ಕೊನೆಗೂ ಬಲೆಗೆ ಬಿದ್ದ ಟಿಕ್ ಟಾಕ್ ಆಂಟಿ/ ಡಿಜಿ ಹಳ್ಳಿ ಪೊಲೀಸರ ಕಾರ್ಯಾಚರಣೆ/ ವಂಚನೆ ಆರೋಪದಡಿ ಮಹಿಳೆ ಬಂಧನ
ಬೆಂಗಳೂರು(ಡಿ. 10) ಅಂತೂ ಇಂತು ಟಿಕ್ ಟಾಕ್ ಸುಂದರಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ವಿಜಯ ಲಕ್ಷ್ಮಿ ಅಲಿಯಾಸ್ ಲಯನ್ ಲಕ್ಷ್ಮಿಯನ್ನು ಬಂಧಿಸಲಾಗಿದೆ.
ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸರು ಲಕ್ಷ್ಮೀಯನ್ನು ಬಂಧಿಸಿದ್ದಾರೆ. ಟಿಕ್ ಟಾಕ್ ಮೂಲಕ ಶಿವಕುಮಾರ್ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆ ಮದುವೆ ಆಗೋದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಳು ಎಂಬ ಆರೋಪ ಎದುರಿಸುತ್ತಿದ್ದಳು.
ಟಿಕ್ ಟಾಕ್ ಆಂಟಿಯ ಇನ್ನೊಂದು ಮುಖ.. ನಯವಾಗಿ ಮಾತಾಡ್ತಾಳೆ
ಹಣ ವಾಪಸ್ಸು ನೀಡದೇ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಹಾಕಿಸಿದ್ದ ಬಗ್ಗೆಯೂ ದೂರು ದಾಖಲಾಗಿತ್ತು. ಡಿಜೆ ಹಳ್ಳಿ ಪೊಲೀಸ್ ದೂರು ಮೋಸಹೋದ ಯುವಕ ದೂರು ನೀಡಿದ್ದ.
ಮೊದಲು ವರದಿ ಪ್ರಸಾರ ಮಾಡಿದ್ದು ಸುವರ್ಣ ನ್ಯೂಸ್: ಈ ಕುರಿತು ಮೊಟ್ಟ ಮೊದಲು ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಲಯನ್ ಲಕ್ಷ್ಮಿ ಕಳ್ಳಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು.