Pregnancy Job Scam: ಶ್ರೀಮಂತ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 50 ಲಕ್ಷ ರೂಪಾಯಿ ಆಫರ್‌!

By Santosh Naik  |  First Published Nov 15, 2024, 5:42 PM IST

ಫೇಸ್‌ಬುಕ್‌ನಲ್ಲಿ ಶ್ರೀಮಂತ ಮಹಿಳೆಯರನ್ನು ಗರ್ಭಿಣಿ ಮಾಡಿದರೆ ಹಣ, ಕಾರು, ಆಸ್ತಿ ನೀಡುವುದಾಗಿ ಆಮಿಷವೊಡ್ಡಿ ಯುವಕರನ್ನು ವಂಚಿಸಲಾಗುತ್ತಿದೆ. ನೋಂದಣಿ ಶುಲ್ಕ ಪಡೆದು ವಂಚಕರು ಸಂಪರ್ಕ ಕಡಿದುಕೊಳ್ಳುತ್ತಿದ್ದಾರೆ. ಹಲವು ಯುವಕರು ಈಗಾಗಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ.


ನವದೆಹಲಿ (ನ.15): ಫೇಸ್‌ಬುಕ್‌ನಲ್ಲಿ ಹೊಸ ರೀತಿಯ ಹಗರಣ ಬೆಳಕಿಗೆ ಬಂದಿದೆ. ತಮ್ಮ ಶ್ರೀಮಂತ ಕ್ಲೈಂಟ್‌ ಅನ್ನು ಗರ್ಭಿಣಿ ಮಾಡಿದರೆ, ಅದಕ್ಕಾಗಿ ಸೂಕ್ತ ರಿವಾರ್ಡ್‌ಅನ್ನು ನೀಡಲಾಗುತ್ತದೆ ಎನ್ನುವ ಪೋಸ್ಟರ್‌ಗಳೊಂದಿಗೆ ಮೋಸಗಾರರು ಯವಕರನ್ನು ಸೆಳೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಮಂದಿ ಪುರುಷರು ಈ ಹಗರಣದಲ್ಲಿ ಬಿದ್ದು ಹಣ ಹಾಗೂ ಮರ್ಯಾದೆ ಎರಡನ್ನೂ ಕಳೆದುಕೊಂಡಿದಿದ್ದಾರೆ. ತಮ್ಮ ಕ್ಲೈಂಟ್‌ ಆಗಿರುವ ಶ್ರೀಮಂತ ಮಹಿಳೆಯರನ್ನು ಗರ್ಭಿಣಿಯಾಗಿಸಲು ಅವರೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಲ್ಲಿ ದೊಡ್ಡ ಮೊತ್ತದ ಹಣ, ಐಷಾರಾಮಿ ಕಾರುಗಳು ಮತ್ತು ಆಸ್ತಿಯಲ್ಲಿ ಪಾಲು ಕೂಡ ಸಿಗಲಿದೆ ಎಂಬ ಆಮೀಷ ಒಡ್ಡಲಾಗುತ್ತಿದೆ. ಆದರೆ, ಇದಕ್ಕೆ ಸಮಯ ಮಿತಿ ಇರಲಿದ್ದು, ಅಷ್ಟು ಸಮಯ ವಿತಿಯ ಒಳಗಾಗಿ ತಮ್ಮ ಶ್ರೀಮಂತ ಕ್ಲೈಂಟ್‌ಅನ್ನು ಗರ್ಭಿಣಿ ಮಾಡಬೇಕು. ಇದಕ್ಕಾಗಿ ಪೋಸ್ಟರ್‌ನಲ್ಲಿ ಆಕರ್ಷಕ ಮಹಿಳೆಯರ ಚಿತ್ರವನ್ನೂ ಮೋಸಗಾರರು ಹಾಕುತ್ತಿದ್ದಾರೆ. ಈ ಹಗರಣದಲ್ಲಿ ಸಿಲುಕಿಕೊಂಡ ವ್ಯಕ್ತಿಗಳು ಮರ್ಯಾದೆಗೆ ಅಂಜಿ ಅನ್ನು ಸೈಬರ್‌ಕ್ರೈಮ್‌ಗೆ ತಿಳಿಸಲು ಹಿಂಜರಿದಿದ್ದಾರೆ. 

ಹೆಚ್ಚಾಗಿ ನಿರುದ್ಯೋಗಿ ಹಾಗೂ ಗ್ರಾಮೀಣ ಯುವಕರನ್ನೇ ಟಾರ್ಗೆಟ್‌ ಮಾಡಿಕೊಂಡು ಸ್ಕ್ಯಾಮರ್‌ಗಳು ಕೆಲಸ ಮಾಡುತ್ತಿದ್ದಾರೆ."ಗರ್ಭಧಾರಣೆಯ ಕೆಲಸ" ವನ್ನು ವಿವರವಾಗಿ ವಿವರಿಸಿದ ನಂತರ, ಸ್ಕ್ಯಾಮರ್‌ಗಳು ಆಸಕ್ತಿ ಹೊಂದಿರುವ ಪುರುಷರನ್ನು ಸಂಪರ್ಕ ಮಾಡುತ್ತಿದ್ದು, "ಪ್ರಕ್ರಿಯೆಗಾಗಿ" ನೋಂದಣಿ ಶುಲ್ಕ ಅಥವಾ ಮುಂಗಡ ಪಾವತಿಗಳನ್ನು ಕೇಳುತ್ತಾರೆ. ಹಣವನ್ನು ಕಳುಹಿಸಿದ ನಂತರ ಸಂವಹನವು ಸಾಮಾನ್ಯವಾಗಿ ನಿಲ್ಲುತ್ತದೆ.
ಈ ಸ್ಕ್ಯಾಮ್‌ನಲ್ಲಿ ಬಲಿಯಾದ ಹರಿಯಾಣ ಮೂಲದ ವ್ಯಕ್ತಿಯೊಬ್ಬ ತಾನು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದೇನೆ ಎಂದಿದ್ದಾರೆ. ವಿವಿಧ ರೀತಿಯ ಶುಲ್ಕಗಳು ಹಾಗೂ ಸುಳ್ಳಿನ ಮೇಲೆ ಅವರು ಹಣವನ್ನು ಕೇಳುತ್ತಲೇ ಇರುತ್ತಾರೆ ಎಂದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ ಎಂಟು ಫೇಸ್‌ಬುಕ್ ಗುಂಪುಗಳು ಈ ನಕಲಿ "ಗರ್ಭಧಾರಣೆಯ ಉದ್ಯೋಗ" ಆಫರ್‌ಗಳನ್ನು ಜಾಹೀರಾತು ಮಾಡುತ್ತಿರುವುದು ಕಂಡುಬಂದಿದೆ. ಈ ಗುಂಪುಗಳು ಪೋಸ್ಟ್ ಮಾಡಿದ ಹಲವಾರು ವೀಡಿಯೊಗಳಲ್ಲಿ, ಮಹಿಳೆಯರು ದೊಡ್ಡ ಮೊತ್ತದ ಹಣವನ್ನು ಗರ್ಭಧರಿಸಲು ಸಹಾಯ ಮಾಡುವ ಪುರುಷರಿಗೆ ಭರವಸೆ ನೀಡುತ್ತಿದ್ದಾರೆ. ಉದಾಹರಣೆಗೆ ರೂ 20-50 ಲಕ್ಷ, ಆಸ್ತಿ ಮತ್ತು ಕಾರು ಆಫರ್‌ಗಳನ್ನು ನೀಡಲಾಗುತ್ತಿದೆ.

ಬೆಂಗಳೂರು ಯುವತಿ ಗುಟ್ಟಾಗಿ ಮದುವೆಯಾದ 54 ವರ್ಷದ ಸ್ವಾಮೀಜಿ, ತಮಿಳುನಾಡು ಮಠದಿಂದ ಕಿಕ್‌ಔಟ್‌

Latest Videos

undefined

ಮೂರು ತಿಂಗಳೊಳಗೆ ನನ್ನನ್ನು ಗರ್ಭಿಣಿಯನ್ನಾಗಿ ಮಾಡುವವರಿಗೆ 20 ಲಕ್ಷ ರೂಪಾಯಿ ನೀಡುತ್ತೇನೆ. ಈ ಸಮಯದಲ್ಲಿ ಅವನು ನನ್ನೊಂದಿಗೆ ಬದುಕಬೇಕು, ”ಎಂದು ಮಹಿಳೆಯೊಬ್ಬರು ವೀಡಿಯೊದಲ್ಲಿ  ಹೇಳಿದ್ದಾರೆ. ಸ್ಕ್ಯಾಮರ್‌ಗಳು ಆಮಿಷ ಒಡ್ಡಲು ವಿಡಿಯೋಗಳ ಜೊತೆ ಮಹಿಳೆಯರ ಫೋಟೋಗಳನ್ನು ಕೂಡ ಅಪ್‌ಲೋಡ್‌ ಮಾಡುತ್ತಾರೆ. ಇನ್ನು ವಂಚನೆಗೆ ಒಳಗಾದ ವ್ಯಕ್ತಿಗಳು ಘಟನೆಯ ಬಗ್ಗೆ ವರದಿ ಮಾಡಲು ಮುಜುಗರದ ಕಾರಣಕ್ಕಾಗಿ ಹಿಂಜರಿಯುತ್ತಾರೆ. ಇದು ಸ್ಕ್ಯಾಮರ್‌ಗಳಿಗೆ ತಮ್ಮ ಕಾರ್ಯಾಚರಣೆ ಮುಂದುವರಿಸಲು ಅನುವು ಮಾಡಿಕೊಡುತ್ತದೆ. ವರದಿಯ ಪ್ರಕಾರ, ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ, ಈ ಸೈಬರ್ ಅಪರಾಧದ ಬಗ್ಗೆ ಹೆಚ್ಚುತ್ತಿರುವ ಎಚ್ಚರಿಕೆಯನ್ನು ಈ ಬಗ್ಗೆ ನೋಡಬಹುದಾಗಿದೆ. ಆದರೆ, ಫೇಸ್‌ಬುಕ್‌ನಲ್ಲಿ ಇಂತಹ ಸಂದೇಶಗಳ ಪುನರಾವರ್ತನೆಯು ಪ್ಲಾಟ್‌ಫಾರ್ಮ್ ಅನ್ನು ಬಳಸುವ ದೊಡ್ಡ ವಂಚಕ ಜಾಲವನ್ನು ಸೂಚಿಸುತ್ತದೆ.

ಇದು ಬೆಂಗಳೂರಿನ 'ಬಿಲಿಯನೇರ್‌ ಸ್ಟ್ರೀಟ್‌', 67.5 ಕೋಟಿಗೆ ಸೇಲ್‌ ಆಗಿದೆ ಇಲ್ಲಿನ ಒಂದು ಸೈಟ್‌!

click me!