ಬೆಂಗಳೂರು ಮನೆಯಲ್ಲಿ ಹೆಂಡ್ತಿ ಗಲಾಟೆ ಮಾಡ್ತಾಳೆ ಅಂತಾ, ಮುಖಕ್ಕೆ ಆಸಿಡ್ ಎರಚಿದ ಗಂಡ!

By Sathish Kumar KHFirst Published Mar 19, 2024, 8:42 PM IST
Highlights

ಮನೆಯಲ್ಲಿ ಹೆಂಡತಿ ಯಾವಾಗಲೂ ಜಗಳ ಮಾಡುತ್ತಾಳೆ ಎಂದು ಮನನೊಂದು ಪತ್ನಿಯ ಮುಖಕ್ಕೆ ಗಂಡನೇ ಆಸಿಡ್ ಎರಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು/ಆನೇಕಲ್ (ಮಾ.19): ಮನೆಯಲ್ಲಿ ಪ್ರತಿನಿತ್ಯ ಹೆಂಡತಿ ತನಗೆ ಒಂದಲ್ಲಾ ಒಂದು ಕಿರುಕುಳ ಕೊಡುತ್ತಾಳೆ. ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಾಳೆ ಎಂದು ತೀವ್ರ ಹತಾಶೆಗೊಂಡಿದ್ದ ಪತಿರಾಯ ತನ್ನ ಹೆಂಡತಿ ಮಲಗಿರುವಾಗ ಮುಖಕ್ಕೆ ಆಸಿಡ್ ಎರಚಿ ಪರಾರಿ ಆಗಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡದದಿದೆ.

ಈ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌರೇನಹಳ್ಳಿ  ಗ್ರಾಮದಲ್ಲಿ ನಡೆದಿದೆ. ಪತಿಯಿಂದಲೇ ಪತ್ನಿಯ ಮೇಲೆ ಆಸಿಡ್ ದಾಳಿ ಮಾಡಲಾಗಿದೆ. ಗಂಡ ಚಾಂದ್ ಪಾಷಾ ಎಂಬಾತನಿಂದ ಕೃತ್ಯ ನಡೆದಿದೆ. ಹೆಂಡತಿ ನಾಜಿಯಾ ಬೇಗಂ ಸಂತ್ರಸ್ತೆ ಮಹಿಳೆಯಾಗಿದ್ದಾಳೆ. ಆಸಿಡ್ ದಾಳಿಯಿಂದ 40 ವರ್ಷದ ನಾಜಿಯಾ ಬೇಗಂ ಮುಖ ಸುಟ್ಟಂತಾಗಿದೆ. ಇನ್ನು ಪತ್ನಿ‌ಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ಚಾಂದ್ ಪಾಷಾ ನಿನ್ನೆ ಮಧ್ಯರಾತ್ರಿ ಗಾಜಿನ ಬಾಟಲಿಯಲ್ಲಿ ಆಸಿಡ್ ತಂದು  ಮುಖಕ್ಕೆ ಎರಚಿ ಪರಾರಿ ಆಗಿದ್ದಾನೆ.

Bengaluru: ಕಾರಿನ ಮೇಲೆ ಉಗುಳಬೇಡಿ ಎಂದಿದ್ದಕ್ಕೆ ಟೆಕ್ಕಿ ದಂಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಅನಂತಮೂರ್ತಿ ಫ್ಯಾಮಿಲಿ!

ಚಾಂದ್ ಪಾಷಾ ವೃತ್ತಿಯಲ್ಲಿ ಮೋಟರ್ ಸೈಕಲ್ ಮೆಕಾನಿಕ್ ಆಗಿದ್ದಾನೆ. ಸದಾ ಕುಡಿದು ಮನೆಯಲ್ಲಿ ಜಗಳ ತೆಗೆದು ಗಲಾಟೆ ಮಾಡುತ್ತಿದ್ದನು. ಗಂಡ ಕುಡಿದು ಬಂದಾಗ ಹೆಂಡತಿ ಕೂಡ ಆತನನ್ನು ಬೈಯುತ್ತಿದ್ದಳು. ಜೊತೆಗೆ, ದುಡಿದ ಹಣವನ್ನೆಲ್ಲ ಕುಡಿದುಕೊಮಡು ಬರುತ್ತೀಯಾ? ಮನೆಗೆ ಅಡಿಗೆ ಮಾಡಲು ವಸ್ತುಗಳನ್ನು ತರುವುದಿಲ್ಲ ಎಂದು ಜಗಳ ಮಾಡಿದ್ದಾಳೆ. ಇದರಿಂದ ಮನೆಯಲ್ಲಿ ಹೆಂಡತಿ ಕಿರುಕುಳ ನೀಡುತ್ತಾಳೆ. ಆಕೆಗೆ ಸರೊಯಾಗಿ ಬುದ್ಧಿ ಕಲಿಸಬೇಕು ಎಂದು ಗಾಜಿನ ಬಾಟಲಿಯಲ್ಲಿ ಆಸಿಡ್ ತಂದು ಎರಚಿದ್ದಾನೆ.

ಇನ್ನು ಆರೋಪಿ ಚಾಂದ್‌ಪಾಷಾ ಎರಚಿದ ಆಸಿಡ್‌ ಶೌಚಾಲಯ ಸ್ವಚ್ಛಗೊಳಿಸುವ ಕಡಿಮೆ ಪವರ್ ಇರುವ ದುರ್ಬಲ ಆಸಿಡ್‌ ಆಗಿದೆ. ಆದ್ದರಿಂದ ನಾಜಿಯಾ ಬೇಗಂಗೆ ಆಸಿಡ್‌ ಎರಚಿದಾಗ ಸ್ವಲ್ಪ ಉರಿ ಕಾಣಿಸಿಕೊಂಡಿದ್ದು, ಮುಖದ ಚರ್ಮ ಸ್ವಲ್ಪ ಸುಟ್ಟಂತಾಗಿದೆ. ಆದರೆ, ಮಾಂಸದ ಸಮೇತ ಚರ್ಮ ಸುಟ್ಟು ಹೋಗುವಂತಹ ಗಂಭೀರ ಗಾಯವಾಗಿಲ್ಲ. ನಂತರ, ಗಾಯಗೊಂಡ ಮಹಿಳೆಯನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಕುರಿತಂತೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.

ಅಫೀಷಿಯಲ್ ಲುಕ್‌ನಲ್ಲಿ ಅಪ್ಸರೆಯಂತೆ ಕಂಡ ಬಿಗ್‌ ಬಾಸ್ ನಿವೇದಿತಾ ಗೌಡ; ನೀವೇ ನನ್ನ ವಾಲ್‌ಪೇಪರ್ ಎಂದ ಅಭಿಮಾನಿ!

ಆಸಿಡ್ ದಾಳಿಗೆ ಕಠಿಣ ಶಿಕ್ಷೆ: ಆಸಿಡ್ ದಾಳಿ ಮಾಡುವ ಪ್ರಕರಣಕ್ಕೆ ಸಂಬಂಧೀಸಿದಂತೆ ಸರ್ಕಾರದಿಂದ ಕಠಿಣ ಶಿಕ್ಷೆಯನ್ನು ನಿಗದಿ ಮಾಡಿದೆ. ಭಾರತದಲ್ಲಿ ನಡೆಯುವ ಅತ್ಯಂತ ಅಮಾನವೀಯ ಕ್ರೌರ್ಯಗಳಲ್ಲಿ ಆಸಿಡ್ ದಾಳಿಯೂ ಒಂದೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಪಾಯಕಾರಿ ಆಸಿಡ್ ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ, ಕಾರ್ಖಾನೆ ಮತ್ತಿ ಇತರೆ ರಾಸಾಯನಿಕ ಕಾರ್ಯಗಳಿಗೆ ಮಾತ್ರ ಬಳಕೆ ಮಾಡಲು ನೋಂದಣಿ ಪಡೆದವರಿಂದ ಮಾತ್ರ ಆಸಿಡ್ ಮಾರಾಟ ಮಾಡಲಾಗುತ್ತದೆ.

click me!