಸ್‌ ಪಡೆಯಲು ಯೋಚಿಸಿದ್ದರು ಎಂದು ವಿಚಾರಣೆ ನಡೆಸಿದಾಗ ತಿಳಿದುಬಂದಿದೆ ಎಂದು ಹೇಮಂತ್ ತಿವಾರಿ ಹೇಳಿದರು. "ಆದ್ದರಿಂದ, ಅವರು ಚಾಲ್ತಿಯಲ್ಲಿರುವ ಹೆದ್ದಾರಿ ಯೋಜನೆಗಳು ಮತ್ತು ಅವುಗಳ ಪ್ರಗತಿಯನ್ನು ಹುಡುಕಿದರು. ಅದರ ನಂತರ, ಅವರು ರಾಜೀವ್ ಕುಮಾರ್, ವಿಶೇಷ ಕರ್ತವ್ಯದ ಅಧಿಕಾರಿ, ಕೇಂದ್ರ ಗೃಹ ಸಚಿವರ ಸೋಗು ಹಾಕುವ ಇಮೇಲ್ ಐಡಿಯನ್ನು ರಚಿಸಿದರು. ಅಲ್ಲದೆ, ಕೆಲಸ ಪಡೆಯಲು ಅವರ ರುಜುವಾತುಗಳನ್ನು ತೋರಿಸುವ CV ಅನ್ನು ಸಹ ಲಗತ್ತಿಸಿದ್ದಾರೆ" ಎಂದೂ ಹೆಚ್ಚುವರಿ ಪೊಲೀಸ್ ಉಪ ಆಯುಕ್ತ (ನವದೆಹಲಿ) ಹೇಮಂತ್ ತಿವಾರಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್‌ಗೆ ಬಂದ OTP ಪಾಕ್‌ಗೆ ಶೇರ್‌ ಆಗ್ಬೋದು ಎಚ್ಚರ: ಎನ್‌ಐಎ, ಎಟಿಎಸ್‌ ತನಿಖೆ

click me!