
ಬೆಂಗಳೂರು(ಡಿ.4): ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಮದುವೆಯಾದ ಕೇವಲ ಮೂರೇ ತಿಂಗಳಿಗೆ ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವರದಕ್ಷಿಣೆ, ಗಂಡನ ಮನೆಯ ಕಿರುಕುಳದಿಂದಲೇ ಮಗಳು ಸಾವಿಗೆ ಶರಣಾಗಿದ್ದಾಳೆ, ಇದು ಆತ್ಮ೧ಹತ್ಯೆ ಅಲ್ಲ, ಕೊಲೆ ಎಂದು ಮೃತಳ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಮಾನ್ ನಗರದಲ್ಲಿ ಸಂಜೆ 5:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಅಮೂಲ್ಯ (23) ನೇಣಿಗೆ ಕೊರಳೊಡ್ಡಿದ ನವವಿವಾಹಿತೆ. ಪತಿ ಅಭಿಷೇಕ್ (30) ಕೊಲೆ ಮಾಡಿದ್ದಾನೆಂದು ಆರೋಪಿಸಲಾಗಿದೆ. ಮೃತ ಅಮೂಲ್ಯ, ಅಭಿಷೇಕ್‌ನೊಂದಿಗೆ ಮದುವೆಯಾಗಿ ಇಂದಿಗೆ ಸರಿಯಾಗಿ ಮೂರು ತಿಂಗಳು ಪೂರ್ಣಗೊಂಡಿತ್ತು.
ಅಕ್ಕಪಕ್ಕದ ಏರಿಯಾದವರಾಗಿದ್ದ ಅಮೂಲ್ಯ ಮತ್ತು ಅಭಿಷೇಕ್ ಪರಸ್ಪರ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ಮೂರನೇ ತಿಂಗಳ ಸಂಭ್ರಮದ ದಿನವೇ ಈ ಘಟನೆ ನಡೆದಿದೆ. ಪತಿ ಅಭಿಷೇಕ್, ಪತ್ನಿಯನ್ನು ಊಟಕ್ಕೆ ಹೊರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರೂ, ಕ್ಷುಲ್ಲಕ ಕಾರಣಕ್ಕೆ ಅಮೂಲ್ಯ ಆತ್ಮ೧ಹತ್ಯೆ ಮಾಡಿಕೊಂಡಿರಬಹುದು ಎಂದು ಆರಂಭಿಕವಾಗಿ ಶಂಕೆ ವ್ಯಕ್ತಪಡಿಸಲಾಗಿತ್ತು.
ಆದರೆ, ಮೃತ ಅಮೂಲ್ಯ ಅವರ ತಾಯಿ ಸುನೀತಾ ಅವರು ಇದು ಆತ್ಮ೧ಹತ್ಯೆ ಅಲ್ಲ, ಕೊಲೆ ಎಂದು ಆರೋಪಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ನನ್ನ ಮಗಳನ್ನು ಅವಳ ಗಂಡನೇ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ. ಗಂಡ ಅಭಿಷೇಕ್‌ಗೆ ಅನುಮಾನ ಇತ್ತು, ಯಾರ ಜೊತೆಗೂ ಮಾತಾಡೋಕೆ ಬಿಡ್ತಿರಲಿಲ್ಲ. ಅಷ್ಟೇ ಅಲ್ಲ, ಅವರ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡ್ತಿದ್ರು. 'ಆಡುಗೆ ಮಾಡೋಕೆ ಬರಲ್ಲ, ಪ್ರೀತಿಸಿ ಮದುವೆಯಾಗಿದ್ದಾಳೆ' ಅಂತಾ ಬೈತಿದ್ರು. ಅವರ ಕುಟುಂಬಸ್ಥರ ಕಿರುಕುಳದಿಂದಲೇ ನನ್ನ ಮಗಳ ಸಾವಾಗಿದೆ ಎಂದು ಸುನೀತಾ ಗಂಭೀರ ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲು:
ಸದ್ಯ ಅಮೂಲ್ಯ ಅವರ ಕುಟುಂಬಸ್ಥರ ದೂರಿನ ಮೇರೆಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಮೂಲ್ಯ ಸಾವಿನ ಕುರಿತು ಹೆಚ್ಚಿನ ವಿಚಾರಣೆಗಾಗಿ ಪತಿ ಅಭಿಷೇಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಮೂಲ್ಯ ಅವರದ್ದು ಆತ್ಮ೧ಹತ್ಯೆಯೇ ಅಥವಾ ಕೊಲೆಯೆ ಎಂಬ ಸತ್ಯಾಂಶ ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ