ಕಾಪಾಡಿ, ಕಾಪಾಡಿ ಅಂತ ಬೇಡಿಕೊಂಡ್ರೂ ಯಾರೂ ಬರಲಿಲ್ಲ; ನಡುರಸ್ತೆಯಲ್ಲಿ ಹೆಣವಾದ ಬ್ಯಾಂಕ್ ಮಹಿಳಾ ಉದ್ಯೋಗಿ 

Published : Jun 08, 2024, 04:39 PM ISTUpdated : Jun 08, 2024, 04:41 PM IST
ಕಾಪಾಡಿ, ಕಾಪಾಡಿ ಅಂತ ಬೇಡಿಕೊಂಡ್ರೂ ಯಾರೂ ಬರಲಿಲ್ಲ; ನಡುರಸ್ತೆಯಲ್ಲಿ ಹೆಣವಾದ ಬ್ಯಾಂಕ್ ಮಹಿಳಾ ಉದ್ಯೋಗಿ 

ಸಾರಾಂಶ

ಮಹಿಳೆಯ ಜೀವ ಹೋಗುತ್ತಿದ್ದಂತೆ ದುಷ್ಕರ್ಮಿ ಯಾರ ಹೆದರಿಕೆಯೂ ಇಲ್ಲದೇ ರಸ್ತೆ ಕ್ರಾಸ್ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳದಿಂದ ಪರಾರಿಯಾಗುವ ಸಂದರ್ಭದಲ್ಲಿ ಆರೋಪಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ.

ಚಂಡೀಗಢ: ಜನಸಂದಣಿ ರಸ್ತೆಯಲ್ಲಿ ಮಹಿಳೆ ಮೇಲೆ ಕತ್ತಿ ಮತ್ತು ಕಬ್ಬಿಣದ ರಾಡ್‌ನಿಂದ ದಾಳಿ ನಡೆಸಿ (Woman Murder) ಕೊಲೆಗೈಯ್ಯಲಾಗಿದೆ. ಇಂದು ಬೆಳಗ್ಗೆ (8 ಜೂನ್ 2024) ಮಹಿಳೆಯ ಕೊಲೆ ನಡೆದಿದೆ. ಅಪರಿಚಿತ ವ್ಯಕ್ತಿಯಿಂದ ಹಲ್ಲೆಗೊಳಗಾದ ಮಹಿಳೆಯನ್ನು ಬಲ್ವಿಂದರ್‌ ಕೌರ್ ಎಂದು ಗುರುತಿಸಲಾಗಿದ್ದು, ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ (Mohali, Punjab) ಬೆಳಗ್ಗೆ ಕೊಲೆ ನಡೆದಿದೆ. ಘಟನೆ ನಡೆದ ಸ್ಥಳದಿಂದ ಕೆಲ ಕಿಲೋಮೀಟರ್‌ ದೂರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Footage) ಸೆರೆಯಾಗಿದೆ. 

ಬಲ್ವಿಂದರ್‌ ಕೌರ್ ಕೆಲಸಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ದಾಳಿ ನಡೆದಿದೆ. ಈ ವೇಳೆ ಕೈಯಲ್ಲಿ ಕಬ್ಬಿಣದ ರಾಡ್ ಮತ್ತು ಕತ್ತಿ ಹಿಡಿದುಕೊಂಡು ಮಹಿಳೆಯನ್ನು ಹಿಂಬಾಲಿಸಿದ್ದಾನೆ. ಮಹಿಳೆ ಆತಂಕದಿಂದ ಓಡುತ್ತಾ ಬಂದು ರಸ್ತೆಯಲ್ಲಿ ನಿಂತಿದ್ದ ವಾಹನದ ಬಳಿ ಬಿದ್ದಿದ್ದಾರೆ. ಕೂಡಲೇ ಅಲ್ಲಿಗೆ ಓಡಿ ಬಂದ ದುಷ್ಕರ್ಮಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಜನಸಂದಣಿ ರಸ್ತೆಯಲ್ಲಿಯೇ ಮಹಿಳೆ ಮೇಲೆ ಹಲ್ಲೆ ನಡೆದರೂ ಯಾರೂ ಸಹ ಆಕೆಯ ಸಹಾಯಕ್ಕೆ ಮುಂದಾಗಿಲ್ಲ. 

Belagavi: 'ನಗುತಾ ನಗುತಾ ಬಾಳು ನೀನು..' ಎಂದು ಹಾಡಿದವನನ್ನೇ ಮುಗಿಸಿಬಿಟ್ರು ಸ್ನೇಹಿತರು!

ಕೊಲೆಗೆ ಕಾರಣ ಏನು?

ಮಹಿಳೆಯ ಜೀವ ಹೋಗುತ್ತಿದ್ದಂತೆ ದುಷ್ಕರ್ಮಿ ಯಾರ ಹೆದರಿಕೆಯೂ ಇಲ್ಲದೇ ರಸ್ತೆ ಕ್ರಾಸ್ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳದಿಂದ ಪರಾರಿಯಾಗುವ ಸಂದರ್ಭದಲ್ಲಿ ಆರೋಪಿಗೆ ವಾಹನವೊಂದು ಡಿಕ್ಕಿ ಹೊಡೆದಿದೆ. ಆರೋಪಿಯನ್ನು ಸುಖ್‌ಚನ್ ಸಿಂಗ್ ಎಂದು ಗುರುತಿಸಲಾಗಿದ್ದು, ಫತೇಗಢ ನಿವಾಸಿಯಾಗಿದ್ದಾನೆ.  ಫತೇಗಢ ಸಾಹಿಬ್ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ಸುಖ್‌ಚನ್ ಕೆಲಸ ಮಾಡಿಕೊಂಡಿದ್ದನು ಎಂದು  ಪೊಲೀಸರು ಮಾಹಿತಿ ನೀಡಿದ್ದಾರೆ. 

ಘಟನೆ ನಡೆದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪ್ರೀತಿಯ ವಿಚಾರಕ್ಕಾಗಿ ಈ ಕೊಲೆ ನಡೆದಿದೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಕೊಲೆಯಾದ ಮಹಿಳೆ ಏಳು ವರ್ಷದಿಂದ ಬ್ಯಾಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು, ಮಹಿಳೆಯ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಗರೇಟು ಸೇದುವ ವಿಚಾರಕ್ಕೆ ಜಗಳ; ಸ್ನೇಹಿತನನ್ನೇ ನಡುರಸ್ತೆಗೆ ಕೆಡವಿ ಥಳಿಸಿದ ದುರುಳರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!