Bengaluru ಅಪ್ಪ ಇಂಜಿನಿಯರ್‌, ಅಮ್ಮ ಟೀಚರ್‌: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು

By Sathish Kumar KH  |  First Published Aug 29, 2023, 4:24 PM IST

ಬೆಂಗಳೂರಿನ ಬೆಳ್ಳಂದೂರು ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ದಂಪತಿಯ 14 ವರ್ಷದ ಮಗಳು ಮಂಗಳವಾರ ಬೆಳಗ್ಗೆ ಅಪ್ಪ-ಅಮ್ಮ ಕೆಲಸಕ್ಕೆ ಹೋದಾಗ 12ನೇ ಮಹಡಿಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.


ಬೆಂಗಳೂರು (ಆ.29): ಅಪ್ಪ ಸಾಫ್ಟ್‌ವೇರ್‌ ಇಂಜಿನಿಯರ್‌, ಅಮ್ಮ ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿ ಆಗಿದ್ದಾಳೆ. ವಿದ್ಯಾವಂತ ಕುಟುಂಬದಲ್ಲಿ ಹುಟ್ಟಿದ್ದರೂ ಮಗಳು ಕಳೆದೆರಡು ತಿಂಗಳಿಂದ ಶಾಲೆಗೆ ಹೋಗಿರಲಿಲ್ಲ. ಮಂಗಳವಾರ ಬೆಳಗ್ಗೆ ಅಪ್ಪ-ಅಮ್ಮ ಕೆಲಸಕ್ಕೆ ಹೋದಾಗ ತಾನು ಶಾಲೆಗೆ ಹೋಗುತ್ತೇನೆಂದು 12ನೇ ಮಹಡಿ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ.

ಮೃತ ಬಾಲಕಿಯನ್ನು ಜೆಸ್ಸಿಕಾ (14) ಎಂದು ಗುರುತಿಸಲಾಗಿದೆ. ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದೆ. ಇಂದು ಬೆಳಿಗ್ಗೆ 10.30ರ ಸುಮಾರಿಗೆ ಘಟನೆ ನಡೆದಿದೆ. ಕಳೆದ ಎರಡು ವರ್ಷದಿಂದ ಕ್ಲಾಸಿಕ್ ಅಪಾರ್ಟ್ಮೆಂಟ್ ನಲ್ಲಿ ತಂದೆ ತಾಯಿ ಜೊತೆ ವಾಸವಾಗಿದ್ದಳು. ಅಪಾರ್ಟ್‌ಮೆಂಟ್‌ನ 11ನೇ ಮಹಡಿಯ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಖಾಸಗಿ ಶಾಲೆಯಲ್ಲಿ ಜೆಸ್ಸಿಕಾ 10ನೇ ತರಗತಿ ಓದುತಿದ್ದಳು. ಇವರು ಮೂಲತಃ ತಮಿಳುನಾಡಿನಿಂದ ಬಂದಿದ್ದರು. ತಂದೆ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್‌ ಆಗಿ ಕೆಲಸ ಮಾಡುತಿದ್ದರು.. ಅಮ್ಮ ಖಾಸಗಿ ಶಾಲೆಯಲ್ಲಿ ಟೀಚರ್‌ ಆಗಿ ಕೆಲಸ ಮಾಡುತ್ತಿದ್ದರು.

Tap to resize

Latest Videos

undefined

ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 15 ಲಕ್ಷ ಮಹಿಳೆಯರು 2000 ರೂ. ಪಡೆಯಲು ಅರ್ಹರಲ್ಲ: ತಿದ್ದುಪಡಿಗೆ ಇಲ್ಲಿದೆ ಮಾಹಿತಿ

ಇನ್ನು ಮಗಳು 10ನೇ ತರಗತಿ ಆಗಿದ್ದರೂ ಕಳೆದ ಎರಡು ತಿಂಗಳಿಂದ ಶಾಲೆಗೂ ಸಹ ಸರಿಯಾಗಿ ಹೊಗುತ್ತಿರಲಿಲ್ಲವಂತೆ. ಕಳೆದ ಮೂರು ತಿಂಗಳಲ್ಲಿ 6 ದಿನ ಮಾತ್ರ ತರಗತಿಗೆ ಹೋಗಿದ್ದಳು. ಇಂದು ಘಟನೆ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ತಾವು ವಾಸವಿದ್ದ ಫ್ಲೋರ್‌ನ ಮೇಲೆ ಹೋಗಿ ಅಲ್ಲಿಂದ ಬಿದ್ದಿದ್ದಾಳೆ. ಇನ್ನು ಬಾಲಕಿ ಬಿದ್ದ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವ ಉಂಟಾಗಿ ಹಾಗೂ ದೇಹವೆಲ್ಲಾ ಛಿದ್ರಗೊಂಡು ಸಾವನ್ನಪ್ಪಿದ್ದಾಳೆ. ಸದ್ಯ ಘಟನೆ ಸಂಬಂಧ ಬೆಳ್ಳಂದೂರು ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ. 

ಈ ಕುರಿತು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕ್ಲಾಸಿಕ್ ಅಪಾರ್ಟ್‌ಮೆಂಟ್‌ನಲ್ಲಿ ಬೆಳಗ್ಗೆ ಘಟನೆ ನಡೆದಿದೆ. 14 ವರ್ಷದ ಹುಡುಗಿ ಜೆಸ್ಸಿಕಾ 12ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಅಂತಾ ಗೊತ್ತಾಗಿಲ್ಲ. ತಂದೆ ಸಾಪ್ಟ್ ವೇರ್ ಇಂಜಿನಿಯರ್ ಹಾಗೂ ತಾಯಿ ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಾರೆ. ಇಂದು ಬೆಳಗ್ಗೆ ಬಾಲಕಿ ಶಾಲೆಗೆ ಹೋಗಿ ಪುನಃ ವಾಪಸ್ ಬಂದಿದ್ದಾಳೆ. ನಂತರ ಟೀಚರ್ ತಾಯಿಗೆ ಕರೆ ಮಾಡಿ ಮಗಳು ಶಾಲೆಗೆ ಬಂದಿಲ್ಲ ಅಂತಾ ಹೇಳಿದ್ದಾರೆ. 

ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆ ವರ್ಗಾವಣೆಗೆ ಹರಾಜು ನಡೆಯುತ್ತಿದೆ: ಮಾಜಿ ಸಿಎಂ ಬೊಮ್ಮಾಯಿ ಆರೋಪ

ನಂತರ ಪೋಷಕರು ಪರಿಶೀಲನೆ ಮಾಡಿದಾಗ ವಿಚಾರ ಗೊತ್ತಾಗಿದೆ. ಮನೆಯಲ್ಲಿ ಅಕ್ಕ, ಎಲ್ಲಾ ಕೆಲಸಕ್ಕೆ ಹೋಗಿದ್ದಾರೆ ಯಾರು ಇರಲಿಲ್ಲ. ಪ್ರಾಥಮಿಕವಾಗಿ ಬಾಲಕಿ ಶಾಲೆಗೆ ಹೋಗಿ ಕ್ಲಾಸ್ ಅಟೆಂಡ್ ಮಾಡದೆ ವಾಪಸ್ ಬರ್ತಾ ಇದ್ಲು ಅಂತಾ ಗೊತ್ತಾಗಿದೆ. ಅದ್ರೆ ಘಟನೆ ನಿಖರ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ‌. ಈ ಬಗ್ಗೆ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಮಾಹಿತಿ ನೀಡಿದರು.

click me!