ಸಿಮ್ ಹ್ಯಾಕ್ ಮಾಡಿ 30 ನಿಮಿಷದಲ್ಲಿ 45 ಲಕ್ಷ ಎಗರಿಸಿದ್ರು..ಬೆಂಗಳೂರು ದಂಪತಿ ಮೋಸಹೋಗಿದ್ದೇಗೆ?

By Suvarna NewsFirst Published Jan 9, 2020, 4:57 PM IST
Highlights

ಸಿಮ್ ಹ್ಯಾಕ್ ಮಾಡಿ 45.7 ಲಕ್ಷ ರೂ. ಎಗರಿಸಿದ್ರು/ ಖಾತೆಯಿಂದ ಹಣ ಹೋಗಿದ್ದು ಗೊತ್ತೆ ಆಗ್ಲಿಲ್ಲ? ವಿಜಯನಗರದ ದಂಪತಿಗೆ ಮಹಾಮೋಸ

ಬೆಂಗಳೂರು[ಜ. 08]  ಸಿಮ್ ಹ್ಯಾಕ್ ಮಾಡಿ ಅಕೌಂಟ್ ನಿಂದ 45.7 ಲಕ್ಷ ಡ್ರಾ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಹಜವಾಗಿಯೇ ಆಲ್ ಲೈನ್ ವ್ಯವಹಾರ ಮಾಡುವವವರಿಗೆ ಇದು ಒಂದು ಆತಂಕದ ಘಂಟೆ ಬಾರಿಸಿದೆ.

ಬೆಂಗಳೂರಿನ ವಿಜಯನಗರದ  ಜಗದೀಶ್ ಹಾಗ ಅವರ ಪತ್ನಿ ಮಂಗಳಾ ವಂಚನೆಗೆ ಒಳಗಾಗಿದ್ದಾರೆ.  ಕಳೆದ ಶನಿವಾರ ಜಗದೀಶ್ ಸಿಮ್ ವರ್ಕ್ ಆಗುತ್ತಿರಲಿಲ್ಲ. ಏರ್ ಟೆಲ್  ಸಂಸ್ಥೆಗೆ ಕರೆ ಮಾಡಿದಾಗ ಸರಿ ಹೋಗಿದೆ. ಈ ವೇಳೆ ಕರೆಂಟ್ ಅಕೌಂಟ್ ನಿಂದ 45.7 ಲಕ್ಷ ಹಣ ಹಂತ ಹಂತವಾಗಿ ಮೂರು ಬಾರಿ ಕಟ್ ಆಗಿದೆ.

ಕೂಡಲೇ ದಂಪತಿ ಕಂಪ್ಲೇಟ್ ನೀಡಿದ್ದಾರೆ. ಶನಿವಾರ ಜಗದೀಶ್ ಸಿಮ್ ವರ್ಕ್ ಆಗದ ಕಾರಣ ಜಗದೀಶ್ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಗ್ರಾಹಕ ಸೇವಾ ಸಿಬ್ಬಂದಿ ಹೊಸ ಸಿಮ್ ತೆಗೆದುಕೊಳ್ಳಲು ತಿಳಿಸಿದ್ದಾರೆ.

ಅನಾಮಧೇಯ ಪತ್ರದಿಂದ ಬಯಲಾಯ್ತು ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಆದರೆ ಹೊಸ ಕಂಪನಿಗೆ ಸಂಬಂಧಪಟ್ಟ ದಾಖಲೆ ಇದ್ದ ಕಾರಣ ಅದೇ ನಂಬರ್ ಗೆ ಸಿಮ್ ಕೇಳಿದ್ದಾರೆ ತೆಗೆದುಕೊಂಡು 6 ಗಂಟೆಯಾದರೂ ಆ್ಯಕ್ಟಿವೇಟ್ ಆಗಿರಲಿಲ್ಲ. ಇದಾದ ಬಳಿಕ ಆ್ಯಕ್ಟಿವೇಟ್ ಆಗಿದೆ. ಕೂಡಲೇ ಬ್ಯಾಂಕ್ ನಂಬರ್ ಸಿಂಕ್ ಮಾಡಲು ಹೋದಾಗ ಪಾಸ್ ವರ್ಡ್ ಐಡಿ ಚೇಂಜ್ ಆಗಿದೆ. ಪಾಸ್ ವರ್ಡ್ ಕೇವಲ ಮಂಗಳ ಹಾಗೂ ಜಗದೀಶ್ ಗೆ ಮಾತ್ರ ತಿಳಿದಿತ್ತು.

ಆದರೆ ಸಿಸ್ಟಮ್ ಮೂಲಕ ಈ ಮೇಲ್ ಹ್ಯಾಕ್ ಮಾಡಿ ಸಿಮ್ ಹ್ಯಾಕ್ ಮಾಡಿರುವ ಆರೋಪಿಗಳು ಈ ಮೇಲ್ ಮೂಲಕ ಕೆಲ ದಾಖಲೆಗಳನ್ನ ತೆಗೆದುಕೊಂಡು ಸಿಮ್ ಹ್ಯಾಕ್ ಮಾಡಿದ್ದಾರೆ. ಸದ್ಯ ಸೈಬರ್ ಫ್ರಾಡ್ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಅಪರಾಧ ಸುದ್ದಿಗಳಿಗೆ

click me!