ಲವ್ ಜಿಹಾದ್: Youtuber ಮುಕಳೆಪ್ಪ ವಿರುದ್ಧ ಯುವತಿ ಪೋಷಕರಿಂದ FIR

Published : Sep 20, 2025, 09:46 PM IST
Mukaleppa alias Kwaja Shirahatti love jihad case,

ಸಾರಾಂಶ

Kannada Youtuber Mukaleppa alias Kwaja Shirahatti love jihad case ಜನಪ್ರಿಯ ಕನ್ನಡ ಯೂಟ್ಯೂಬರ್ ಮುಕಳೆಪ್ಪಾ ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ಆರೋಪ.. ಹಿಂದೂ ಯುವತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಮೋಸದಿಂದ ಮದುವೆಯಾಗಿದ್ದಾನೆ ಎಂದು ಬಜರಂಗದಳ, ಧಾರವಾಡದಲ್ಲಿ ಎಫ್‌ಐಆರ್

ಧಾರವಾಡ (ಸೆ.20): ಉತ್ತರ ಕರ್ನಾಟಕದ ಜನಪ್ರಿಯ ಕನ್ನಡ ಯುಟ್ಯೂಬರ್ ಮುಕಳೆಪ್ಪಾ ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ನಡೆಸಿದ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಇಂದು ಎಫ್‌ಐಆರ್ (FIR) ದಾಖಲಾಗಿದ್ದು ಪೊಲೀಸ್ ತನಿಖೆ ಆರಂಭಿಸಿದೆ.

ಮುಕಳಪೆಪ್ಪ ನಕಲಿ ದಾಖಲೆ ಸೃಷ್ಟಿಸಿ ಮೋಸ:

ಮುಕಳೆಪ್ಪಾ ನಕಲಿ ದಾಖಲೆಗಳನ್ನು ತಯಾರಿಸಿ ಹಿಂದೂ ಯುವತಿ ಗಾಯತ್ರಿ ಜಾಲಿಹಾಳ ಅವರನ್ನು ಮೋಸದಿಂದ ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಜರಂಗದಳದ ಧಾರವಾಡ ಜಿಲ್ಲಾ ಸಂಚಾಲಕ ರಾಜೇಶ್ ಪಾಟೀಲ ಮಾತನಾಡಿ, 'ಮುಕಳೆಪ್ಪಾ ಮೂಲತಃ ಮುಸ್ಲಿಮ್ ಧರ್ಮಕ್ಕೆ ಸೇರಿದ ಕ್ವಾಜಾ ಮಹಮದ್ ಹನೀಫ್ ಶಿರಹಟ್ಟಿ. ತನ್ನ ಗುರುತನ್ನು ಮರೆಮಾಚಿ ಹಿಂದೂ ಯುವತಿಯನ್ನು ಧಮ್ಕಿ ಹಾಕಿ ಮದುವೆಯಾಗಿದ್ದಾನೆ. ಉತ್ತರ ಕನ್ನಡದ ಮುಂಡಗೋಡ್ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಸುಳ್ಳು ದಾಖಲೆಗಳೊಂದಿಗೆ ವಿವಾಹ ನೋಂದಣಿ ಮಾಡಿಕೊಂಡಿದ್ದಾನೆ. ಇದು ಸ್ಪಷ್ಟ ಲವ್ ಜಿಹಾದ್ ಯೋಜನೆಯ ಭಾಗವಾಗಿದೆ ಎಂದು ಆರೋಪಿಸಿದ್ದಾರೆ. ಇದಲ್ಲದೆ, ಮುಕಳೆಪ್ಪಾಳ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ ಎಂದು ಧರ್ಮನಿಂದನೆ ಆರೋಪವೂ ಮಾಡಲಾಗಿದೆ.

ಗಾಯತ್ರಿ ಪೋಷಕರು ಕಣ್ಣೀರು:

ತಮ್ಮ ಮಗಳನ್ನು ಪುಸಲಾಯಿಸಿ ಮುಕುಳೆಪ್ಪ ಮದುವೆ ಆಗಿದ್ದಾನೆ. ನಮ್ಮ ಮಗಳು ದೊಡ್ಡ ಮಟ್ಟದಲ್ಲಿ ಬೆಳಿತಾಳೆ ಅಂತ ನಾವು ಮುಕುಳೆಪ್ಪ ಜೊತೆಗೆ ವಿಡಿಯೋ ಮಾಡಲು ಅನುಮತಿ ನೀಡಿದ್ದೆವು. ಅದೇ ನಾವು ಮಾಡಿದ ದೊಡ್ಡ ತಪ್ಪು, ಹಿಂದೂ ಸಮಾಜ ನಮ್ಮ ಬೇಕಾದ್ದು ಶಿಕ್ಷೆ ನೀಡಲಿ. ಚಿತ್ರೀಕರಣ ಇದೆ ಅಂದಿದ್ದಕ್ಕೆ ಮೂರ್ನಾಲ್ಕು ದಿನ ಟೂರ್ ಗೆ ಕರೆದುಕೊಂಡು ಹೋಗುತ್ತಿದ್ದ. ಆದರೆ ಮುಕುಳೆಪ್ಪ ನಮ್ಮ ಮಗಳ ತಲೆ ಕೆಡಿಸುತ್ತಿದ್ದಾನೆ ಅಂತ ಗೊತ್ತಾಗಲಿಲ್ಲ. ನಮ್ಮಿಂದ ತಪ್ಪಾಯಿತು ಅಂತ ವಿಡಿಯೋದಲ್ಲಿ ಗಾಯತ್ರಿ ಅವರ ತಂದೆ ತಾಯಿ ಅಳಲು ತೋಡಿಕೊಂಡಿದ್ದಾರೆ.'

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ