
ಬೆಂಗಳೂರು (ಮೇ.16): ಮನೆಯಲ್ಲಿ ಕಳ್ಳತನ ಆಗುತ್ತೆ ಅಂತಾ ಗ್ರಾಹಕರು ಸುರಕ್ಷಿತವೆಂದು ಬ್ಯಾಂಕ್ ಲಾಕರ್ ಬಳಸಿದ್ರು. ಆದರೆ ಇದೇ ಬ್ಯಾಂಕ್‌ನ ಸಿಬ್ಬಂದಿಯೇ ಲಾಕರ್ ಕೀ ಬಳಸಿ ಚಿನ್ನ ಕದ್ದಿದ್ದಾರೆ ಎನ್ನುವುದು ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಹೌದು! ಬೆಂಗಳೂರು ಬಸವೇಶ್ವರ ನಗರದ ಖಾಸಗಿ ಬ್ಯಾಂಕ್‌ವೊಂದರಲ್ಲಿ ನಡೆದ ಈ ಚಿನ್ನದ ಕಳ್ಳತನ ನಿಜಕ್ಕೂ ಬೇಲಿಯೇ ಹೊಲ ಮೆಯ್ದ ಕಥೆ ಅಂತಲೇ ಹೇಳಬೇಕು. ಬ್ಯಾಂಕ್‌ನ ಮಹಿಳಾ ಸಿಬ್ಬಂದಿ ಐಶ್ವರ್ಯ ಮತ್ತು ಆಕೆಯ ಗೆಳೆಯ ಹರ್ಷಿತ್, ಲಾಕರ್‌ನ ಮಾಸ್ಟರ್ ಕೀ ಬಳಸಿ ಗ್ರಾಹಕರಿಗೆ ಗೊತ್ತಾಗದಂತೆ 170 ಗ್ರಾಂ ಚಿನ್ನಾಭರಣ ಕದ್ದಿದ್ದಾರೆ. ಇದರ ಮೌಲ್ಯ ಸುಮಾರು ₹16 ಲಕ್ಷ.! ಈ ಚಿನ್ನ ಮಾರಾಟ ಮಾಡಿ ಇಬ್ಬರೂ ತಮ್ಮ ಸಾಲ ತೀರಿಸಿದ್ದರೆಂಬ ಮಾಹಿತಿಯೂ ಸಿಕ್ಕಿದೆ.
ಮಾರ್ಚ್ 20ರಂದು ಗ್ರಾಹಕರೊಬ್ಬರು ತಮ್ಮ ಲಾಕರ್ ತೆರೆಯುತ್ತಿದ್ದಾಗ ಚಿನ್ನಾಭರಣ ಮಾಯವಾಗಿದೆ ಎಂಬುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಲಿಸರಿಗೆ ದೂರು ನೀಡಲಾಗಿದ್ದು, ತನಿಖೆ ಆರಂಭವಾಗಿದೆ. ಲಾಕರ್ ರೂಮ್‌ಗೆ ಪ್ರವೇಶ ಹೊಂದಿದ್ದ ಐಶ್ವರ್ಯ ಸೇರಿದಂತೆ ಕೆಲವೇ ಕೆಲ ಸಿಬ್ಬಂದಿಗೆ ಮಾತ್ರ ಆಕ್ಸೆಸ್ ಇತ್ತು. ಈ ಮೂಲದಲ್ಲಿ ತನಿಖೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿ ಸ್ನೇಹಿತನ ಕಳ್ಳಾಟ ಬಯಲಾಗಿದೆ. ಸದ್ಯ ಬ್ಯಾಂಕ್ ಸಿಬ್ಬಂದಿ ಐಶ್ವರ್ಯ, ಹರ್ಷಿತ್ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದು, ಆರೋಪಿಗಳಿಂದ 16 ಲಕ್ಷ ಮೌಲ್ಯದ 170 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆನಂದ್ ಗುರೂಜಿಗೆ ಬ್ಲ್ಯಾಕ್ಮೇಲ್ ಮಾಡಿದ್ಲಾ ದಿವ್ಯಾ ವಸಂತ? ಅವರ ವಿಡಿಯೋ ಇವಳ ಬಳಿ ಇದ್ಯಾ?
ಕೆಲಸಕ್ಕಿದ್ದ ಮನೆಯಲ್ಲೇ ಚಿನ್ನ ಕದಿಯುತ್ತಿದ್ದವರ ಬಂಧನ: ಮನೆಗಳಲ್ಲಿ ಕೆಲಸ ಮಾಡುವುದಾಗಿ ಕೈ ಚಳಕ ತೋರಿಸಿದ್ದ ಮನೆಕೆಲಸದಾಳುಗಳನ್ನು ಎಚ್ಎಸ್‌ಆರ್ ಲೇಔಟ್, ಗಿರಿನಗರ ಹಾಗೂ ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಫ್ಟ್‌ವೇರ್ ದಂಪತಿಯ ಮಗು ಪಾಲನೆಗೆ ಕೆಲಸಕ್ಕೆ ಬಂದು ಚಿನ್ನಾಭರಣ ಕದ್ದು ಈಗ ಮಹಿಳೆಯೊಬ್ಬರು ಜೈಲು ಸೇರಿದ್ದಾರೆ. ವಿಭೂತಿಪುರದ ವರಲಕ್ಷ್ಮೀ ಸೆರೆಯಾಗಿದ್ದು, ಆಕೆಯಿಂದ 12 ಲಕ್ಷ ರು. ಮೌಲ್ಯದ 128 ಗ್ರಾಂ ತೂಕದ ಚಿನ್ನ ಜಪ್ತಿ ಮಾಡಲಾಗಿದೆ. ಬಸವನಗರದಲ್ಲಿ ಟೆಕ್ಕಿ ಪ್ರಕಾಶ್ ದಂಪತಿ ನೆಲೆಸಿದೆ. ತಮ್ಮ ನವಜಾತ ಶಿಶು ಪಾಲನೆಗೆ ವರಲಕ್ಷ್ಮೀ ಳನ್ನು ಅವರು ನೇಮಿಸಿಕೊಂಡಿದ್ದರು.
ಮನೆಗೆ ಕರೆದು ಗುತ್ತಿಗೆದಾರ ಸಂಪತ್‌ಗೆ ಮುಹೂರ್ತ ಇಟ್ರು? ಹಣ ವಾಪಸ್ ಕೇಳಿದ್ದಕ್ಕೆ ಕತ್ತಿ ಬೀಸಿದ್ರಾ ಪಾಪಿಗಳು!
ಅಂತೆಯೇ ಮಗುವಿಗೆ ಸ್ನಾನ ಮಾಡಿಸಲು ವರಲಕ್ಷ್ಮೀ ಬರುತ್ತಿದ್ದಳು. ಇತ್ತೀಚೆಗೆ ತಮ್ಮ ಹೊಸ ಕಾರಿನ ಪೂಜೆ ಮಾಡಿಸಲು ಪ್ರಕಾಶ್ ದಂಪತಿ ದೇವಾಲಯಕ್ಕೆ ತೆರಳಿದ್ದರು. ಹಾಗಾಗಿ ಅಂದು ಕೆಲಸಕ್ಕೆ ಬರುವುದು ಬೇಡ ಎಂದು ಕೆಲಸದಾಕೆಗೆ ಅವರು ಹೇಳಿದ್ದರು. ಆದರೆ ಮನೆ ಮಾಲಿಕರು ಹೊರ ಹೋಗಿದ್ದನ್ನು ತಿಳಿದು ವರಲಕ್ಷ್ಮೀ, ಟೆಕ್ಕಿ ಮನೆ ಬಂದು ಆಭರಣ ಕಳವು ಮಾಡಿದ್ದಳು. ಮರು ದಿನ ಆಭರಣ ಕಳವು ಮನೆ ಮಾಲಿಕರಿಗೆ ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ ಕೃತ್ಯ ನಡೆದ ದಿನ ಮನೆಕೆಲಸದಾಳು ಬಂದಿದ್ದನ್ನು ಪಕ್ಕದ ಮನೆಯ ಮಗು ಹೇಳಿತ್ತು. ಈ ಮಾಹಿತಿ ಆಧರಿಸಿ ಶಂಕೆ ಮೇರೆಗೆ ವರಲಕ್ಷ್ಮೀಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ