ಬೆಂಗಳೂರಿಗೆ ಆಗಮಿಸಿದ ಬಾಂಗ್ಲಾ ಜೋಡಿಗೆ ಆಟೋ ಚಾಲಕನ ವಂಚನೆ, ಕ್ಯಾಮೆರಾದಲ್ಲಿ ಕೈಚಳಕ ಸೆರೆ!

Published : Sep 13, 2023, 03:59 PM IST
ಬೆಂಗಳೂರಿಗೆ ಆಗಮಿಸಿದ ಬಾಂಗ್ಲಾ ಜೋಡಿಗೆ  ಆಟೋ ಚಾಲಕನ ವಂಚನೆ, ಕ್ಯಾಮೆರಾದಲ್ಲಿ ಕೈಚಳಕ ಸೆರೆ!

ಸಾರಾಂಶ

ಬೆಂಗಳೂರು ಪ್ಯಾಲೆಸ್ ನೋಡಲು ಆಟೋ ಹತ್ತಿದ್ದಾರೆ. ಸುತ್ತಾಡಿಸಿಕೊಂಡು ಬಂದ ಆಟೋ ಡ್ರೈವರ್ 320 ರೂಪಾಯಿ ಎಂದಿದ್ದಾನೆ. ಇತ್ತ 500 ರೂಪಾಯಿ ನೋಡು ಕೊಡಲಾಗಿದೆ. ಚೇಂಜ್ ಕೊಡುವ ಬದಲು ಮೆಲ್ಲನೆ ನೋಟು ಬದಲಿ ನಿವು ಕೊಟ್ಟಿದ್ದೇ 100 ರೂಪಾಯಿ ಎಂದು, ಮತ್ತೆ 500 ರೂ ಕಿತ್ತುಕೊಂಡ ಘಟನೆ ನಮ್ಮ ಬೆಂಗಳೂರಿನಲ್ಲೇ ನಡೆದಿದೆ. ನಮ್ಮ ಆಟೋ ಸಾರಥಿಯೊಬ್ಬನ ನಡೆಯಿಂದ ಇಡೀ ಬೆಂಗಳೂರಿಗೆ ಕೆಟ್ಟ ಹೆಸರು ಬಂದಿದೆ.

ಬೆಂಗಳೂರು(ಸೆ.13) ಉದ್ಯಾನ ನಗರಿ ಬೆಂಗಳೂರಿಗೆ  ಪ್ರತಿ ದಿನ ದೇಶ ವಿದೇಶಗಳಿಂದ ಹಲವರು ಆಗಮಿಸುತ್ತಾರೆ. ಪ್ರವಾಸಿಗರು,ಉದ್ಯೋಗ ನಿಮಿತ್ತ, ಕೆಲಸ ಅರಸಿಕೊಂಡು, ಸಭೆ ಸಮಾರಂಭ ಇತ್ಯಾದಿ ಹಲವು ಕಾರಣಗಳಿಂದ ಬೆಂಗಳೂರಿನಲ್ಲಿ ಪ್ರತಿ ದಿನ ಹೊಸಬರು ಕಾಣಿಸಿಕೊಳ್ಳುತ್ತಾರೆ. ಇವರನ್ನೇ ಬಂಡವಾಳ ಮಾಡುವ ಕೆಲವರು ವಂಚಿಸಿ ಇನ್ನೆಂದು ಬೆಂಗಳೂರಿಗೆ ಕಾಲಿಡದಂತೆ ಮಾಡುತ್ತಾರೆ. ಇವುಗಳಲ್ಲಿ ಕೆಲ ಪ್ರಕರಣ ಬೆಳಕಿಗ ಬಂದರೆ, ಹಲವು ಪ್ರಕರಣ ರಹಸ್ಯವಾಗಿ ಉಳಿದುಬಿಡುತ್ತದೆ. ಇದೀಗ ಬಾಂಗ್ಲಾದೇಶದಿಂದ ಜೋಡಿಯೊಂದು ಬೆಂಗಳೂರು ನೋಡಲು ಆಗಮಿಸಿದ್ದಾರೆ. ಈ ಜೋಡಿಗೆ ಬೆಂಗಳೂರಿನ ಆಟೋ ಚಾಲಕ ವಂಚಿಸಿದ್ದಾನೆ. 320 ರೂಪಾಯಿ ಬದಲು ಕೈಚಳಕ ತೋರಿಸಿ 820 ರೂಪಾಯಿ ಕಿತ್ತುಕೊಂಡಿದ್ದಾನೆ. ಆಟೋ ಚಾಲನ ವಂಚನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬಾಂಗ್ಲಾದೇಶದ ಬ್ಲಾಗರ್ ಎಂಡಿ ಫಿಜ್ ತನ್ನ ಗೆಳತಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾನೆ. ಬೆಂಗಳೂರಿನ ಸೌಂದರ್ಯ, ನಗರವನ್ನು ನೋಡಿ ಖುಷಿ ಪಟ್ಟಿದ್ದಾರೆ. ಬೆಂಗಳೂರಿನ ಒಂದೊಂದು ಪ್ರವಾತಿ ತಾಣಕ್ಕೆ ತೆರಳುವಾಗ ಒಂದೊಂದು ಅನುಭವವಾಗಿದೆ.  ಇದರಲ್ಲಿ ಬೆಂಗಳೂರು ಪ್ಯಾಲೇಸ್ ನೋಡಲು ಹೋದ ಘಟನೆ ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ಮೃತ್ಯಂಜಯ್ ಸರ್ದಾರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಂಕ್‌ ಕಾಲ್‌ ಮಾಡಿ ರ್ಯಾಪಿಡೋ ಚಾಲಕನನ್ನು ಕರೆಸಿ, ಥಳಿಸಲು ಮುಂದಾದ ಆಟೋ ಚಾಲಕರು

ಬಾಂಗ್ಲಾ ಜೋಡಿಗಳನ್ನು ನೋಡಿ ಬಾಯಿಗೆ ಬಂದ ರೇಟ್ ಹೇಳಿ ಕೈಯಲ್ಲಿದ್ದ ದುಡ್ಡ ಒಂದೆರಡು ಕೀಲೋಮೀಟರ್ ಆಟೋಗೆ ನೀಡಿದ ಅನುಭವ ಆಗಿತ್ತು. ಹೀಗಾಗಿ  ಈ ಜೋಡಿ ಆಟೋ ರಿಕ್ಷಾ ಹತ್ತುವ ಮುನ್ನವೇ ಮೀಟರ್ ಹಾಕುವಂತೆ ಸೂಚಿಸಲು ನಿರ್ಧರಿಸಿದ್ದರು. ಆಟೋ ಚಾಲಕನ ಬಳಿ ಬಂದು ಬೆಂಗಳೂರು ಅರಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಆಟೋ ಚಾಲಕರ ಮತ್ತದೇ ರಾಗ, ಬರುವಾಗ ಖಾಲಿ ಬರ್ಬೇಕು,  1,000 ರೂಪಾಯಿ ಕೊಡಿ, ಅಷ್ಟು ಕೊಡಿ ಎಂದಿದ್ದಾರೆ. ಆದರೆ ಇದ್ಯಾವುದಕ್ಕೂ ಒಪ್ಪದ ಈ ಜೋಡಿ, ಮೀಟರ್ ಹಾಕಿ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಒಬ್ಬಆಟೋ ಚಾಲಕ ಒಪ್ಪಿದ್ದಾನೆ. ಮೀಟರ್ ಹಾಕಿ ಒಂದೆರೆಡು ರೌಂಡ್ ಸುತ್ತಾಡಿಸಿ ಬೆಂಗಳೂರು ಅರಮನೆಗೆ ಕರೆದುಕೊಂಡು ಹೋಗಿದ್ದಾನೆ. ಮೀಟರ್ ನೋಡಿದ ಬಾಂಗ್ಲಾದೇಶ ಬ್ಲಾಗರ್ 320 ರೂಪಾಯಿ ಚಾರ್ಜ್ ಆಗಿರುವುದನ್ನು ಗಮನಿಸಿದ್ದಾನೆ. ಹೀಗಾಗಿ  ತನ್ನಲ್ಲಿರುವ 5,000 ರೂಪಾಯಿ ನೋಟು ನೀಡಿದ್ದಾನೆ. ಆದರೆ ಆಟೋ ಚಾಲಕ ಇಲ್ಲಿ ಕೈಚಳಕ ತೋರಿದ್ದಾನೆ. ಬಾಂಗ್ಲಾ ಬ್ಲಾಗರ್ ನೀಡಿದ 500 ರೂಪಾಯಿ ನೋಟನ್ನು ಮೆಲ್ಲನೇ ತೋಳಿನ ಒಳಕ್ಕೆ ತಳ್ಳಿದ ಚಾಲಕ, 100 ರೂಪಾಯಿ ಕೈಯಲ್ಲಿ ಹಿಡಿದು ಮೀಟರ್ ಚಾರ್ಜ್ 320  ರೂಪಾಯಿ ಆಗಿದೆ ಎಂದಿದ್ದಾನೆ. 

 

 

ನೀವು 100 ರೂಪಾಯಿ ಕೊಟ್ಟಿದ್ದೀರಿ ಎಂದು ಯಾಮಾರಿಸಿದ್ದಾನೆ. ತಕ್ಷಣವೇ 100 ರೂಪಾಯಿ ಪಡೆದು ಮತ್ತೊಂದು 500 ರೂಪಾಯಿ ನೋಟು ನೀಡಿದ್ದಾನೆ.  ಈ ವೇಳೆ ಚಾಲಕ 20 ರೂಪಾಯಿ ಚಿಲ್ಲರೆ ಇದೆಯಾ, ನನ್ನ ಬಳಿಕ ಚೇಂಜ್ ಇಲ್ಲ ಎಂದಿದ್ದಾನೆ. ಇವೆಲ್ಲವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಆಟೋ ಚಾಲಕ ಎಷ್ಟು ರೂಪಾಯಿ ಚೇಂಜ್ ನೀಡಿದ್ದಾನೆ ಅನ್ನೋ ಕುರಿತ ಮಾಹಿತಿ ಇಲ್ಲ.

ಬುಕ್ ಮಾಡಿದ ರೈಡ್ ಕ್ಯಾನ್ಸಲ್ ಮಾಡಿ, ಹೆಚ್ಚುವರಿ 100ರೂ ಕೇಳಿದ ಓಲಾ ಆಟೋ ಚಾಲಕ!

320 ರೂಪಾಯಿ ಆಟೋ ಚಾರ್ಜ್ ಬದಲು ಸರಿಸುಮಾರು 1,000 ರೂಪಾಯಿ ಕಿತ್ಕೊಂಡು ಬಾಂಗ್ಲಾದೇಶದ ಜೋಡಿಗಳನ್ನು ಕಳುಹಿಸಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ಆಟೋ ಚಾಲಕನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!