ರೇಣುಕಾಸ್ವಾಮಿ ಹತ್ಯೆ ಅರೇಬಿಯನ್ ನೈಟ್ಸ್‌ ಕಥೆಯಲ್ಲೂ ಈ ರೀತಿ ಹಿಂಸೆ ಕೊಟ್ಟಿಲ್ಲ!

By Kannadaprabha News  |  First Published Oct 9, 2024, 9:10 AM IST

ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ. ತನಿಖಾಧಿಕಾರಿಗಳ ತನಿಖೆಯು ಅರೇಬಿಯನ್ ನೈಟ್ಸ್ ಕಥೆಯಂತಿದೆ ಎಂದು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್ ದೋಷಾರೋಪ ಪಟ್ಟಿಯ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಯನ್ನು ಓದಿ ಪ್ರತ್ಯುತ್ತರ ನೀಡಿದರು. ದರ್ಶನ್, ಗ್ಯಾಂಗ್ ಕ್ರೌರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ನ್ಯಾಯಾಲಯ ದರ್ಶನ್ ಅರ್ಜಿ ವಿಚಾರಣೆಯನ್ನು ಮುಂದೂಡಿತು. 


ಬೆಂಗಳೂರು(ಅ.09):  'ಪಟ್ಟಣಗೆರೆ ಶೆಡ್‌ಗೆ ಬರುತ್ತಿದ್ದಂತೆ ದರ್ಶನ್, ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ. ಆತನ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗ ತುಳಿದಿದ್ದಾರೆ. ಪರಿಣಾಮ ಎದೆ ಭಾಗದ 17 ಮೂಳೆಗಳು ಮುರಿದಿವೆ, ಶ್ವಾಸಕೋಶ ಹಾನಿಯಾಗಿದೆ. ದೇಹದಲ್ಲಿ 39 ಗಾಯಗಳಾಗಿವೆ. ಯಾವ ಅರೇಬಿಯನ್ ನೈಟ್ಸ್‌ ಕಥೆಯಲ್ಲೂ ಈ ರೀತಿ ಹಿಂಸೆ ಇಲ್ಲ. ಇದೊಂದು ರಕ್ತ ಚರಿತ್ರೆ.  ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಮಂಡಿಸಿದ ಪ್ರತಿವಾದವಿದು! 

ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ. ತನಿಖಾಧಿಕಾರಿಗಳ ತನಿಖೆಯು ಅರೇಬಿಯನ್ ನೈಟ್ಸ್ ಕಥೆಯಂತಿದೆ ಎಂದು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್ ದೋಷಾರೋಪ ಪಟ್ಟಿಯ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಯನ್ನು ಓದಿ ಪ್ರತ್ಯುತ್ತರ ನೀಡಿದರು. ದರ್ಶನ್, ಗ್ಯಾಂಗ್ ಕ್ರೌರ್ಯದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ನ್ಯಾಯಾಲಯ ದರ್ಶನ್ ಅರ್ಜಿ ವಿಚಾರಣೆಯನ್ನು ಮುಂದೂಡಿತು. 

Tap to resize

Latest Videos

ರೇಣುಕಾಸ್ವಾಮಿ ಅಶ್ಲೀಲ ಫೋಟೋ ಕಳಿಸಿದ್ರೆ 'ಸೂಪರ್‌' ಅಂತಾ ರಿಪ್ಲೈ ಮಾಡ್ತಿದ್ದ ಪವಿತ್ರಾ ಗೌಡ!

ಎಳೆ ಎಳೆಯಾಗಿ ಹತ್ಯೆ ವಿವರಣೆ: 

ರಾಘವೇಂದ್ರ, ಪವನ್ ಮತ್ತಿತರರು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹ ರಿಸಿ ಪಟ್ಟಣಗೆರೆ ಶೆಡ್‌ನಲ್ಲಿ ಇರಿಸಿದ ಕುರಿತು ದರ್ಶನ್‌ಗೆ ಮಾಹಿತಿ ನೀಡಿದರು. ಪವಿತ್ರಾ ಗೌಡ ಜೊತೆಗೆ ಬಂದ ದರ್ಶನ್, ಕಾರಿನಿಂದ ಇಳಿಯುತ್ತಿದ್ದಂತೆಯೇ ನೇರವಾಗಿ ಬಂದು ರೇಣುಕಾಸ್ವಾಮಿಗೆ ಎದೆಗೆ ಒದ್ದರು. ರೇಣುಕಾಸ್ವಾಮಿ ಕೆಳಗೆ ಬಿದ್ದಾಗ, ಎದ್ದೇಳೋ.. ನೋಡು ಇವಳೇ ನನ್ನ ಹೆಂಡತಿ. ಗೋವಾದಲ್ಲಿ ರೂಂ ಮಾಡ್ತೀನಿ ಅಂತ ಹೇಳುತ್ತೀಯಾ? ಎಂದು ಹೇಳಿ ನೈಲಾನ್ ಹಗ್ಗದಿಂದ ಹಲ್ಲೆ ಮಾಡಿದರು ಎಂದು ಪ್ರತ್ಯಕ್ಷ ದರ್ಶಿ ಸಾಕ್ಷ್ಯ ನುಡಿದಿದ್ದಾರೆ ಎಂದು ಪ್ರಸನ್ನ ಕುಮಾರ್ ವಾದಿಸಿದರು. 

ಜಾಮೀನು ಬುಧವಾರಕ್ಕೆ ರೇಣುಕಾಸ್ವಾಮಿ ಪೋನ್ ತಗೊಂಡು ಯಾರಿಗೆ ಮೆಸೇಜ್ ಮಾಡಿದ್ದಾರೆ ನೋಡು ಎಂದು ಬೆಂಬಲಿಗರಿಗೆ ಹೇಳಿದರು. ಆಗ ದರ್ಶನ್, ರೇಣುಕಾಸ್ವಾಮಿ ಎದೆಯನ್ನು ತುಳಿ ಯುತ್ತಿದ್ದರು. ಬೆಂಬಲಿಗರಿಂದ ರೇಣುಕಾ ಸ್ವಾಮಿಯ ಪ್ಯಾಂಟು ಬಿಚ್ಚಿಸಿದ ದರ್ಶನ್, ಪವನ್ ಮೆಸೇಜ್ ಓದುತ್ತಿದ್ದಾಗ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದರು.ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದರು. ಮರ್ಮಾಂಗಕ್ಕೆ ದರ್ಶನ್ ಒದ್ದ ಜಾಗದಲ್ಲಿ ರಕ್ತ ಸುರಿಯುತ್ತಿತ್ತು. ನಂತರ ಸ್ಥಳದಿಂದ ಹೊರಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ದರ್ಶನ್ ಒದ್ದಿರು ವುದರಿಂದ ಆತನ ಶೂ ಮೇಲೆ ರಕ್ತದ ಕಲೆಗಳ ನ್ನು ತನಿಖೆ ವೇಳೆ ದೊರೆತಿವೆ ಎಂದರು. 

ದೇಹದ ಮೇಲೆ 39 ಗಾಯ: 

ರೇಣುಕಾಸ್ವಾಮಿ ಯ ದೇಹದಲ್ಲಿ 2.5 ಸೆಂ.ಮೀನಷ್ಟು ಒಂದೇ ಗಾಯವಿದೆ ಎಂದು ಆರೋಪಿಗಳ ಪರ ವಕೀ ಲರು ಹೇಳುತ್ತಾರೆ. ದರ್ಶನ್ ಮತ್ತು ಗ್ಯಾಂ ಗ್ ನಡೆಸಿರುವ ಹಲ್ಲೆಯಿಂದ ರೇಣುಕಾಸ್ವಾಮಿ 17 ಮೂಳೆಗಳು ಮುರಿದಿವೆ. ದೇಹದ ಮೇಲೆ 39 ಗಾಯವಾಗಿವೆ. ರಕ್ತ ಸುರಿದಿದೆ. ಎಲ್ಲವೂ ಸಾವಿನ ಮುಂಚೆ ಆಗಿವೆ. ಇದು ಶವ ಪರೀಕ್ಷೆ ನಡೆಸಿದ ವೈದ್ಯರ ವರದಿಯಿಂದ ತಿಳಿಯುತ್ತಿದೆ. ದೇಹದ ಯಕೃತ್‌ನ್ನು ಡಿಎನ್ಎ ಟೆಸ್ಟ್‌ಗೆ ಕಾಯ್ದಿರಿಸಲಾಗಿದೆ ಎಂದರು. 

ಬಳ್ಳಾರಿ ಜೈಲಿನಲ್ಲಿ ಡೆವಿಲ್ ದರ್ಶನ್‌ಗೆ ಕಾಡ್ತಿದ್ಯಾ ರೇಣುಕಾಸ್ವಾಮಿ ಆತ್ಮ? ಅಸಲಿ ಸತ್ಯ ಇಲ್ಲಿದೆ

ಹಲ್ಲೆ ಬಳಿಕ ಊಟ: 

ಆರೋಪಿಗಳು ರೇಣುಕಾ ಸ್ವಾಮಿಗೆ ಊಟ ಮಾಡಿಸಿದ್ದಾರೆ. ಊಟ ಮಾಡಿದ 2 ಗಂಟೆಯ ನಂತರ ಮೃತಪಟ್ಟಿದ್ದಾನೆ. ಹೊಟ್ಟೆಯಲ್ಲಿ ಸಿಕ್ಕ 60 ಎಂ.ಎಲ್. ಹಸಿರು ದ್ರವದ ಪ್ರಕಾರ ಆಹಾರ ಜೀರ್ಣಕ್ಕೂ ಮುಂಚೆಸಾವು ಸಂಭವಿಸಿದೆ. ಯಾವ ಸಮಯ ದಲ್ಲಿ ಸಾವು ಸಂಭವಿಸಿದೆ ಎಂಬುದನ್ನು ವೈದ್ಯ ರು ಖಚಿತಪಡಿಸಿದ್ದಾರೆ.ಕೊಲೆಗೆ ತಾಂತ್ರಿಕ, ಪ್ರತ್ಯಕ್ಷದರ್ಶಿಗಳ ಸಾಕ್ಷ್ಯವಿದೆ ಎಂದರು. 

ಇದಕ್ಕೂ ಮುನ್ನ ಆರೋಪಿಗಳಾದ ನಾಗರಾಜ್‌ (ಎ-11), ಲಕ್ಷ್ಮಣ್‌ (ಎ-18) ವಕೀಲ ಸಂದೇಶ್ ಚೌಟ ವಾದ ಮಂಡಿಸಿ, ಅವರ ವಿರುದ್ಧ ಕೊಲೆ, ಒಳಸಂಚು ಮತ್ತು ಸಾಮಾನ್ಯ ಉದ್ದೇಶ ಹೊಂದಿದ್ದ, ಸಾಕ್ಷಿ ನಾಶ, ಹಲ್ಲೆ ಆರೋಪವಿದೆ. ಕಳೆದ 4 ತಿಂಗಳಿನಿಂದ ಕಸ್ಟಡಿಯಲ್ಲಿ ಆರೋಪಿಗಳಿದ್ದಾರೆ. ಅವರಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ. ಪ್ರಕರಣದ ತನಿಖೆ ಮುಗಿದಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆ ಯಾಗಿರುವ ಕಾರಣ ಆರೋಪಿಗಳು ಜಾಮೀ ನು ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ, ಜಾಮೀನು ನೀಡುವಂತೆ ಕೋರಿದರು.

click me!