ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಚೀಟಿ ಹಣದ ವಿಚಾರಕ್ಕಾಗಿ ಸ್ನೇಹಿತನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ರಾಜಕಾಲುವೆಗೆ ಎಸೆದ ಬೀಭತ್ಸ್ಯ ಘಟನೆ ನಡೆದಿದೆ.
ಬೆಂಗಳೂರು (ಜೂ.08): ಚೀಟಿ ಹಣದ ವಿಚಾರವಾಗಿ ಮಾತನಾಡೋಣ ಎಂದು ಮನೆಗೆ ಕರೆಸಿಕೊಂಡು ತುಂಡು ತುಂಡಾಗಿ ಕತ್ತರಿಸಿ ಸಂತೆ ಮಾಡುವ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಮೃತದೇಹದ ಮಾಂಸಗಳನ್ನು ತುಂಬಿ ರಾಜಕಾಲುವೆಗೆ ಎಸೆದಿರುವ ಬೀಭತ್ಸ್ಯ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು, ಬೆಂಗಳೂರಿನಲ್ಲೊಂದು ಬೀಭತ್ಸ ಕೊಲೆ ಪ್ರಕರಣ ಬೆಳಕಿಗೆ ಬೆಂದಿದೆ. ಮನೆಯಲ್ಲೇ ವ್ಯಕ್ತಿಯನ್ನು ತುಂಡುತುಂಡಾಗಿ ಕತ್ತರಿಸಿದ ನರ ಹಂತಕ, ಮೃತದೇಹದ ತುಂಡುಗಳನ್ನು ಬೆಂಗಳೂರಿನ ರಾಜಕಾಲುವೆಗೆ ಎಸಸೆದು ಬಂದಿದ್ದಾರೆ. ಕಳೆದ ಮೂರು ದಿನಗಳಿಂದ ಹುಡುಕಿದರೂ ಮೃತದೇಹದ ಒಂದು ತುಂಡು ಕೂಡ ಪೊಲೀಸರಿಗೆ ಸಿಗುತ್ತಿಲ್ಲ. ಈ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಪಿಗೆಹಳ್ಳಿ ಪೊಲೀಸರಿಂದ ಕೃತ್ಯ ಬಯಲಿಗೆ ಬಂದಿದೆ. ಇನ್ನು ಮೃತ ವ್ಯಕ್ತಿಯನ್ನು ಕೆ.ವಿ.ಶ್ರೀನಾಥ್ (34) ಎಂದು ಹೇಳಲಾಗಿದೆ. ಕೊಲೆ ಮಾಡಿದ ಆರೋಪಿ ಮೃತನ ಸ್ನೇಹಿತ ಮಾಧವರಾವ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು..?
ಬೆಂಗಳೂರಿನ ಬಸವೇಶ್ವರನಗರದಲ್ಲಿರುವ ಮಾರ್ಗದರ್ಶಿ ಚೀಟ್ ಫಂಡ್ ನಲ್ಲಿ ಕೊಲೆಯಾದ ಶ್ರೀನಾಥ್ ಡೆವಲಪ್ಮೆಂಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದು, ಥಣಿಸಂದ್ರದ ಅಂಜನಾದ್ರಿ ಲೇಔಟ್‌ನಲ್ಲಿ ವಾಸವಾಗಿದ್ದರು. ಕಳೆದ ಮೇ.28ರ ಬೆಳಗ್ಗೆ ಮನೆಯಿಂದ ಹೊರಹೋಗಿದ್ದ ಶ್ರೀನಾಥ್ ಮನೆಗೆ ವಾಪಸ್ ಬಂದಿರಲಿಲ್ಲ. ಶ್ರೀನಾಥ್ ನಾಪತ್ತೆಯಾದ ಬಗ್ಗೆ ಅವರ ಪತ್ನಿ ಮೇ.29ರಂದು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಕೆ.ವಿ.ಶ್ರೀನಾಥ್ ಅವರು ಮೇ.28ರಂದು ಕೆ.ಆರ್.ಪುರಂನ ವಿಜಿನಪುರದಲ್ಲಿರುವ ಅವರ ಸ್ನೇಹಿತ ಮಾಧವರಾವ್ ಮನೆಗೆ ಹೋಗಿರುವುದು ಪತ್ತೆಯಾಗಿದೆ.
ಮೊಮ್ಮಗಳ ಬೆತ್ತಲೆ ವಿಡಿಯೋ ತೋರಿಸಿ ಬೆದರಿಕೆ; ಮರ್ಯಾದೆಗೆ ಹೆದರಿ ವಿಷ ಸೇವಿಸಿದ ಕುಟುಂಬ
ಮಾಧವರಾವ್ ಮನೆಯ ಸಿಸಿಟಿವಿಯಲ್ಲಿ ಶ್ರೀನಾಥ್ ಒಳಗೆ ಹೋಗಿರುವುದು ಪತ್ತೆಯಾಗಿದೆ. ಆದರೆ ಕೆ.ಶ್ರೀನಾಥ್ ಮನೆಯಿಂದ ಹೊರಗೆ ಹೋಗುವುದು ರೆಕಾರ್ಡ್ ಆಗಿರಲಿಲ್ಲ. ಜೊತೆಗೆ,ಮನೆಯ ಒಳಗಡೆ ಪರಿಶೀಲನೆ ಮಾಡಿದಾಗ ರಕ್ತದ ಕಲೆಗಳು ಪತ್ತೆಯಾಗಿದ್ದಾವೆ. ಇದರಿಂದಾಗಿ ಅಕ್ಕಪಕ್ಕದ ಮನೆಯಲ್ಲಿ ಮಾಧವರಾವ್ ಬಗ್ಗೆ ವಿಚಾರಿಸಿದಾಗ ಆತನೂ ನಾಪತ್ತೆಯಾಗಿದ್ದನು. ಇನ್ನು ಆತನ್ನು ಪೊಲೀಸರು ಟ್ರೇಸ್ ಮಾಡಿದಾಗ ಆಂಧ್ರ ಪ್ರದೇಶದಲ್ಲಿ ಇರುವುದನ್ನು ಪತ್ತೆ ಮಾಡಿ ಮಾಧವರಾವ್‌ನನ್ನು ಕರೆದು ತಂದಿದ್ದರು. ಪೊಲೀಸರು ಶ್ರೀನಾಥ್‌ನ ಕೊಲೆ ಬಗ್ಗೆ ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ಮಾಡಿದಾಗ, ಕೊಲೆ ಮಾಡಿ ಪರಾರಿ ಆಗಿರುವ ಬಗೆಗಿನ ಅಸಲಿ ಕಥೆಯನ್ನು ಬಿಚ್ಚಿಟ್ಟಿದ್ದಾನೆ.
ಕೊಲೆ ಮಾಡುವುದಕ್ಕೆ ಅಸಲಿ ಕಾರಣವಾದರೂ ಏನು?
ಆರೋಪಿ ಮಾಧವರಾವ್ ಮತ್ತು ಮೃತ ವ್ಯಕ್ತಿ ಕೆ.ವಿ.ಶ್ರೀನಾಥ್ ಗೆ ಎರಡು ವರ್ಷದಿಂದ ಪರಿಚಯವಾಗಿದ್ದರು. ನಂತರ ಅವರ ಸ್ನೇಹ ಗಾಢವಾಗಿದ್ದು, ಕೆ.ವಿ.ಶ್ರೀನಾಥ್ ಬಳಿ ಮಾಧವರಾವ್ 5 ಲಕ್ಷ ರೂ. ಹಣದ ಚೀಟಿ ಹಾಕಿದ್ದನು. ಈ ಚೀಟಿ ಹಣದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿತ್ತು. ಎಲ್ಲರಿಗಿಂತ ಮೊದಲೇ ಚೀಟಿ ಹಣ ಎತ್ತಿಕೊಂಡಿದ್ದ ಮಾಧವರಾವ್ ಬಳಿ ಚೀಟಿ ಹಣ ವಾಪಸ್ ಕೊಡುವಂತೆ ಶ್ರೀನಾಥ್ ಒತ್ತಾಯ ಮಾಡುತ್ತಿದ್ದನು. ಜೊತೆಗೆ, ಚೀಟಿ ಹಣದ ವಿಚಾರವಾಗಿ ಆಗಾಗ ಮಾಧವರಾವ್ ಮನೆಗೆ ಬರುತ್ತಿದ್ ಶ್ರೀನಾಥ್ ಸ್ನೇಹಿತನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವನ್ನೂ ಬೆಳೆಸಿದ್ದನಂತೆ. ಹೀಗಾಗಿ, ಆತನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಮಾಧವರಾವ್ ಮನೆಗೆ ಬಂದಿದ್ದ ಶ್ರೀನಾಥನನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಶ್ರೀನಾಥ್ ಮನೆಗೆ ಬಂದಿದ್ದ ವೇಳೆ ಚೀಟಿ ಹಣದ ವಿಚಾರಕ್ಕೆ ಇಬ್ಬರಿಗೂ ಗಲಾಟೆ ಆಗಿದೆ. ಬಳಿಕ ಮಾಧವರಾವ್ ತನ್ನ ಮನೆಯಲ್ಲಿದ್ದ ಜಾಕ್ ರಾಡ್ ನಿಂದ ಶ್ರೀನಾಥ್ ತಲೆಗೆ ಹೊಡೆದಿದ್ದಾನೆ. ಆಗ ಕುಸಿದುಬಿದ್ದ ಶ್ರೀನಾಥ್ ಪ್ರಾಣ ಹೋಗಿದೆ. ಇದರಿಂದ ಮೃತದೇಹ ಏನು ಮಾಡಬೇಕೆಂದು ತಿಳಿಯದೇ ಶ್ರೀನಾಥ್ ದೇಹವನ್ನು ಮಚ್ಚಿನಿಂದ ತುಂಡು ತುಂಡಾಗಿ ಕತ್ತರಿಸಿದ್ದಾನೆ. ನಂತರ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶ್ರೀನಾಥ್ ಮೃತದೇಹವನ್ನ ಮೂರು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೈಕ್‌ನಲ್ಲಿ ಬೆಳತ್ತೂರು ಬಳಿಯ ರಾಜಕಾಲುವೆಯಲ್ಲಿ (ಪಿನಾಕಿನಿ ನದಿ) ಬೀಸಾಡಿ ಬಂದಿದ್ದಾರೆ. ನಂತರ, ಶ್ರೀನಾಥ್‌ನ ಮತ್ತು ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಆಂಧ್ರ ಪ್ರದೇಶಕ್ಕೆ ಎಸ್ಕೇಪ್ ಆಗಿದ್ದನು.
ಶೋ ರೂಮ್‌ಗಳೇ ಟಾರ್ಗೆಟ್: ದುಬಾರಿ ಬಟ್ಟೆ ಕದಿಯುತ್ತಿದ್ದ ಕುಖ್ಯಾತ ಕಳ್ಳನ ಬಂಧನ
ಕೊಲೆ ಮಾಡಿದ ಸ್ಥಳ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ರಾಮಮೂರ್ತಿನಗರ ಪೊಲೀಸರಿಂದ ಕೊಲೆ (302) ಮತ್ತು ಸಾಕ್ಷಿ ನಾಶ(201)ರಡಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಮೃತದೇಹದ ತುಂಡುಗಳನ್ನು ಹುಡುಕಲು ಮಂಗಳೂರಿನಿಂದ ನುರಿತ ತಜ್ಞರನ್ನು ಪೊಲೀಸರು ಕರೆಸಿದ್ದಾರೆ. ಆದರೆ, ಕಳೆದ ಮೂರು ದಿನಗಳಿಂದ ಹುಡುಕಿದರೂ ಪೊಲೀಸರಿಗೆ ಒಂದು ತುಂಡು ಕೂಡ ಸಿಗುತ್ತಿಲ್ಲ. ರಾಜಕಾಲುವೆ ನೀರಿನಲ್ಲಿ ಮೃತದೇಹದ ತುಂಡುಗಳು ಕೊಚ್ಚಿಕೊಂಡು ಹೋಗಿರೋ ಸಾಧ್ಯತೆಯಿದೆ.