Crime News| ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಇರಿದು ಕೊಂದರು

By Kannadaprabha News  |  First Published Nov 12, 2021, 7:06 AM IST

*  ಬಿಹಾರ ಮೂಲದ ಮುನ್ನಾ ಕುಮಾರ್‌ ಕೊಲೆಯಾದ ದುರ್ದೈವಿ
*  ಕಬ್ಬಿಣ ಕದ್ದೊಯ್ಯಲು ಅಡ್ಡಿ ಮಾಡಿದ್ದಕ್ಕೆ ಚಾಕು ಇರಿತ
*  ಶಿಕ್ಷೆಗೆ ಗುರಿಯಾಗಿ 14 ವರ್ಷ ನಾಪತ್ತೆಯಾಗಿದ್ದವನ ಬಂಧನ
 


ಬೆಂಗಳೂರು(ನ.12): ಕ್ಷುಲ್ಲಕ ವಿಚಾರವಾಗಿ ಕೋಪಗೊಂಡು ಸೆಕ್ಯೂರಿಟಿ ಗಾರ್ಡ್‌ವೊಬ್ಬನನ್ನು ಆತನ ಸ್ನೇಹಿತರೇ ಕೊಂದು(Murder) ಪರಾರಿಯಾಗಿರುವ ಘಟನೆ ಕಸುವನಹಳ್ಳಿಯ ಸ್ಲಂ ಕ್ವಾಟ್ರರ್ಸ್‌ ಸಮೀಪ ನಡೆದಿದೆ.

ಬಿಹಾರ(Bihar) ಮೂಲದ ಮುನ್ನಾ ಕುಮಾರ್‌ (35) ಕೊಲೆಯಾದ ದುರ್ದೈವಿ. ಮೃತ ಮುನ್ನಾ, ಕೆಲ ದಿನಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಬಳಿಕ ಖಾಸಗಿ ಕಂಪನಿಯಲ್ಲಿ ಕಾವಲುಗಾರನಾಗಿ(Security Guard) ಕೆಲಸ ಮಾಡುತ್ತಿದ್ದ. ಸ್ಲಂ ಕ್ವಾಟ್ರರ್ಸ್‌ ಸಮೀಪದ ರಸ್ತೆಯಲ್ಲಿ ಮುನ್ನಾ ಕುಮಾರ್‌ ಹಾಗೂ ಆತನ ಗೆಳೆಯರ ಮಧ್ಯೆ ಬುಧವಾರ ರಾತ್ರಿ 8ರ ಸುಮಾರಿಗೆ ಜಗಳವಾಗಿದೆ. ಆಗ ಕೋಪಗೊಂಡು ಮುನ್ನಾನ ಕುತ್ತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಕೂಡಲೇ ಗಾಯಾಳುವನ್ನು ಸ್ಥಳೀಯರು ಆಸ್ಪತ್ರೆಗೆ(Hospital) ದಾಖಲಿಸಲು ಮುಂದಾಗಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ. ಬೆಳ್ಳಂದೂರು ಪೊಲೀಸ್‌ ಠಾಣೆಯಲ್ಲಿ(Police station) ಪ್ರಕರಣ ದಾಖಲಾಗಿದೆ.

Tap to resize

Latest Videos

undefined

Suvarna FIR: ಲೈಂಗಿಕವಾಗಿ ಹಿಂಸಿಸುತ್ತಿದ್ದ ಗಂಡನನ್ನೇ ಕೊಂದ ಟಿಕ್‌ಟಾಕ್ ಸುಂದರಿ

ನಕಲಿ ಸರ್ಫ್‌ ಎಕ್ಸ್‌ಎಲ್‌ ಪುಡಿ ತಯಾರಿಸುತ್ತಿದ್ದವರ ಬಂಧನ

ಬೆಂಗಳೂರು: ಬಟ್ಟೆ ಒಗೆಯುವ ಸರ್ಫ್‌ ಎಕ್ಸ್‌ಎಲ್‌(Surf Excel) ಕಂಪನಿ ಹೆಸರಿನಲ್ಲಿ ನಕಲಿ ಪುಡಿ ತಯಾರಿಕೆ ಘಟಕದ ಮೇಲೆ ಸಿಸಿಬಿ ದಾಳಿ(CCB Raid) ನಡೆಸಿ, ಮೂವರನ್ನು ಬಂಧಿಸಿದೆ(Arrest).

ರಾಜಸ್ಥಾನ(Rajasthan) ಮೂಲದ ತನ್‌ಸಿಂಗ್‌, ಮೋದಾರಾಮ್‌ ಹಾಗೂ ಜಾಲಮ್‌ ಸಿಂಗ್‌ ರಾಥೋಡ್‌ ಬಂಧಿತರಾಗಿದ್ದು, ಆರೋಪಿಗಳಿಂದ(Accused) 13,800 ನಕಲಿ ಸರ್ಫ್‌ ಎಕ್ಸ್‌ಎಲ್‌ ಪುಡಿಗಳ ಪ್ಯಾಕೆಟ್‌ ಸೇರಿದಂತೆ .6 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಘಟಕದ ಮಾಲೀಕ ಉತ್ತಮ್‌ ಸಿಂಗ್‌ ಪತ್ತೆಗೆ ತನಿಖೆ ನಡೆದಿದೆ. ಹನುಮಂತನಗರ ಠಾಣಾ ವ್ಯಾಪ್ತಿಯ ರಾಘವೇಂದ್ರ ಬ್ಲಾಕ್‌ನ 14ನೇ ಮುಖ್ಯರಸ್ತೆಯಲ್ಲಿ ಮನೆ ಬಾಡಿಗೆ ಪಡೆದು ಎರಡು ತಿಂಗಳಿಂದ ಸರ್ಫ್‌ ಎಕ್ಸ್‌ಎಲ್‌ ನಕಲಿ ಪ್ಯಾಕೆಟ್‌ಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಿದ್ದರು.

ಶಿಕ್ಷೆಗೆ ಗುರಿಯಾಗಿ 14 ವರ್ಷ ನಾಪತ್ತೆಯಾಗಿದ್ದವನ ಬಂಧನ

ಬೆಂಗಳೂರು: ಅಪಘಾತ(Accident) ಪ್ರಕರಣದಲ್ಲಿ ಸಜಾ ಶಿಕ್ಷೆ ಗುರಿಯಾಗಿ ಹದಿನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ(Tamil Nadu) ತ್ರಿಪೂರದ ಮತ್ತಿವಣ್ಣನ್‌ ಬಂಧಿತನಾಗಿದ್ದು, 2005ರಲ್ಲಿ ಅಪಘಾತ ಪ್ರಕರಣದಲ್ಲಿ ಆತನ ಶಿಕ್ಷೆಗೆ ಗುರಿಯಾಗಿದ್ದ. ಈ ಕೃತ್ಯದ ಬಳಿಕ ಬೆಂಗಳೂರು(Bengaluru) ತೊರೆದು ಆರೋಪಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಾಲ ವಾಪಸ್‌ ನೀಡದ್ದಕ್ಕೆ ವಾಹನ ಗುದ್ದಿಸಿ ಕೊಲೆ!

2005ರಲ್ಲಿ ಕಾರು ಚಾಲಕನಾಗಿದ್ದ ಮತ್ತಿವಣ್ಣನ್‌, ವಿಜಯನಗರ ಸಂಚಾರ ಠಾಣಾ ವ್ಯಾಪ್ತಿಯ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಮಾರೇನಹಳ್ಳಿ ಜಂಕ್ಷನ್‌ ಬಳಿ ಬೈಕ್‌ಗೆ ಕಾರು ಗುದ್ದಿಸಿದ್ದ. ಈ ಅಪಘಾತದಲ್ಲಿ ಬೈಕ್‌ ಸವಾರ ಸಾದಿಕ್‌ ಮೃತಪಟ್ಟಿದ್ದ. ಎರಡು ವರ್ಷಗಳ ವಿಚಾರಣೆ ನಡೆಸಿ ನ್ಯಾಯಾಲಯವು, 2007ರಲ್ಲಿ ಆರೋಪಿಗೆ 1 ವರ್ಷ ಸಜೆ ಹಾಗೂ .30 ಸಾವಿರ ದಂಡ ವಿಧಿಸಿತ್ತು. ಆದರೆ ಅಪಘಾತದ ಬಳಿಕ ನಗರ ತೊರೆದ ಆರೋಪಿ, ತ್ರಿಪೂರಕ್ಕೆ ತೆರಳಿ ಗಾರ್ಮೆಂಟ್ಸ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಹಳೇ ಪ್ರಕರಣದ ಆರೋಪಿಗೆ ಮತ್ತೆ ಹುಡುಕಾಟ ಶುರು ಮಾಡಿದ ಇನ್‌ಸ್ಪೆಕ್ಟರ್‌ ಗಿರಿರಾಜ್‌ ನೇತೃತ್ವದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಮಂಜುನಾಥ್‌, ಕಾನ್‌ಸ್ಟೇಬಲ್‌ ರತ್ನನ್‌ ದೀಪ್‌, ಆರೋಪಿಯನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ.

ಕಬ್ಬಿಣ ಕದ್ದೊಯ್ಯಲು ಅಡ್ಡಿ ಮಾಡಿದ್ದಕ್ಕೆ ಚಾಕು ಇರಿತ

ಬೆಂಗಳೂರು: ಎರಡು ದಿನಗಳ ಹಿಂದೆ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕನಿಗೆ ಚಾಕು ಇರಿದು ತಪ್ಪಿಸಿಕೊಂಡಿದ್ದ ಕಿಡಿಗೇಡಿಯನ್ನು ಚಂದ್ರಾಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗೊಂಡನಹಳ್ಳಿಯ ಸಲ್ಮಾನ್‌ ಖಾನ್‌ ಬಂಧಿತನಾಗಿದ್ದು, ಐಟಿಐ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳ್ಳತನಕ್ಕೆ ವಿರೋಧಿಸಿದ ಕಾರಣಕ್ಕೆ ಕಾರ್ಮಿಕ ತಾಯಪ್ಪ ಅವರಿಗೆ ಆರೋಪಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿ ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನ್ನ ತಾಯಿ ಜತೆ ಊದುಬತ್ತಿ ತಯಾರಿಕೆ ಕೆಲಸ ಮಾಡುತ್ತಿದ್ದ ಸಲ್ಮಾನ್‌, ಸುಲಭವಾಗಿ ಹಣ ಸಂಪಾದನೆಗೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಬ್ಬಿಣ ಕಳ್ಳತನಕ್ಕಿಳಿದಿದ್ದ. ಅಂತೆಯೇ ಎರಡು ದಿನಗಳ ಹಿಂದೆ ಐಟಿಐ ಲೇಔಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಆತ ಕಳ್ಳತನಕ್ಕೆ ತೆರಳಿದ್ದಾಗ ಕೊಲೆ ಯತ್ನ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
 

click me!