Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ

Published : Apr 04, 2024, 05:05 PM IST
Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ

ಸಾರಾಂಶ

ಆಟೋ ಚಾರ್ಜ್‌ ಕೊಡದೇ ವಂಚನೆ ಮಾಡಿ ಹೋಗಿದ್ದ ಮುಸ್ಲಿಂ ಯುವತಿಯನ್ನು ಪುನಃ ಆಟೋಗೆ ಹತ್ತಿಸಿಕೊಂಡು ನಿರ್ಮಾಣ ಹಂತದ ಕಟ್ಟಡದೊಳಗೆ ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ ದುರ್ಘಟನೆ ಶಾಂತಿ ನಗರದಲ್ಲಿ ನಡೆದಿದೆ.

ಬೆಂಗಳೂರು (ಏ.04): ಕಳೆದ ಮೂರು ದಿನಗಳ ಹಿಂದೆಯೂ ಸಂಪಂಗಿರಾಮ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರ ಸಮೀಪ ಅಪರಿಚಿತ ಯುವತಿಯ ಶವ ಪತ್ತೆಯಾದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಈ ಪ್ರಕರಣ ಭೇಧಿಸಿದ ಪೊಲೀಸರಿಗೆ ಆಟೋಗಾಗಿ ಕಾಯುತ್ತಿದ್ದ ಯುವತಿಯನ್ನು ಪಿಕ್ ಮಾಡಿದ್ದ ಆಟೋ ಚಾಲಕನೇ ನಿರ್ಮಾಣ ಹಂತದ ಕಟ್ಟದೊಳಗೆ ಎತ್ತಿಕೊಂಡು ಹೋಗಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಕೊಲೆ ಮಾಡಿದ ವ್ಯಕ್ತಿ ಮುಬಾರಕ್ ಆಗಿದ್ದಾನೆ. ಈತ ಬೆಂಗಳೂರಿನ ಸುಲ್ತಾನ್ ಪಾಳ್ಯದ ನಿವಾಸಿಯಾಗಿದ್ದು, ಹಗಲಿನಲ್ಲಿ ಎಳನೀರು ವ್ಯಾಪಾರ ಮಾಡಿದರೆ ರಾತ್ರಿ ವೇಳೆ ಆಟೋ ಓಡಿಸುತ್ತಿದ್ದನು. ಆದರೆ, ಫೆ.18ರಂದು ಮಧ್ಯಾಹ್ನ ರಾಯನ್ ಸರ್ಕಲ್ ಬಳಿ ಯುವತಿಯನ್ನು ತನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾನೆ. ಉರ್ದುವಿನಲ್ಲೇ ಮಾತನಾಡುತ್ತಿದ್ದ ಯುವತಿ ತನ್ನನ್ನು ದರ್ಗಾ ಬಳಿ ಬಿಡುವಂತೆ ಹೇಳಿದ್ದಳು. ಆರೋಪಿ ಕಾಟನ್ ಪೇಟೆ ದರ್ಗಾ ಸಮೀಪ ಬಿಟ್ಟಿದ್ದಾನೆ.

ಆಗ ಯುವತಿ ಈ ದರ್ಗಾ ಅಲ್ಲ, ಮತ್ತೊಂದು ದರ್ಗಾ ಎಂದು ಹೇಳಿ ಮಾರ್ಕೆಟ್, ಚಾಮರಾಜಪೇಟೆ ಹಾಗೂ ಸಂಪಗಿರಾಮನಗರದಲ್ಲಿರುವ ದರ್ಗಾಗಳ ಬಳಿ ಡ್ರಾಪ್ ತೆಗೆದುಕೊಂಡರೂ ತಾನು ಇಳಿಯುವ ಸ್ಥಳ ಇದಲ್ಲ ಎಂದಿದ್ದಳು. ನಂತರ, ಶಾಂತಿನಗರದ ಸಿಗ್ನಲ್ ಸಮೀಪ ಬರುವಾಗ ಏಕಾಏಕಿ ಆಟೊದಿಂದ ಕೆಳಗಿಳಿದು ಹಣ ನೀಡದೇ ವಂಚಿಸಿದ್ದಳು.

ಬೆಂಗಳೂರು: ರಾಯಚೂರಿನಿಂದ ಕೆಲಸಕ್ಕೆ ಬಂದ ಮಹಿಳೆ ಹೊತ್ತೊಯ್ದು ಅತ್ಯಾಚಾರವೆಸಗಿ ಕೊಲೆ

ಇದೇ ಯುವತಿ ಫೆ.19ರಂದು ರಾತ್ರಿ ಕೆ.ಆರ್.ಮಾರ್ಕೆಟ್ ಸಮೀಪ ಮತ್ತೆ ಆಟೋ ಚಾಲಕ ಮುಬಾರಕ್‌ಗೆ ಸಿಕ್ಕಿದ್ದಾಳೆ. ಆಗಲೂ ಯುವತಿ ತಾನು ದರ್ಗಾದ ಕಡೆ ಹೋಗಬೇಕು ಎಂದಿದ್ದಕ್ಕೆ ಒಲ್ಲೆ ಎಂದಿದ್ದಾನೆ. ಆಗ, ಈತನೇ ಈಕೆ ಹಣ ಕೊಡದೇ ವಂಚನೆ ಮಾಡಿದ್ದಾಳೆ ಎಂದು ಅಲ್ಲಿದ್ದ ಎಲ್ಲ ಆಟೋ ಚಾಲಕರಿಗೆ ತಿಳಿಸಿದ್ದನು. ಇದರಿಂದ ಬೇರೆ ಯಾವುದೇ ಆಟೋ ಚಾಲಕರು ಈಕೆಯನ್ನು ಹತ್ತಿಸಿಕೊಳ್ಳಲು ಹಿಂಜರಿದಿದ್ದರು. ಕೆಲ ಹೊತ್ತಿನ ಬಳಿಕ ಆರೋಪಿ ಮುಬಾರಕ್‌ ಆಕೆಯನ್ನು ಪಿಕ್‌ ಮಾಡಿಕೊಂಡಿದ್ದಾನೆ.

ಅನೈತಿಕ ಸಂಬಂಧ ರಟ್ಟಾಗುತ್ತಿದ್ದಂತೆ ವಿದ್ಯುತ್ ಕಂಬ ಹತ್ತಿದ ಪತ್ನಿ, ಹೈಡ್ರಾಮಕ್ಕೆ ಗ್ರಾಮಸ್ಥರು ಸುಸ್ತು!

ಕೆ.ಆರ್. ಮಾರುಕಟ್ಟೆ ಬಳಿ ರಾತ್ರಿ 11.30ಕ್ಕೆ ಯುವತಿಯನ್ನು ಆಟೋಗೆ ಹತ್ತಿಸಿಕೊಂಡು ಬೆಳಗಿನ ಜಾವ 3 ಗಂಟೆವರೆಗೆ ಸುತ್ತಾಡಿಸಿದ್ದನು. ನಿದ್ರೆ ಮಂಪರಿನಲ್ಲಿದ್ದ ಯುವತಿಯನ್ನು ಶಾಂತಿನಗರದ ಡಬಲ್ ರೋಡ್‌ನ ನಿರ್ಮಾಣ ಹಂತದ ಕಟ್ಟಡಕ್ಕೆ ಎತ್ತಿಕೊಂಡು ಹೋಗಿದ್ದಾನೆ. ಅಲ್ಲಿ ಮೊದಲ ಮಹಡಿಯಲ್ಲಿ ಯುವತಿ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಬಿಡದೇ ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ನಂತರ, ಯುವತಿ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದರಿಂದ ಆತಂಕಗೊಂಡು ಆಕೆಯನ್ನು ಕಟ್ಟಡದ ಮೇಲಂತಿಸ್ತಿಗೆ ಕರೆದೊಯ್ದು ತಳ್ಳಿ ಸಾಯಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಂಪಂಗಿರಾಮ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!