
ಬೆಂಗಳೂರು (ಅ.09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿವಿಧ ರಾಜ್ಯ ಹಾಗೂ ದೇಶಗಳಿಂದ ಜನರು ಬಂದು ವಾಸವಾಗಿದ್ದಾರೆ. ಈತ ಕೇರಳದ ಬಿಲಾಲ್, ಆಕೆ ಛತ್ತೀಸ್‌ಘಡದ ಹಿಂದೂ ಯುವತಿ. ನಾನು ನೇವಿಯಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿಕೊಂಡು, ಮದುವೆಯಾಗುವುದಾ ಹುಡುಗಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದಾಗಲೇ ಯುವತಿಗೆ 2 ಬಾರಿ ಅಬಾಷನ್ ಮಾಡಿಸಿದ್ದು, ಇದೀಗ ತುಂಬು ಗರ್ಭಿಣಿ ಆಗಿದ್ದಾಳೆ. ಆದರೆ, ಈಗಲಾದರೂ ಮದುವೆ ಮಾಡಿಕೊ ಎಂದರೆ ನೀನು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗು ಎಂದು ಹೇಳುತ್ತಿದ್ದಾನೆ ಎಂಬುದಾಗಿ ಸಂತ್ರಸ್ತ ಯುವತಿ ದೂರ ನೀಡಿದ್ದಾಳೆ.
ಹೌದು, ಪ್ರೀತಿ ಹೆಸರಲ್ಲಿ ಯುವತಿಗೆ ವಂಚಿಸಿ ಮತಾಂತರಕ್ಕೆ ಯತ್ನ (ಲವ್ ಜಿಹಾದ್) ಮಾಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಗೋವಿಂದಪುರ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಸಂಬಂಧ ವಿಚಾರಣೆ ಮಾಡುತ್ತಿದ್ದಾರೆ. ಬಂಧಿತ ವ್ಯಕ್ತಿ ಬಿಲಾಲ್ ರಫೀಕ್ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. 2021ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಛತ್ತೀಸ್‌ಘಡದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ: ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ: ಸಂತ್ರಸ್ತೆ ಹೇಳಿಕೆ!
ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ತಿರುಗಲು ಬಹಳ ದಿನವೇನೂ ಹಿಡಿದಿಲ್ಲ. ಇದಾದ ನಂತರ ಇಬ್ಬರೂ ಎಲ್ಲಾದರೂ ಒಂದೆಡೆ ಸೇರೋಣ ಎಂಬ ಬಯಕೆಯಿಂದ ಕೇರಳದ ಬಿಲಾಲ್ ಸೂಚನೆಯಂತೆ ಛತ್ತೀಸ್‌ಘಡದ ಯುವತಿ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2022ರಿಂದ ಕೆಲಸವನ್ನು ಆರಂಭಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಇನ್ನರೂ ಮೊದಲೇ ಯೋಜಿಸಿದಂತೆ ಆಗಾಗ ಭೇಟಿ ಮಾಡಿದ್ದಾರೆ. ಬಿಲಾಲ್ ತನ್ನ ನೇವಿ ಕೆಲಸದ ನಡುವೆ ಆಗಾಗ ಯುವತಿಯನ್ನು ಭೇಟಿ ಮ ಆಡಲು ಬಂದು, ಆಕೆಯನ್ನು ಲೈಂಗಿಕ ಸಂಪರ್ಕಕ್ಕೆ ಬಳಕೆ ಮಾಡಿಕೊಂಡಿದ್ದಾನೆ. ಈ ವೇಳೆ ಯುವತಿ ಗರ್ಭಿಣಿ ಆಗಿದ್ದು, ಆಕೆಯ ಮನವೊಲಿಸಿ ಮದುವೆ ಮಾಡಿಕೊಳ್ಳುವವರೆಗೂ ಮಕ್ಕಳು ಬೇಡವೆಂದು ಅಬಾರ್ಷನ್ ಮಾಡಿಸಿದ್ದಾನೆ.
ಇಷ್ಟಾದರೂ ಮದುವೆ ಮಾಡಿಕೊಳ್ಳುವವರೆಗೂ ಲೈಂಗಿಕ ಸಂಪರ್ಕ ಬೆಡವೆಂದು ಯುವತಿ ತಿಳಿಸಿದರೂ, ಆಕೆಯನ್ನು ಪುಸಲಾಯಿಸಿ ಮತ್ತೆ ಲೈಂಗಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿದ್ದಾನೆ. ಇದೀಗ ಯುವತಿ 3ನೇ ಬಾರಿ ಗರ್ಭಿಣಿ ಆಗಿದ್ದು, ಅಬಾರ್ಷನ್ ಮಾಡಿಸಲು ಒಪ್ಪಿಗೆ ಸೂಚಿಸದೇ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾಳೆ. ಆಗ ಬಿಲಾಲ್ ಮದುವೆ ಮಾಡಿಕೊಳ್ಳುವುದಕ್ಕೆ ಒಂದಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಯುವತಿ ಕುಟುಂಬದವರಿಂದ 1 ಲಕ್ಷ ರೂ. ನಗದು ಹಾಗೂ ಒಂದು ದುಬಾರಿ ಬೆಲೆಯ ಮೊಬೈಲ್ ಫೋನ್ ಪಡೆದಿದ್ದಾರೆ.
ಇದನ್ನೂ ಓದಿ: ನಿಜವಾಯ್ತು ಕೊರಗಜ್ಜನ ಮಾತು, ಶಾಸಕ ವಿನಯ್ ಕುಲಕರ್ಣಿ ಮೇಲೆ ಬಿತ್ತು ಎಫ್‌ಐಆರ್
ಈಗಲಾದರೂ ಮದುವೆ ಮಾಡಿಕೊ ಎಂದರೆ ನೀನು, ಮುಸ್ಲಿಂ ಧರ್ಮಕ್ಕೆ ಮತಾಂತರ ಆದರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಆದರೆ, ಸಂತ್ರಸ್ತೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವ ಇಷ್ಟವಿಲ್ಲ. ನಾವಿಬ್ಬರೂ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿ ಮದುವೆಗೆ ಸಂತ್ರಸ್ತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ, ಬಿಲಾಲ್ ಮುಸ್ಲೀಂ ಧರ್ಮಕ್ಕೆ ಮತಾಂತರ ಆಗಲಿಲ್ಲವೆಂದರೆ ನಿನ್ನನ್ನು ಮದುವೆಯಾಗಲ್ಲ ಎಂದಿದ್ದಕ್ಕೆ ಇದೀಗ ಯುವತಿ ಬೆಂಗಳೂರಿನ ಗೋವಿಂದಪುರ ಠಾಣೆಗೆ ದೂರು ನೀಡಿದ್ದಾಳೆ. ಸಂತ್ರಸ್ತೆ ದೂರಿನನ್ವಯ FIR ದಾಖಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ