Bengaluru Breaking: ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ: ಓರ್ವ ಸಾವು- ಇಬ್ಬರ ಸ್ಥಿತಿ ಗಂಭೀರ

Published : Mar 23, 2023, 07:32 PM ISTUpdated : Mar 23, 2023, 08:26 PM IST
Bengaluru Breaking: ಮೆಜೆಸ್ಟಿಕ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ: ಓರ್ವ ಸಾವು- ಇಬ್ಬರ ಸ್ಥಿತಿ ಗಂಭೀರ

ಸಾರಾಂಶ

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಮಾದಕ ವ್ಯಸನಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಾಗೂ ಸುಮ್ಮನೆ ಕುಳಿತುಕೊಂಡಿದ್ದವರಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿದ್ದಾನೆ. ಘಟನೆಸರಣಿ

ಬೆಂಗಳೂರು (ಮಾ.23): ಇಂದು ಸಂಜೆ ಮಾದಕ ವ್ಯಸನಿಯೊಬ್ಬ ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಹಾಗೂ ಸುಮ್ಮನೆ ಕುಳಿತುಕೊಂಡಿದ್ದವರಿಗೆ ಚಾಕುವಿನಿಂದ ಇರಿದು ವಿಕೃತಿ ಮೆರೆದಿರುವ ಘಟನೆಸರಣಿ ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್ ಗಣಪತಿ ದೇವಸ್ಥಾನ ಬಳಿ ನಡೆದಿದೆ.

ಸುಮ್ಮನೆ ಕುಳಿತವರಿಗೆ ಚಾಕು ಇರಿತದ ಘಟನೆಯಿಂದ ಪ್ರಯಾಣಿಕರು ಹಾಗೂ ಇತರೆ ಸಾರ್ವಜನಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಗಾಂಜಾ ಸೇವನೆಯ ಮತ್ತಿನಲ್ಲಿ ಇದ್ದ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ (ಸೈಕೋ) ನಡೆದುಕೊಂಡಿದ್ದಾನೆ. ಗಣಪತಿ ದೇವಸ್ಥಾನದ ಬಳಿ ಊರಿಗೆ ಹೋಗಬೇಕೆಮದು ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ಇಬ್ಬರಿಗೆ ಮದ್ಯವ್ಯಸನಿ ವ್ಯಕ್ತಿ ಏಕಾಏಕಿ ಚಾಕು ಇರಿದಿದ್ದಾರೆ. ಇನ್ನು ರಸ್ತೆಯಲ್ಲಿ ಇದ್ದವರು ಚಾಕು ಇರಿಯುವುದನ್ನು ತಡೆಯಲು ಹೋದವರಿಗೂ ಚಾಕು ಇರಿಯುವ ಮೂಲಕ ವಿಕೃತಿಯನ್ನು ಮೆರೆದಿದ್ದಾನೆ.

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

ಘಟನೆ ತಡೆಯಲು ಬಂದವರಿಗೂ ಚಾಕು ಇರಿತ:
ಬೆಂಗಳೂರಿನಲ್ಲಿ ಸದಾ ಜನಜಂಗುಳಿಯಿಂದ ತುಂಬಿರುವ ಸ್ಥಳವಾದ ಮೆಜೆಸ್ಟಿಕ್ ಬಳಿಯೇ ಇರುವ ಗಣಪತಿ ದೇವಸ್ಥಾನದ ಕಟ್ಟೆಯ ಬಳಿ ದುರ್ಘಟನೆ ಸಂಭವಿಸಿದೆ. ಇಂದು ಸಂಜೆ 6.15ರ ಸುಮಾರಿಗೆ ಗಾಂಜಾ ಸೇವಿಸಿದ ವ್ಯಕ್ತಿ ಚಾಕುವಿನಿಂದ ಇರಿದಿದ್ದಾನೆ. ಗಾಂಜಾ ಮತ್ತೇರಿಸಿಕೊಂಡು ಚಾಕು ಹಿಡಿದುಕೊಂಡು ಬಂದು ಕಟ್ಟೆಯ ಮೇಲೆ ಕುಳಿತಿದ್ದವರಿಗೆ ಚುಚ್ಚಿದ್ದಾನೆ. ಈ ಘಟನೆಯಿಂದ ಬೆಚ್ಚಿಬಿದ್ದ ಜನರು ಘಟನೆ ನಡೆಯುವ ಸ್ಥಳದಿಂದ ದೂರ ಓಡಿ ಹೋಗಿದ್ದಾರೆ. ಇನ್ನು ತನ್ನ ಹತ್ತಿರ ಯಾರೊಬ್ಬರೂ ಬರದಂತೆ ಚಾಕು ತೋರಿಸಿ ಬೆದರಿಕೆ ಒಡ್ಡಿದ್ದಾನೆ. ಈ ವೇಳೆ ಚಾಕು ಇರಿತವನ್ನು ತಡೆಯಲು ಮುಂದಾದ ವ್ಯಕ್ತಿಗೂ ಕೂಡ ಚಾಕುವಿನಿಂದ ಚುಚ್ಚಿದ್ದಾನೆ. 

ಮೂವರು ಗಾಯಾಳುಗಳು ಆಸ್ಪತ್ರೆಗೆ ದಾಖಲು:
ಇನ್ನು ಚಾಕು ಇರಿತದ ಘಟನೆಯಿಂದ ಒಟ್ಟು ಮೂವರಿಗೆ ಗಂಭೀರ ಗಾಯಗಳಾಗಿವೆ. ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ಇಬ್ಬರ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಸುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ನಟ ಚೇತನ್‌ಗೆ ಜಾಮೀನು ನೀಡಿದ ಕೋರ್ಟ್‌: ಬೆಂಗಳೂರು (ಮಾ.23): ಕಳೆದ ಎರಡು ದಿನಗಳ ಹಿಂದೆ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿಕೊಂಡಿದ್ದ ನಟ ಚೇತನ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ, ಇಂದು 32ನೇ ಮೆಟ್ರೋ ಪಾಲಿಟಿನ್ ನ್ಯಾಯಾಲಯ ನಟ ಚೇತನ್‌ ಅವರಿಗೆ ಈಗ ಜಾಮೀನು ನೀಡಿದೆ.

Kodagu: ಬೆರಳಿಗೆ ಹಾಕಿದ್ದ ಉಂಗುರ ನುಂಗಿ ಸಾವನ್ನಪ್ಪಿದ 8 ತಿಂಗಳ ಮಗು: ಪಾಲಕರ ಆಕ್ರಂದನ

25 ಸಾವಿರ ರೂ. ಬಾಂಡ್ ಮತ್ತು ಒಬ್ಬರ ಭದ್ರತೆ: ಕಳೆದ ಎರಡು ದಿನಗಳ ಹಿಂದೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ನಟ ಚೇತನ್ ಗೆ 32ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.  ಇನ್ನು ಜಾಮೀನು ಪಡೆಯುವ ಮುನ್ನ 25 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಒಬ್ಬರ ಭದ್ರತೆ ನೀಡುವಂತೆ ನ್ಯಾಯಾಧೀಶೆ ಲತಾ ಅವರು ಆದೇಶಿಸಿದ್ದಾರೆ. ಈ ಮೂಲಕ ಎರಡು ದಿನಗಳ ಕಾಲ ಜೈಲು ವಾಸವನ್ನು ಅನುಭವಿಸಿದ್ದ ನಟ ಚೇತನ್‌ ಇಂದು ಹೊರಗೆ ಬಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ