ಹೆಂಡತಿ ಮೇಲೆ 3ನೇ ಅಕ್ರಮ ಸಂಬಂಧದ ಶಂಕೆ, ಮಗಳೆದುರೇ 11 ಬಾರಿ ಚಾಕು ಇರಿದು ಕೊಂದ 2ನೇ ಗಂಡ!

Published : Sep 22, 2025, 04:45 PM IST
Bengaluru Murder

ಸಾರಾಂಶ

Husband Kills Wife in Front of Daughter ಬೆಂಗಳೂರಿನ ಸುಂಕದಕಟ್ಟೆಯಲ್ಲಿ, ಪತ್ನಿಯ ಮೂರನೇ ಅಕ್ರಮ ಸಂಬಂಧದ ಮೇಲೆ ಶಂಕೆಗೊಂಡ ಎರಡನೇ ಪತಿ, ಆಕೆಯ ಮಗಳ ಮುಂದೆಯೇ 11 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ. 

ಬೆಂಗಳೂರು (ಸೆ.22): ರಾಜಧಾನಿ ಬೆಂಗಳೂರಿನಲ್ಲಿ ಭೀಕರ ಘಟನೆ ನಡೆದಿದ್ದು, ಹೆಂಡತಿ ಮೇಲೆ 3ನೇ ಅಕ್ರಮ ಸಂಬಂಧಧ ಶಂಕೆ ವ್ಯಕ್ತಪಡಿಸಿದ ಆಕೆಯ 2ನೇ ಗಂಡ ಯುವತಿಯ ಮಗಳ ಎದುರಲ್ಲೇ 11 ಬಾರಿ ಚಾಕು ಇರಿದು ಕೊಂದಿರುವ ಘಟನೆ ನಡೆದಿದೆ. ಬೆಂಗಳೂರಿನ ಸಂಕದಕಟ್ಟೆ ಬಳಿ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ 11.35ರ ಸುಮಾರಿಗೆ ಘಟನೆ ನಡೆದಿದೆ. ಸಾವು ಕಂಡಿರುವ ಮಹಿಳೆಯನ್ನು ರೇಖಾ ಎದುರು ಗುರುತಿಸಲಾಗಿದ್ದು, ಲೋಕೇಶ್‌ ಅಲಿಯಾಸ್‌ ಲೋಹಿತಾಶ್ವ ಎನ್ನುವ ವ್ಯಕ್ತಿ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಸುಂಕದಕಟ್ಟೆ ಬಸ್‌ ಸ್ಟ್ಯಾಂಡ್‌ನಲ್ಲಿ ಘಟನೆ ನಡೆದಿದ್ದು, ಘಟನೆ ತಾರಕಕ್ಕೇರಿ ಲೋಕೇಶ್‌ ಚಾಕು ಇರಿದಿದ್ದಾನೆ. ಘಟನೆ ಬಳಿಕ ರೇಖಾಳನ್ನು ಪೊಲೀಸರು ಹಾಗೂ ಸ್ಥಳೀಯರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಚಾಕು ಇರಿದ ನಂತರ ಲೊಕೇಶ್‌ ಪರಾರಿಯಾಗಿದ್ದು, ಸ್ಥಳಕ್ಕೆ ಕಾಮಾಕ್ಷಿ ಪಾಳ್ಯ ಪೊಲೀಸರು ಬೇಟೆ ನೀಡಿ ಪರಿಶೀಲನೆ ಮಾಡಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೇ ರೇಖಾ ಸಾವು

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ರೇಖಾ ಕೆಲವೇ ಹೊತ್ತಿನಲ್ಲಿ ಸಾವು ಕಂಡಿದ್ದಾರೆ. ದೇಹದಲ್ಲಿ ತೀವ್ರ ರಕ್ತ ಸ್ರಾವ ಹಿನ್ನೆಲೆ, ಚಿಕಿತ್ಸೆ ಫಲಿಸದೆ ಸಾವು ಕಂಡಿದ್ದಾರೆ. ಒಟ್ಟು ಹನ್ನೊಂದು ಬಾರಿ ಆರೋಪಿ ಇರಿದಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಸುಂಕದಕಟ್ಟೆಯ ಲಕ್ಷ್ಮೀ ಆಸ್ಪತ್ರೆಯಲ್ಲಿ ರೇಖಾ ಸಾವು ಕಂಡಿದ್ದಾರೆ.

ಶಿರಾ ಮೂಲದ ಮಹಿಳೆ

ರೇಖಾ ತುಮಕೂರಿನ ಶಿರಾ ಮೂಲದ ಮಹಿಳೆ. ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಸುಂಕದ ಕಟ್ಟೆಯಲ್ಲಿ ವಾಸಕ್ಕೆ ಬಂದಿದ್ದರು. ಲೋಕೇಶ್ ಅಲಿಯಾಸ್ ಲೋಹಿತಾಶ್ವನ ಜೊತೆಗೆ ಪರಿಚಯ ಸ್ನೇಹ ಇತ್ತು. ಹೀಗಾಗಿ ರೇಖಾ ಆತನಿಗೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಡ್ರೈವರ್ ಕೆಲಸ ಕೊಡಿಸಿದ್ದಳು. ಆದ್ರೆ ರೇಖಾ ಮೇಲೆ ಲೋಕೇಶ್‌ ಮೂರನೇ ಸಂಬಂಧದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ. ಇಂದು ಬೆಳಗ್ಗೆ ಬಸ್ ಸ್ಟಾಂಡ್ ಬಳಿ ಬಂದಾಗ ಈ ಬಗ್ಗೆ ಗಲಾಟೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲೇ ಎರಡು ಬಾರಿ ಚಾಕು ಇರಿದಿದ್ದ. ನಂತ್ರ ಅಲ್ಲಿಂದ ಮೂವತ್ತು ಮೀಟರ್ ದೂರದಲ್ಲಿ ಕೆಳಗೆ ಬೀಳಿಸಿ ಚಾಕು ಇರಿದಿದ್ದಾರೆ. ರೇಖಾಗೆ ಒಟ್ಟು ಹನ್ನೊಂದು ಬಾರಿ ಚಾಕು ಇರಿದಿದ್ದಾನೆ. ತಲೆಮರಿಸಿಕೊಂಡ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ಮದುವೆಯಾಗಿದ್ದ ರೇಖಾ-ಲೋಕೇಶ್‌

ಪೊಲೀಸ್‌ ವಿಚಾರಣೆಯ ವೇಳೆ ರೇಖಾ ಹಾಗೂ ಲೋಕೇಶ್‌ ಬಗ್ಗೆ ಇನ್ನಷ್ಟು ಮಾಹಿತಿ ಗೊತ್ತಾಗಿದೆ. ರೇಖಾ ಹಾಗೂ ಲೋಹಿತಾಶ್ವ ಇಬ್ಬರೇ ಗುಟ್ಟಾಗಿ ಮದುವೆಯಾಗಿದ್ದರು. ರೇಖಾಗೆ ಈಗಾಗಲೇ ಮೊದಲ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. 12 ವರ್ಷದ ಮಗಳು ದೊಡ್ಡವಳು. ಮೊದಲ ಪತಿಯಿಂದ ಡಿವೋರ್ಸ್ ಪಡೆದು ಲೋಹಿತಾಶ್ವ ಜೊತೆ ಎರಡನೇ ಮದುವೆ ಆಗಿದ್ದರು. ಲೋಹಿತಾಶ್ವ ಕೂಡ ಮೊದಲ ಹೆಂಡತಿಯನ್ನ ಬಿಟ್ಟಿದ್ದ. ಆದರೆ, ಲೋಹಿತಾಶ್ವನನ್ನು ಬಿಟ್ಟು ಮತ್ತೊಬ್ಬನ ಜೊತೆ ರೇಖಾ ಸಹವಾಸ ಬೆಳೆಸಿದ್ದಳು. ಇದರಿಂದಾಗಿ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ರೇಖಾಗೆ ಮದುವೆಯಾಗಿ ಎರಡು ಮಕ್ಕಳಿದ್ದರು. ಮೊದಲ ಪತಿಯಿಂದ ರೇಖಾ ಈಗಾಗಲೇ ಬೇರೆಯಾಗಿದ್ದರು. ಇನ್ನು ಲೋಹಿತಾಶ್ವ ಕೂಡ ಮದುವೆಯಾಗಿ ವಿಚ್ಛೇದನ ಪಡೆದಿದ್ದ.ಕೆಲ ವರ್ಷಗಳಿಂದ ಇಬ್ಬರು ಸಂಪರ್ಕದಲ್ಲಿ ಇದ್ದರು. ಕೆಲ ತಿಂಗಳ ಹಿಂದೆ ಇಬ್ಬರೂ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಅದರ ನಂತರವೇ ಶಿರಾದಿಂದ ರೇಖಾ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ರೇಖಾ ಕೆಲಸ ಮಾಡುತ್ತಿದ್ದರೆ, ಅದೇ ಕಂಪನಿಯಲ್ಲಿ ಲೋಹಿತಾಶ್ವನಿಗೆ ಡ್ರೈವರ್‌ ಕೆಲಸ ಕೊಡಿಸಿದ್ದರು. ಆದರೆ, ಲೋಹಿತಾಶ್ವನಿಗೆ ರೇಖಾ ಮತ್ತೊಂದು ಸಂಬಂಧ ಹೊಂದಿದ್ದಾಳೆ ಅನ್ನೋ ಅನುಮಾನ ಮಾಡುತ್ತಿತ್ತು. ಇದೇ ಅನುಮಾನಕ್ಕೆ ಸೋಮವಾರ ಬೆಳಗ್ಗೆ ಬಂದು ಅಟ್ಯಾಕ್ ಮಾಡಿದ್ದ. ರೇಖಾ ತನ್ನ ಹನ್ನೆರಡು ವರ್ಷದ ಮಗಳ ಜೊತೆಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆಯೇ ದಾಳಿಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ