ವೈಯಾಲಿಕಾವಲ್ ಮಹಾಲಕ್ಷ್ಮೀ 59 ಪೀಸ್ ಮರ್ಡರ್ ಕೇಸ್‌ನಲ್ಲಿ ಹೊಸ ಹೊಸ ಅಪ್‌ಡೇಟ್‌ಗಳು ಗೊತ್ತಾಗುತ್ತಿವೆ. ಮಹಾಲಕ್ಮೀಯ ಕೊಲೆ ಮಾಡಿದ್ದ ಹಂತಕ ಆಕೆಯ ಡೆಡ್ ಬಾಡಿಯನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಲು ಪ್ರಯತ್ನ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು (ಸೆ.22); ವೈಯಾಲಿಕಾವಲ್‌ನಲ್ಲಿ 29 ವರ್ಷದ ಯುವತಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಿ ಆಕೆಯ ದೇಹವನ್ನು 59 ಪೀಸ್‌ಗಳನ್ನಾಗಿ ಮಾಡಿದ ಪ್ರಕರಣದಲ್ಲಿ ಒಂದೊಂದೇ ಅಪ್‌ಡೇಟ್‌ಗಳು ಹೊರಬರುತ್ತಿವೆ. ಮಹಾಲಕ್ಷ್ಮೀಯನ್ನು ಕೊಂದ ಬಳಿಕ ಆಕೆಯ ಮೃತದೇಹವನ್ನು ಹೊರಗೆ ಸಾಗಿಸುವ ಪ್ರಯತ್ನವನ್ನೂ ಮಾಡಿದ್ದ. ಆದರೆ, ಕೊನೆಯ ಕ್ಷಣದಲ್ಲಿ ತನ್ನ ಪ್ಲ್ಯಾನ್ ಬದಲಾಯಿಸಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಫ್ರಿಜ್‌ನ ಎದುರುಗಡೆ ಇರುವ ಸೂಟ್‌ಕೇಸ್. ಭಾನುವಾರ ಮಹಾಲಕ್ಮೀ ಕೊಲೆ ಕೇಸ್‌ನ ಪ್ರಮುಖ ವಿಡಿಯೋ ಮಾಧ್ಯಮಗಳಿಗೆ ಲಭಿಸಿದೆ. ಆಕೆಯ ತಾಯಿ ಮನೆಯ ಕೀ ತೆಗೆದು ಒಳಗೆ ಹೋಗುವ ವೇಳೆ ಅದನ್ನು ವಿಡಿಯೋ ಮಾಡಿದ್ದಾರೆ. ಈ ವೇಳೆ ಫ್ರಿಜ್‌ನ ಎದುರು ಖಾಲಿ ಸೂಟ್‌ಕೇಸ್ ಕಂಡಿದೆ.
ಮಹಾಲಕ್ಷ್ಮಿ ದೇಹವನ್ನ ತುಂಡಾಗಿಸಿ ಹೊರಗಡೆ ಸಾಗಿಸೋದು ಆರೋಪಿಯ ಪ್ಲಾನ್ ಆಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ. ಮಹಾಲಕ್ಷ್ಮಿ ತಾಯಿ ಮನೆಗೆ ಬಂದಾಗ ಮಾಡಿದ್ದ ವಿಡಿಯೋ ನೋಡಿದ್ರೆ, ಇಂಥ ಹಲವು ಅನುಮಾನಗಳು ಮೂಡಿದೆ. ಫ್ರಿಡ್ಜ್ ಮುಂದೆಯೇ ಕೊಲೆಗಡುಕ ಸೂಟ್ ಕೇಸ್ ಇಟ್ಟಿದ್ದ ದೇಹ ತುಂಡಾಗಿಸಿ ಸೂಟ್ ಕೇಸ್ ನಲ್ಲಿ ಸಾಗಿಸೋದು ಆರೋಪಿಯ ಪ್ಲಾನ್ ಆಗಿದ್ದಿರಬಹುದು ಎಂದು ಪೊಲೀಸರೂ ಅಂದಾಜು ಮಾಡಿದ್ದಾರೆ.
ಕಪ್ಪು ಬಣ್ಣದ ಸೂಟ್ ಕೇಸ್ ನಲ್ಲಿ ಮೃತದೇಹ ಸಾಗಿಸೋ ಆರೋಪಿಯ ಪ್ಲಾನ್ ಆಗಿತ್ತು. ಅದಲ್ಲದೆ, ಕೊಲೆ ಮಾಡಿ ಮನೆ ಪೂರ್ತಿ ಕ್ಲೀನ್ ಮಾಡಿದ್ದ. ರಕ್ತವನ್ನು ಟಾಯ್ಲೆಟ್‌ನಲ್ಲಿ ಹಾಕಿದ್ದಿರಬಹುದು ಎನ್ನಲಾಗಿದೆ. ಮಹಾಲಕ್ಷ್ಮಿ ದೇಹವನ್ನ ತುಂಡು ತುಂಡಾಗಿ ಕಟ್ ಮಾಡಿದ್ದರೂ, ಮನೆಯಲ್ಲಿ ರಕ್ತ ಚೆಲ್ಲಿರಲಿಲ್ಲ. ಚೆಲ್ಲಿದ್ದ ರಕ್ತವನ್ನ ಆರೋಪಿ ಬಟ್ಟೆಯಿಂದ ಒರೆಸಿ ಹೋಗಿದ್ದಾರೆ. ಒರೆಸಿರುವ ಬಟ್ಟೆಯನ್ನೂ ಆರೋಪಿ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಹಾಗಾದಲ್ಲಿ ಆರೋಪಿ ಪ್ಲಾನ್ ಏನಾಗಿತ್ತು ಅನ್ನೋದೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
Bengaluru Fridge Murder: ಮಹಾಲಕ್ಷ್ಮೀ ಪೀಸ್ ಮರ್ಡರ್, ಯಾರ ಮೇಲಿದೆ ಮನೆಯವರ ಅನುಮಾನ?