
ಬೆಂಗಳೂರು (ಡಿ.4): ನನ್ನ ಹೆಂಡತಿಯನ್ನು ಬಿಟ್ಟುಬಿಡು, ನಮ್ಮ ಕುಟುಂಬದ ಸಹವಾಸಕ್ಕೆ ಬರಬೇಡ ಎಂದು ಎಷ್ಟೇ ಹೇಳಿದರೂ ಕೇಳದ ಗಿರಿನಗರ ಬಾಬು ಈಗ ಬೀದಿಯ ಹೆಣವಾಗಿದ್ದಾನೆ. ತಾವಾಯ್ತು, ತಮ್ಮ ಕುಟುಂಬವಾಯ್ತು ಎಂದು ನೆಮ್ಮದಿಯಿಂದ ಜೀವನ ಮಾಡಿಕೊಂಡಿದ್ದ ಸಿದ್ದರಾಜುವಿನ ಸುಂದರ ಪತ್ನಿಯ ಮೇಲೆ ಕಣ್ಣು ಹಾಕಿದ ಕಾಮುಕ ವೆಂಕಟೇಶ್ ಬಾಬುನನ್ನು ಅಟ್ಟಾಡಿಸಿ ಹೊಡೆದು ಕೊಲೆಗೈದು ಜೈಲು ಸೇರಿದ್ದಾನೆ. ಈ ಮೂಲಕ ನೆಮ್ಮದಿಯಾಗಿದ್ದ ಕುಟುಂಬ ಈಗ ದಿಕ್ಕಾಪಾಲಾಗಿದೆ.
ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸಿದ್ದರಾಜು ಕುಟುಂಬ ತಮ್ಮ ದುಡಿಮೆಯಾಯ್ತು, ತಾವಾಯ್ತು ಎಂಬಂತೆ ನೆಮ್ಮದಿಯಾಗಿ ಜೀವನ ಮಾಡಿಕೊಂಡು ಹೋಗುತ್ತಿತ್ತು. ಆದರೆ, ಸಂತಸದಿಂದಿದ್ದ ಕುಟುಂಬದ ಮೇಲೆ ಗಿರಿನಗರ ಬಾಬು ಕಣ್ಣು ಹಾಕಿದ್ದನು. ಸಿದ್ದರಾಜು ಹೆಂಡತಿಯ ಸಲುಗೆ ಬೆಳಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದನಂತೆ. ಈ ಬಗ್ಗೆ ಮಾಹಿತಿಯೇ ಗೊತ್ತಿಲ್ಲದೆ ಇದ್ದ ಸಿದ್ದರಾಜುಗೆ ಕೆಲವು ತಿಂಗಳಿಂದ ವಿಚಾರ ಗೊತ್ತಾಗಿದ್ದು, ಹೆಂಡತಿಗೆ ಬುದ್ಧಿವಾದ ಹೇಳಿದ್ದಾನೆ. ಇದರ ನಂತರವೂ ಆಕೆ ತಿದ್ದಿಕೊಳ್ಳದಿದ್ದಾಗ ಜಗಳ ಮಾಡಿ, ಎರಡೇಟು ಹೊಡೆದಿದ್ದಾನೆ. ಇಷ್ಟಕ್ಕೂ ಬಗ್ಗದ ಹೆಂಡತಿಯನ್ನು ತಾನೇ ಬಿಟ್ಟು ಹೋಗುವುದಾಗಿ ಕಳೆದ ಮೂರು ತಿಂಗಳಿಂದ ಬೇರೆಡೆ ಹೋಗಿ ವಾಸವಾಗಿದ್ದನು.
ಮೈಸೂರು ದಸರಾದಲ್ಲಿ 7 ಬಾರಿ ಅಂಬಾರಿ ಹೊತ್ತ ಅರ್ಜುನ ಆನೆ ವೀರಮರಣ: ಮಾವುತನ ಪ್ರಾಣಕ್ಕಾಗಿ ತನ್ನ ಜೀವ ಬಲಿದಾನ
ನೆಮ್ಮದಿಯಾಗಿದ್ದ ಕುಟುಂಬದಲ್ಲಿ ಗಿರಿನಗರದ ವೆಂಕಟೇಶಬಾಬು ಎಂಟ್ರಿ ಕೊಟ್ಟು ಇಡೀ ಸಂಸಾರವನ್ನೇ ಛಿದ್ರ ಮಾಡಿದನಲ್ಲ ಎಂಬ ರೋಷ ಸಿದ್ದರಾಜುಗೆ ಉಕ್ಕುತ್ತಿತ್ತು. ಆದರೂ, ತನ್ನ ಹೆಂಡತಿಯೇ ಸರಿಯಾಗಿಲ್ಲ ಎಂದು ಕೈ ಕೈ ಹಿಸುಕಿಕೊಂಡು ಸುಮ್ಮನಾಗಿದ್ದನು. ಇನ್ನು ತನ್ನ ಗಂಡ ಬಿಟ್ಟು ಹೋಗಿರುವುದೇ ತನಗೆ ಲಾಭವಾಗಿದೆ ಎಂದು ವೆಂಕಟೇಶ್ ಬಾಬು ಜೊತೆಗೆ ಸಿದ್ದರಾಜು ಪತ್ನಿ ಮಾತನಾಡುತ್ತಾ ಸಲುಗೆಯಿಂದ ಇದ್ದಳು. ಆಗ ಅಲ್ಲಿಗೆ ಬಂದ ಸಿದ್ದರಾಜು ತನ್ನ ಪತ್ನಿ ವೆಂಕಟೇಶನ ಜೊತೆಗೆ ಮಾತನಾಡೊದನ್ನ ನೋಡಿ ಕೋಪಗೊಂಡಿದ್ದಾನೆ. ಈ ವೇಳೆ ರಸ್ತೆಯಲ್ಲಿಯೇ ವೆಂಕಟೇಶನೊಂದಿಗೆ ಜಗಳ ಮಾಡಿ ಆರಂಭಿಸಿದ್ದಾನೆ. ನಂತರ, ವೆಂಕಟೇಶನನ್ನು ಅಟ್ಟಾಡಿಸಿ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಕೂಡಲೇ ವೆಂಕಟೇಶ್ ಬಾಬು ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹೆಂಡ್ತಿ ಸರಿಯಾಗಿ ಆರೈಕೆ ಮಾಡ್ತಿಲ್ಲವೆಂದು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಗಂಡ
ಗಿರಿನಗರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವೆಂಕಟೇಶ್ ಬಾಬು ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಸಿದ್ದರಾಜು ಕೊಲೆಮಾಡಿದ ಆರೋಪಿ ಆಗಿದ್ದಾನೆ. ಕೊಲೆ ಘಟನೆಯ ನಂತರ ಸ್ಥಳ ಪರಿಶೀಲನೆ ಮಾಡಿದ ಅಧಿಕಾರಿಗಳು ಇದೀಗ ಆರೋಪಿ ಸಿದ್ದರಾಜುನನ್ನು ಬಂಧಿಸಿದ್ದಾರೆ. ಈ ಕುರಿತಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ