ಬ್ಯೂಟಿಷಿಯನ್ ಯುವತಿಗೆ ಖಾಸಗಿ ಅಂಗ ತೋರಿಸಿದ ಆಟೋ ಚಾಲಕ!

By Sathish Kumar KH  |  First Published Sep 27, 2024, 6:18 PM IST

ಬೆಂಗಳೂರಿನ ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕನೋರ್ವ ತನ್ನ ಖಾಸಗಿ ಭಾಗವನ್ನು ತೋರಿಸಿ ಲೈಂಗಿಕ ಚೇಷ್ಟೆ ನಡೆಸಿದ್ದಾನೆ. ಈ ಘಟನೆ ಹಾಡು ಹಗಲೇ ನಡೆದಿದ್ದು, ಯುವತಿ ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.


ಬೆಂಗಳೂರು (ಸೆ.27): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಕೃತ ಕಾಮಿಗಳ ಸಂಖ್ಯೆ ಹೆಚ್ಚಾಗಿತ್ತಿದೆ. ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕ ತನ್ನ ಖಾಸಗಿ ಭಾಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ.

ಇತ್ತೀಚೆಗೆ ಕಬ್ಬನ್ ಪಾರ್ಕ್‌ನಲ್ಲೊಬ್ಬ, ಜಯನಗರದ ಮಹಿಳಾ ಕಾಲೇಜಿನ ಬಳಿ ಒಬ್ಬ ಇದೀಗ ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್ ಬಳಿ ಒಬ್ಬ ತಮ್ಮ ಖಾಸಗಿ ಅಂಗಾಂಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ. ಮೂರೂ ಪ್ರಕರಣಗಳು ಒಂದೇ ಆಗಿದ್ದರೂ, ಈ ಪ್ರಕರಣದಲ್ಲಿ ಆಟೋ ಚಾಲಕ ಒಬ್ಬ ಯುವತಿಯನ್ನು ಮಾತ್ರ ಗುರಿಯಾಗಿಸಿಕೊಂಡು, ಆಕೆಯ ಹಿಂದೆ ಬಿದ್ದು ಹೀಗೆ ಖಾಸಗಿ ಅಂಗಾಂಗ ತೋರಿಸಿರುವುದು ಬೆಳಕಿಗೆ ಬಂದಿದೆ. ಅದೂ ಕೂಡ ಹಾಡ ಹಗಲೇ ತೀರಾ ವಿಕೃತಿಯ ರೀತಿಯಲ್ಲಿ ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.

Tap to resize

Latest Videos

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ಆದ್ರೂ ಸಮಾಧಾನವಾಗದ ಸ್ನೇಹಮಯಿ ಕೃಷ್ಣ: ಸಿಬಿಐಗೆ ವಹಿಸಲು ಅರ್ಜಿ ಸಲ್ಲಿಕೆ!

ಆಟೋ ಚಾಲಕನ ಲೈಂಗಿಕ ಚೇಷ್ಟೆಗೆ ಬ್ಯೂಟಿಷಿಯನ್ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಅದು ಕೂಡ ಈತ ಒಂದು ಬಾರಿಯಾದರೆ ನೋಡಿಯೂ ನೋಡದಂತೆ ಸುಮ್ಮನಿದ್ದುಬಿಡಬಹುದು. ಆದರೆ, ಎರಡೆರಡು ಬಾರಿ ಅದೇ ಯುವತಿಯನ್ನು ಟಾರ್ಗೆಟ್ ಮಾಡಿಕೊಂಡು ಬಂದು ಹೀಗೆ ವರ್ತಿಸಿದ್ದಾರೆ. ಈ ಘಟನೆ ರಾಜಾಜಿನಗರದಲ್ಲಿ ನಡೆದಿದೆ. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಎಲ್ಲ ಚಟುವಟಿಕೆಗಳನ್ನು ಈತ ಗಮನಿಸಿದ್ದಾರೆ. ಆಗ ಬ್ಯೂಟಿ ಪಾರ್ಲರ್ ಇರುವ ಸ್ಥಳದಲ್ಲಿ ಜನರು ಇಲ್ಲದ ವೇಳೆ ಈ ಯುವತಿ ತನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗುತ್ತಾಳೆಯೇ ಎಂದು ಗಮನಿಸಿದ್ದಾನೆ.

ಆಗ ಬ್ಯೂಟಿ ಪಾರ್ಲರ್ ಯುವತಿ ಮಧ್ಯಾಹ್ನ ಊಟಕ್ಕೆಂದು ಅನತಿ ದೂರದಲ್ಲಿದ್ದ ಮನೆಗೆ ಹೋಗಿ ಬರುತ್ತಾಳೆ ಎಂಬುದು ಗೊತ್ತಾಗಿದೆ. ಆಗ, ಜನರು ಕೂಡ ರಸ್ತೆಯಲ್ಲಿ ಓಡಾಡುವುದು ಕಡಿಮೆ. ಆದ್ದರಿಂದ ಇದೇ ಸಮಯದಲ್ಲಿ ತನ್ನ ವಿಕೃತಿ ಮೆರೆಯಲು ಮುಂದಾಗಿದ್ದಾನೆ. ಅದರಂತೆ ಮಧ್ಯಾಹ್ನ ರಾಜಾಜಿನಗರದ ಈಸ್ಟ್ ವೆಸ್ಟ್ ಕಾಲೇಜು ಬಳಿ ಬರೋವರೆಗೂ ಬ್ಯೂಟಿ ಪಾರ್ಲರ್ ಯುವತಿಯನ್ನು ಫಾಲೋ ಮಾಡಿಕೊಂಡು ಬಂದಿದ್ದಾನೆ. ನಂತರ, ಯಾರೂ ಇಲ್ಲದ ಸಮಯ ನೋಡಿ ತನ್ನ ಪ್ಯಾಂಟ್ ಜಿಪ್ ಬಿಚ್ಚಿ ಅಸಭ್ಯ ವರ್ತನೆ ಮಾಡಿದ್ದಾನೆ. ಈ ವೇಳೆ ಯುವತಿ ಅಸಹ್ಯದಿಂದ ಕಾಮುಕನ ಮೇಲೆ ಚಪ್ಪಲಿ ಬಿಸಾಡಿದ್ದಾಳೆ.

21 ಸರ್ಕಾರಿ ಶಾಲಾ ಮಕ್ಕಳ ಮೇಲೆ 8 ವರ್ಷಗಳ ಕಾಲ ಬಲತ್ಕಾರ ಮಾಡಿದ್ದ ವಾರ್ಡನ್‌ಗೆ ಗಲ್ಲು

ಆಗ ಅಲ್ಲಿಂದ ಆಟೋದೊಂದಿಗೆ ಅಲ್ಲಿಂದ ಪರಾರಿ ಆಗಿದ್ದನು. ಆದರೆ, ಪುನಃ ಸ್ವಲ್ಪ ದೂರದಲ್ಲಿ ಆಟೋ ನಿಲ್ಲಿಸಿ ಯುವತಿ ಬ್ಯೂಟಿ ಪಾರ್ಲರ್ ಬಳಿಗೆ ನಡೆದುಕೊಂಡು ಹೋಗುವ ಮಾರ್ಗದಲ್ಲಿಯೇ ಆಟೋ ನಿಲ್ಲಿಸಿ ಬಂದಿದ್ದಾನೆ. ಯುವತಿಯ ಮುಂದೆ ಬಂದು ತನ್ನ ಖಾಸಗಿ ಅಂಗಾಂಗವನ್ನು ತೋರಿಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕೂಗಾಡಿದ್ದಾಳೆ. ಯುವತಿ ಕಿರುಚೋದನ್ನ ನೋಡಿ ಸ್ಥಳೀಯರು ಆಗಮಿಸುತ್ತಿದ್ದಂತೆ ವಿಕೃತ ಕಾಮಿ ಆಟೋ ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಸಂಬಂಧ ಅಪರಿಚಿತ ಆಟೋ ಚಾಲಕನ ಮೇಲೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲು ಮಾಡಿದ್ದಾಳೆ.

click me!